Advertisement

ವಾಟ್ಸ್‌ಆ್ಯಪ್‌ನಲ್ಲಿ ಸಮನ್ಸ್‌ ಜಾರಿ ಮಾಡಿದ ಕೋರ್ಟ್‌!

03:45 AM Apr 09, 2017 | Team Udayavani |

ಚಂಡೀಗಢ‌: ಭಾರತದಲ್ಲಿ ಕೋರ್ಟ್‌ ಸಮನ್ಸ್‌ಗಳನ್ನು ರಿಜಿಸ್ಟರ್ಡ್‌ ಪೋಸ್ಟ್‌ ಮೂಲಕ ಕಳುಹಿಸುವುದು ಗೊತ್ತು. ವಾಟ್ಸ್‌ಆ್ಯಪ್‌ ಮೂಲಕ ಸಮನ್ಸ್‌ ಜಾರಿ ಮಾಡಿದ್ದನ್ನು ಎಲ್ಲಾದರೂ ಕೇಳಿದ್ದೀರಾ? 

Advertisement

ಇದೇ ಮೊದಲ ಬಾರಿಗೆ ಹರ್ಯಾಣದ ನ್ಯಾಯಾ ಲಯವೊಂದು ಇಂತಹ ಸಾಹಸಕ್ಕೆ ಕೈಹಾಕಿದೆ. ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ನೇತೃತ್ವದ ಹಣಕಾಸು ಆಯುಕ್ತರ ನ್ಯಾಯಾಲಯವು ಈ ಆದೇಶ ನೀಡಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೂವರು ಸಹೋದರರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಪೈಕಿ ಒಬ್ಬ ಹಿಸಾರ್‌ ಜಿಲ್ಲೆಯಲ್ಲಿದ್ದ ತನ್ನ ಮನೆಯನ್ನು ಖಾಲಿ ಮಾಡಿ ಕಠ್ಮಂಡುವಿಗೆ ಹೋಗಿ ನೆಲೆಸಿದ್ದ. 

ಆತನ ಮೊಬೈಲ್‌ ಸಂಖ್ಯೆಯನ್ನು ಅರ್ಜಿದಾರರು ನ್ಯಾಯಾಲ ಯಕ್ಕೆ ಒದಗಿಸಿದ್ದರು. ಸಮನ್ಸ್‌ ಜಾರಿ ಮಾಡಲೆಂದು ಆತನಿಗೆ ಕರೆ ಮಾಡಿ ವಿಳಾಸ ಕೇಳಿದರೆ, ಆತ ಯಾವ ಕಾರಣಕ್ಕೂ ವಿಳಾಸ ನೀಡಲ್ಲ ಎಂದು ಕುಳಿತುಬಿಡುವುದೇ? ಇದರಿಂದ ಕೋಪಗೊಂಡ ನ್ಯಾಯಾಲಯವು, “ವಿಳಾಸವಿಲ್ಲದಿದ್ದರೆ ಪರವಾಗಿಲ್ಲ. ಮೊಬೈಲ್‌ ನಂಬರ್‌ ಇದೆಯಲ್ಲ.  ವಾಟ್ಸ್‌ಆ್ಯಪ್‌ ಮೂಲಕವೇ ಸಮನ್ಸ್‌ ಜಾರಿ ಮಾಡುತ್ತೇವೆ,’ ಎಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next