ಬೆಂಗಳೂರು: ಡ್ರೀಮ್ಸ್ ಇಂಡಿಯಾ ಇನ್ ಫ್ರಾ ಇಂಡಿಯಾ ಲಿ, ಟಿಜಿಎಸ್ ಸೇರಿದಂತೆ ಮೂರು ರಿಯಲ್ ಎಸ್ಟೇಟ್ ಸಂಸ್ಥೆಗಳ ಹೆಸರಿನಲ್ಲಿ ಸಾವಿರಾರು ಗ್ರಾಹಕರಿಗೆ ನೂರಾರು ಕೋಟಿ ರೂ. ವಂಚಿಸಿದ ಪ್ರಕರಣ ಸಂಬಂಧ ಸಿಐಡಿ ಅಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸಾರ್ವಜನಿಕರಿಂದ ವಂಚನೆ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ನಡುವೆ ಸರಕಾರ ಆರೋಪಿಗಳ ಆಸ್ಥಿ ಮುಟ್ಟುಗೋಲಿಗೆ ಆದೇಶಿಸಿದೆ.
ಭಾರೀ ಪ್ರಮಾಣದ ಈ ವಂಚನೆ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿಗೆ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಸಿಐಡಿ ಹಿರಿಯ ಅಕಾರಿಗಳು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮೂವರು ಡಿವೈಎಸ್‌ಪಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಈಗಾಗಲೇ ಡ್ರೀಮ್ಸ್ ಇಂಡಿಯಾ ಇನ್‌ಫ್ರಾ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಅನೂಪ್‌ನನ್ನು ಬಂಸಿ ವಿಚಾರಣೆ ನಡೆಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಮಾಹಿತಿಗೆ: ವಂಚಕ ಸಂಸ್ಥೆಗಳಲ್ಲಿ ಹಣ ತೊಡಗಿಸಿರುವ ಗ್ರಾಹಕರು ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಸಿಐಡಿ ಕಚೇರಿಯಲ್ಲಿ ವಿಶೇಷ ಸೆಲ್ ತೆರೆಯಲಾಗಿದೆ. ದೂರವಾಣಿ ಮೂಲಕ (080-22094451) ಸಾರ್ವಜನಿಕರು ಮಾಹಿತಿ ನೀಡಬಹುದು. ಅಲ್ಲದೇ, ಕಂಪನಿ ಹಾಗೂ ನಿರ್ದೇಶಕರು ಹೊಂದಿರುವ ಸ್ಥಿರಾಸ್ತಿ, ಚರಾಸ್ಥಿ, ಬ್ಯಾಂಕ್ ಖಾತೆಗಳ ವಿವರಗಳನ್ನು ಸಾರ್ವಜನಿಕರು ಗುಪ್ತವಾಗಿ ಇ-ಮೇಲ್ ಮೂಲಕ (alertcid@ksp.gov.in) ಕಳುಹಿಸಬಹುದು.
ಡ್ರೀಮ್ಸ್ ಇಂಡಿಯಾ ಇನ್‌ಫ್ರಾ ಇಂಡಿಯಾ ಲಿ, ಟಿಜಿಎಸ್ ಕನ್‌ಸ್ಟ್ರಕ್ಷನ್ ಪ್ರç.ಲಿ, ಗೃಹ ಕಲ್ಯಾಣ ಪ್ರç.ಲಿ ಹೆಸರಿನಲ್ಲಿ ನಕಲಿ ರಿಯಲ್ ಎಸ್ಟೇಟ್ ಸಂಸ್ಥೆಗಳನ್ನು ಸ್ಥಾಪಿಸಿ, ಮಾದ್ಯಮಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ನೀಡಿ, ಸಾವಿರಾರು ಮಂದಿಯನ್ನು ನಂಬಿಸಿ ಕೋಟ್ಯಾಂತರ ರೂ. ಸಂಗ್ರಹಿಸಲಾಗಿತ್ತು. ಕಡೆಗೆ ನಿವೇಶನ ನೀಡದೆ ಹಾಗೂ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದರು. ಈ ಸಂಬಂಧ ಮಡಿವಾಳ ಠಾಣೆಯೊಂದರಲ್ಲೇ 82 ವಂಚನೆ ಮೊಕದ್ದಮೆಗಳು ದಾಖಲಾಗಿದ್ದವು.
ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಸಚಿನ್ ನಾಯಕ್ ಸೇರಿ 13 ಮಂದಿಯನ್ನು ಪೊಲೀಸರು ಬಂಸಿದ್ದರು. ಪ್ರಕರಣ ಪ್ರಮುಖ ಆರೋಪಿ ಸಚಿನ್ ನಾಯಕ್ (39) ಮಹರಾಷ್ಟ್ರ ಮೂಲದವನಾಗಿದ್ದು, 3-4 ಹೆಸರುಗಳ ಮೂಲಕ ವಂಚನೆ ಮಾಡುತ್ತಿದ್ದ. ನಂತರ ತನ್ನ ಪತ್ನಿಯರಾದ ದಿಶಾ ಚೌಧರಿ ಹಾಗೂ ಮಂದೀಪ್ ಕೌರ್ ಹೆಸರಿನಲ್ಲಿ ಎರಡು ರಿಯಲ್ ಎಸ್ಟೇಟ್ ಕಂಪನಿಗಳು ಹಾಗೂ ಮಜೂಂದಾರ್ ಸತಪರ್ಣಿ ಎಂಬುವವರ ಹೆಸರಿನಲ್ಲಿ ಮತ್ತೂಂದು ಸಂಸ್ಥೆ ಸ್ಥಾಪಿಸಿ ಸಾವಿರಾರು ಮಂದಿಗೆ ವಂಚಿಸಿದ್ದ.