Advertisement
50 ಮೀ. ವ್ಯಾಪ್ತಿಕಡಿಮೆ ತೂಕದ 0.32 ಬೋರ್ ರಿವಾಲ್ವರ್ ಆಗಿರುವ “ಪ್ರಬಲ್’ನಿಂದ ಹಾರಿಸಿದ ಗುಂಡು 50 ಮೀಟರ್‌ವರೆಗಿನ ಗುರಿಯನ್ನು ನಿಖರವಾಗಿ ತಲುಪುತ್ತದೆ. ಜತೆಗೆ ಭಾರತದಲ್ಲಿ ತಯಾ ರಿಸಲಾದ ಸೈಡ್ ಸ್ವಿಂಗ್ ಸಿಲಿಂಡರ್ ಹೊಂದಿ ರುವ ಮೊದಲ ರಿವಾಲ್ವರ್ ಇದು.
ಈ ಹಿಂದಿನ ಆವೃತ್ತಿಯ ರಿವಾಲ್ವರ್‌ಗಳಲ್ಲಿ ಕಾಟ್ರಿìಜ್‌ಗಳನ್ನು ಸೇರಿಸಲು ರಿವಾಲ್ವರ್‌ನ ಫೈರ್‌ಆರ್ಮನ್ನು ಮಡಚಬೇಕಿತ್ತು. ಪ್ರಬಲ್‌ನಲ್ಲಿ ಸೈಡ್ ಸ್ವಿಂಗ್ ಸಿಲಿಂಡರ್ ಅಳವಡಿಸಲಾಗಿದೆ ಎಂದು ಎಡಬ್ಲ್ಯುಇಐಎಲ್ ನಿರ್ದೇಶಕ ಎ.ಕೆ. ಮೌರ್ಯ ಹೇಳಿದ್ದಾರೆ. “ಪ್ರಬಲ್’ ಭಾರತದಲ್ಲಿ ತಯಾರಾದ ರಿವಾಲ್ವರ್‌ಗಳ ಪೈಕಿ ಅತೀ ದೀರ್ಘ ವ್ಯಾಪ್ತಿಯದಾಗಿದೆ. ದೇಶದಲ್ಲಿ ಈಗ 20 ಮೀ. ವರೆಗಿನ ವ್ಯಾಪ್ತಿಯ ರಿವಾಲ್ವರ್‌ಗಳು ಮಾತ್ರ ಲಭ್ಯವಿವೆ. 700 ಗ್ರಾಂ ತೂಕ
“ಪ್ರಬಲ್’ ಕಡಿಮೆ ತೂಕ ಹೊಂದಿದ್ದು, ಕಾಟ್ರಿಜ್ ಹೊರತುಪಡಿಸಿ ಇದರ ತೂಕ 700 ಗ್ರಾಂ ಮಾತ್ರ. ಇದರ ಬ್ಯಾರೆಲ್ ಉದ್ದ 76 ಮಿ.ಮೀ. ಹಾಗೂ ರಿವಾಲ್ವರ್‌ನ ಒಟ್ಟು ಉದ್ದ 177.6 ಮಿ.ಮೀ. ಮಹಿಳೆಯರು ಕೂಡ ಇದನ್ನು ಸುಲಭವಾಗಿ ತಮ್ಮ ಬ್ಯಾಗ್‌ಗಳಲ್ಲಿ ಕೊಂಡೊಯ್ಯಬಹುದಾಗಿದೆ.