Advertisement
ನಗರದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನ ಕೋವಿಡ್ ದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಉದ್ಭವವಾಗಿರುವ ಆರ್ಥಿಕ ಸಮಸ್ಯೆ, ಉತ್ಪಾದನಾ ಕ್ಷೇತ್ರದ ಸವಾಲುಗಳ ಬಗ್ಗೆ ಚರ್ಚೆ ನಡೆಸಬೇಕಾದ ಪ್ರಮುಖ ವಿಪಕ್ಷ ಕಾಂಗ್ರೆಸ್ ದೇಶದ ಜನರ ಹಿತವನ್ನು ಕಡೆಗಣಿಸಿದೆ. ಪಾರ್ಲಿಮೆಂಟ್ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಲಾಗದೆ ಗದ್ದಲ, ಗೋಜಲುಗಳಿಗೆ ಎಡೆಮಾಡಿಕೊಂಡು ಸಂವಿಧಾನಕ್ಕೆ ವಿರೋಧವಾಗಿ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.
Related Articles
Advertisement
ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿ: ಬಿಜೆಪಿ ಜಿಲ್ಲಾ ವಕ್ತಾರ ಕೊಪ್ಪಳ್ ನಾಗರಾಜ್ ಮಾತನಾಡಿ, ಪ್ರಧಾನಿ ನೇತೃತ್ವದಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಕೋವಿಡ್ ನಿರ್ವಹಣೆಯ ಚಟುವಟಿಕೆಗಳು ಜಗತ್ತಿನಲ್ಲೇ ಮಾದರಿ ಎನಿಸಿಕೊಂಡಿ ರುವುದು ವಾಸ್ತವ. ಸುಪ್ರೀಂ ಕೋರ್ಟಿನ ಸಲಹೆ ಮತ್ತು ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಅನುಸರಿಸಿದ್ದು, ಕೋವಿಡ್ ಮಹಾಮಾರಿ ನಿರ್ವಹಣೆಯಲ್ಲಿ ಯಶಸ್ಸನ್ನು ಗಳಿಸಿದೆಎಂದರು. ಕೋವಿಡ್ ಸಾಂಕ್ರಾಮಿಕದಿಂದ ಹಲವಾರು ದೇಶಗಳು ಆರ್ಥಿಕವಾಗಿ ನೆಲಕಚ್ಚಿರುವ ಸಂದರ್ಭದಲ್ಲಿ ಹಲವಾರು ಸಂಕಷ್ಟಗಳು ಮತ್ತು ಸವಾಲುಗಳ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಾಯಕ ನಾಯಕತ್ವದಲ್ಲಿ ಭಾರತವು ಕೋವಿಡ್ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಕೈಗೊಂಡಿ ರುವ ಕ್ರಾಂತಿಕಾರಿ ನಿರ್ಣಯ ಅಭೂತ ಪೂರ್ವವಾಗಿದ್ದು ಜಗತ್ತಿನಲ್ಲೇ ಶ್ಲಾಘಿಸಲ್ಪಟ್ಟಿರುವುದು ಸ್ವಾಗತಾರ್ಹ ಬೆಳೆವಣಿಗೆ ಎಂದರು.
ಲಸಿಕಾ ಕಾರ್ಯಕ್ರಮ: ಕೋವಿಡ್ ಪರೀಕ್ಷೆ, ಯುಧ್ದೋಪಾದಿಯಲ್ಲಿಸೇನಾ ವಿಮಾನಗಳು, ಯುದ್ಧನೌಕೆಗಳು ಮತ್ತು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಆಮ್ಲಜನಕದ ಸರಬರಾಜು, ಆಮ್ಲಜನಕ ಸ್ಥಾವರಗಳ ನಿರ್ಮಾಣ, ಆಮ್ಲಜನಕದ ಸಾಂದ್ರಕ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ವೈದ್ಯಕೀಯ ನೆರವು, ವಿಶ್ವದಲ್ಲೇ ದಾಖಲೆ ಎನಿಸಿರುವ ಲಸಿಕಾಕಾರ್ಯಕ್ರಮ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ವನ್ನು ಹತೋಟಿಗೆತರುವಲ್ಲಿ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಕೊಪ್ಪಳ್ ನಾಗರಾಜ್, ಮಾಧ್ಯಮ ವಕ್ತಾರ ಶಿವಕುಮಾರ್, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರೇಮಾ ಹೆಗ್ಡೆ ಇದ್ದರು.
ವಿಪಕ್ಷಗಳು ನಡೆಸಿರುವಕೃತ್ಯಗಳು ಸರಿಯಲ್ಲ
ಕಾಂಗ್ರೆಸ್‌ಗೆ ಸದನದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಸರ್ಕಾರದಿಂದ ಜನಸಾಮಾನ್ಯರ ಪರವಾಗಿ ಸ್ಪಷ್ಟ ಉತ್ತರ ಪಡೆಯುವ ಎಲ್ಲ ಅವಕಾಶಗಳಿದ್ದರೂ, ಸದನಗೊಳಗೆ ಗದ್ದಲ, ಗಲಾಟೆ ಮತ್ತು ಅಸಂವಿಧಾನಿಕ ಪ್ರಕ್ರಿಯೆಗಳ ಮೂಲಕ ವಿಪಕ್ಷಗಳು ನಡೆಸಿರುವ ಕೃತ್ಯಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಮಾಡಿರುವ ದ್ರೋಹ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಆಕ್ರೋಶ ವ್ಯಕ್ತಪಡಿಸಿದರು.