Advertisement
ಈ ಮೂಲಕ ಹೊಸತನ್ನು ಕಲಿಯುತ್ತಿದ್ದಾರೆ. ಹಲವರು ತಮ್ಮ ಪ್ರತಿಭಾ ಪ್ರದರ್ಶನದಿಂದ ಸದ್ದಿಲ್ಲದೇ ಮನೆ ಮಾತಾಗುತ್ತಿದ್ದಾರೆ. ಇದೀಗ ಇಂತಹದೇ ಒಂದು ಘಟನೆ ಅಮೆರಿಕದಲ್ಲಿ ನಡೆದಿದೆ. ಲಾಕ್‌ಡೌನ್‌ನಿಂದಾಗಿ ಅಪಾರ್ಟ್‌ಮೆಂಟ್‌ನೊಳಗೆ ಬಂದಿಯಾಗಿದ್ದ ನಿವೃತ್ತ ವಕೀಲರೊಬ್ಬರು ಇದ್ದಕ್ಕಿದ್ದಂತೆ ಗಾಯಕರಾಗಿದ್ದಾರೆ.
ಇಲ್ಲಿನ ಬ್ರೂಕ್ಲಿನ್ ಬ್ರೌನ್ ಸ್ಟೋನ್ ಅಪಾರ್ಟ್‌ಮೆಂಟ್‌ನಲ್ಲಿ ಸಿಲುಕಿಕೊಂಡಿದ್ದ ಪಾಲ್ ಸ್ಟೈನ್ ಎನ್ನುವ ವ್ಯಕ್ತಿಯ ಅದೃಷ್ಟ ಬದಲಾಗಿದ್ದು, ತಮ್ಮ ಗಾಯನ ಪ್ರತಿಭೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪಾಲ್ ನಿವೃತ್ತ ವಕೀಲ ಹಾಗೂ ರಾಜಕೀಯ ಕಾರ್ಯಕರ್ತರಾಗಿದ್ದು, ಟಿವಿಯಲ್ಲಿ ಇಟಲಿ ಹಾಗೂ ಫ್ರಾ®Õ…ನ ಜನರು ತಮ್ಮ ಮನೆಯ ಬಾಲ್ಕನಿಯಲ್ಲೇ ನಿಂತು ಹಾಡುವುದು, ಚಪ್ಪಾಳೆ ತಟ್ಟುವುದನ್ನು ನೋಡಿದ್ದರು. ಈ ನಡೆಯಿಂದ ಪ್ರೇರಿತರಾದ ಪಾಲ್ ಸ್ಟೈನ್, ತಮ್ಮ ಮನೆಯ ಮೆಟ್ಟಿಲುಗಳನ್ನೇ ವೇದಿಕೆ ಮಾಡಿಕೊಂಡು ಹಾಡಲು ಆರಂಭಿಸಿದ್ದಾರೆ. ಆರೋಗ್ಯ ಸಿಬಂದಿಗೆ ಕೃತಜ್ಞತೆ
ಪ್ರತಿ ನಿತ್ಯ 7 ಗಂಟೆಯಾದರೆ ಸಾಕು. ಮನೆಯ ಮೆಟ್ಟಿಲ ಮೇಲೆ ನಿಂತು ಹಾಡಲು ಶುರು ಮಾಡುವ ಪಾಲ್, ತಮ್ಮ ಹಾಡಿನ ಮೂಲಕ ಆರೋಗ್ಯ ಸಿಬಂದಿ ಮತ್ತು ಕಾರ್ಮಿಕರಿಗೆ ಕೃತಜ್ಞತೆಯನ್ನೂ ಸಲ್ಲಿಸುತ್ತಿದ್ದಾರೆ. ಕಳೆದ ವಾರ ಪಾಲ್ ಸುಮಾರು 45 ನಿಮಿಷಗಳ ಕಾಲ ಸುದೀರ್ಘವಾಗಿ ಹಾಡಿ ಜನರನ್ನು ರಂಜಿಸಿದ್ದು, ಇವರ ಈ ನೂತನ ಪ್ರಯತ್ನಕ್ಕೆ ಖುಷಿಯಾದ ನೆರೆಹೊರೆಯವರು ಪಾಲ್ ಹಾಡುತ್ತಿರಬೇಕಾದರೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಹೀಗೆ, ಪ್ರತಿ ನಿತ್ಯ ಹಾಡಲು ಪ್ರಾರಂಭಿಸಿದ ಅವರು, ತಮ್ಮ ನೆರೆಹೊರೆಯವರು ಅಷ್ಟೇ ಅಲ್ಲದೆ, ರಸ್ತೆಯಲ್ಲಿ ಓಡಾಡುವ ಜನರಿಗೂ ಮನೋರಂಜನೆ ನೀಡಿ ಚಪ್ಪಾಳೆ ಗಿಟ್ಟಿಸತೊಡಗಿದ್ದಾರೆ.