Advertisement
ರಾಜ್ಯ ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ್ದ ಪಾಲಿಕೆಯ ಅಂತಿಮ ಮೀಸಲು ಪಟ್ಟಿಯ ವಿರುದ್ಧ ಕೆಲವರು ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದರು. ವಿಚಾ ರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಹೊಸ ಮೀಸಲು ಪಟ್ಟಿ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಆದರೆ ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ರಾಜ್ಯ ಸರಕಾರ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ವಿಚಾರಣೆ ನಡೆದು ಈಗ ಸರಕಾರದ ಮೀಸಲಾತಿ ಸರಿಯಿದೆ ಎಂದು ನ್ಯಾಯಾಲಯ ತಿಳಿಸಿದೆ.
Related Articles
ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಲಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಡ್‌ನಿಂದ ಹೊರಬಂದ ಮಾಜಿ ಕಾರ್ಪೊರೇಟರ್‌ಗಳು ಇದೀಗ ತಮ್ಮ ವಾರ್ಡ್ ಮೀಸಲಾತಿಯ ಆಧಾರದಲ್ಲಿ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಎದುರಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
Advertisement
ಮಹಾನಗರ ಪಾಲಿಕೆಯ ಪರಿಷತ್‌ನ ಈ ಅವಧಿಯ ಆಡಳಿತ ಮಾ. 7ರಂದು ಕೊನೆಗೊಂಡಿದ್ದು, ನೂತನ ಅವಧಿಗೆ ನಿಗದಿಪಡಿಸಿರುವ ಮೀಸಲಾತಿಯನ್ನು ಪ್ರಶ್ನಿಸಿ ಕೆಲವು ಮಂದಿ ನ್ಯಾಯಾಲಯದ ಮೇಟ್ಟಲೇರಿದ್ದು, ಈ ಮೀಸಲಾತಿ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿದ ಪರಿಣಾಮ ಈ ಬಾರಿಯ ಚುನಾವಣೆ ಮುಂದಕ್ಕೆ ಹೋಗಿತ್ತು. ಪ್ರಸ್ತುತ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.
ಶೀಘ್ರ ಪಕ್ಷದ ಪ್ರಮುಖರ ಸಭೆ
ಮನಪಾ ಮೀಸಲಾತಿ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುತ್ತೇವೆ. ತೀರ್ಪಿನ ಕುರಿತು ಶೀಘ್ರ ಪಕ್ಷದ ಪ್ರಮುಖರ ಜತೆಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗು ವುದು. ಯಾವ ಕ್ಷಣದಲ್ಲಿ ಚುನಾ ವಣೆ ಎದುರಾದಾಗ ಅದನ್ನು ಎದುರಿಸಲು ಸಿದ್ಧವಿ ದ್ದೇವೆ.
– ವೇದವ್ಯಾಸ ಕಾಮತ್, ಶಾಸಕರು
ತೀರ್ಪು ಸ್ವಾಗತಾರ್ಹ
ಈಗಾಗಲೇ ಪಾಲಿಕೆಗೆ ಸರಕಾರ ಮಾಡಿದ ಮೀಸಲಾತಿ ನಿಯಮ ಸರಿ ಇದೆ ಎಂದು ನ್ಯಾಯಾಲಯ ನೀಡಿದ ತೀರ್ಪನ್ನು ಸ್ವಾಗತಿಸುತ್ತೇವೆ. ಮೀಸಲಾತಿಯ ಪ್ರಕಾರ ಯಾವುದೇ ಸಂದರ್ಭ ಚುನಾವಣೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ.
– ಎಂ. ಶಶಿಧರ ಹೆಗ್ಡೆ,ಮಾಜಿ ಮೇಯರ್ ಮನಪಾ