ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೇ ಇನ್ನು ಮುಂದೆ ಎಟಿಎಂನಲ್ಲಿ ನಗದು ವಿತ್‌ಡ್ರಾ ಮಾಡಬಹುದು! ಇಂಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ “ಯುಪಿಐ ಎಟಿಎಂ’ ಈಗ ಚಾಲ್ತಿಗೆ ಬಂದಿದೆ. ಇದನ್ನು ಬಳಸಿಕೊಂಡು ನೀವು ಸುರಕ್ಷಿತವಾಗಿ ನಗದನ್ನು ಪಡೆಯ ಬಹುದು.
ಯಾರಿಂದ ಸ್ಥಾಪನೆ?
ಜಪಾನ್‌ನ ಹಿಟಾಚಿ ಲಿ.ನ ಅಂಗ ಸಂಸ್ಥೆಯಾದ ಹಿಟಾಚಿ ಪೇಮೆಂಟ್ ಸರ್ವಿಸಸ್, ಭಾರತದ ಎನ್‌ಪಿಸಿಐ (ನ್ಯಾಶನಲ್ ಪೇಮೆಂಟ್ ಕಾರ್ಪೊ ರೇಶನ್ ಆಫ್ ಇಂಡಿಯಾ) ಸಹ ಭಾ ಗಿತ್ವದಲ್ಲಿ “ಹಿಟಾಚಿ ಮನಿ ಸ್ಪಾಟ್ ಯುಪಿಐಎ ಎಟಿಎಂ’ ಅನ್ನು ವೈಟ್ ಲೇಬಲ್ ಎಟಿಎಂ (ಡಬ್ಲ್ಯುಎಲ್‌ಎ) ಆಗಿ ಅನಾವರಣಗೊಳಿಸಿದೆ.
ಹಣ ವಿತ್‌ಡ್ರಾ ಮಾಡುವುದು ಹೇಗೆ?
ಎಟಿಎಂನ ಒಳಗೆ ಹೋದಾಗ ನಿಮ್ಮ ಮುಂದೆ ಟಚ್ ಪ್ಯಾನೆಲ್‌ವೊಂದು ಕಾಣಿಸುತ್ತದೆ.
“ವೆಲ್‌ಕಂ ಟು ಯುಪಿಐ ಎಟಿಎಂ’ ಎಂದೂ, ಕೆಳಭಾಗದ ಬಲಮೂಲೆಯಲ್ಲಿ “ಯುಪಿಐ ಕಾರ್ಡ್‌ಲೆಸ್ ಕ್ಯಾಶ್’ ಎಂದು ಬರೆದಿರುತ್ತದೆ.
“ಕಾರ್ಡ್‌ಲೆಸ್ ಕ್ಯಾಶ್’ ಎಂದಿರುವಲ್ಲಿ ಟಚ್ ಮಾಡಿದರೆ ಹೊಸ ವಿಂಡೋ ತೆರೆಯುತ್ತದೆ.
ಪರದೆ ಕ್ಯುಆರ್ ಕೋಡ್ ಮೂಡುತ್ತದೆ. ಅಲ್ಲಿ, ಯಾವುದಾದರೂ ಯುಪಿಐ ಆ್ಯಪ್ ಬಳಸಿಕೊಂಡು ಸ್ಕ್ಯಾನ್ ಮಾಡಿ
ಅನಂತರ ಬ್ಯಾಂಕ್ ಖಾತೆಯನ್ನು ದೃಢೀಕರಿಸಿ, ಯುಪಿಐ ಪಿನ್ ಒತ್ತಿದರೆ ಹಣ ಬರುತ್ತದೆ.
ಏನಿದರ ಅನುಕೂಲ?
ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹಿಡಿದುಕೊಂಡು ಹೋಗದೆಯೂ ನೀವು ಯುಪಿಐ ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡಬಹುದು. ಯುಪಿಐ ಆ್ಯಪ್ ಮೂಲಕವೇ ಗ್ರಾಹಕರು ಬೇರೆ ಬೇರೆ ಖಾತೆಗಳಿಂದ ಹಣ ಪಡೆಯಬಹುದು. ಬ್ಯಾಂಕಿಂಗ್ ಸೌಲಭ್ಯವಿಲ್ಲದ, ಎಟಿಎಂ ಕೇಂದ್ರಗಳು ಕಡಿಮೆಯಿರುವಂಥ ಪ್ರದೇಶಗಳ ಜನರಿಗೆ ಹೆಚ್ಚು ಅನುಕೂಲ. ಎಟಿಎಂನೊಳಗೆ ಸಾಧನ ಅಳವಡಿಸಿ, ಕಾರ್ಡ್‌ಗಳ ಮಾಹಿತಿ ಕದ್ದು ಹಣ ಕೊಳ್ಳೆ ಹೊಡೆಯುವುದಕ್ಕೆ ತಡೆ.