Advertisement
ಆ. 1ರಂದು ನೀಡಿದ್ದ ತೀರ್ಪಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ 7 ನ್ಯಾಯಮೂರ್ತಿಗಳ ಪೀಠವು ಸ್ಪಷ್ಟವಾಗಿ ಹೇಳಿದೆ. ತೀರ್ಪು ಮರುಪರಿಶೀಲನೆಗೆ ಕೋರಿದ್ದ ಅರ್ಜಿಗಳನ್ನು ಪರಿಶೀಲಿಸಲಾಗಿದೆ.
7 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಆಗಸ್ಟ್ 1ರಂದು 6:1ರಂತೆ ತೀರ್ಪು ನೀಡಿ, ಒಳ ಮೀಸಲಾತಿ ಕೈಗೊಳ್ಳಲು ಅನುಮತಿ ನೀಡಿದ್ದವು. ಎಸ್‌ಸಿ, ಎಸ್‌ಟಿಗಳಲ್ಲೇ ಅತಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇವೆ ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು. 7 ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪು ಪ್ರಕಟಿಸಿದ್ದು, ನ್ಯಾ| ಬೇಲಾ ತ್ರಿವೇದಿ ಅವರು ಮಾತ್ರ ಒಳ ಮೀಸಲಾತಿಯನ್ನು ವಿರೋಧಿಸಿದ್ದರು. ಇದೇ ವೇಳೆ ಪೀಠವು 2004ರ ಇ.ವಿ. ಚಿನ್ನಯ್ಯ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ತಳ್ಳಿ ಹಾಕಿತ್ತು.
Related Articles
ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇವೆ ಎಂದು ಆ. 1ರಂದು ತೀರ್ಪು ನೀಡಿದ್ದ ಸುಪ್ರೀಂ
ತೀರ್ಪು ಮರುಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ 10 ಅರ್ಜಿಗಳ ಸಲ್ಲಿಕೆ
ಆ ತೀರ್ಪಿನಲ್ಲಿ ಯಾವುದೇ ಲೋಪವಿಲ್ಲ. ಅದು ಸರಿಯಾಗಿಯೇ ಇದೆ ಎಂದ ನ್ಯಾಯಪೀಠ
Advertisement