Advertisement

ದೇಶದ ಮೊದಲ 3ಡಿ ಪ್ಲಾನೆಟೋರಿಯಂ

11:52 AM Jan 23, 2018 | |

ಮಹಾನಗರ: ಪಿಲಿಕುಳದ ಡಾ| ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಭಾರತದ ಪ್ರಪ್ರಥಮ ಅತ್ಯಾಧುನಿಕ 3ಡಿ, 8ಕೆ ಯುಎಚ್‌ಡಿ ಸಹಿತ ಹೈಬ್ರಿಡ್‌ ತಂತ್ರಜ್ಞಾನದ ತಾರಾಲಯ ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ.

Advertisement

ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಅನುದಾನದಿಂದ 35.69 ಕೋ.ರೂ. ಅಂದಾಜು ವೆಚ್ಚದಲ್ಲಿ ಸ್ವಾಮಿ ವಿವೇಕಾನಂದ ತಾರಾಲಯ ನಿರ್ಮಾಣ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು, ಸುಣ್ಣ ಬಣ್ಣ, ಟೈಲ್ಸ್‌ ಕಾಮಗಾರಿ ಅಂತಿಮ ಸ್ಪರ್ಶ ನಡೆಯುತ್ತಿದೆ. ಡಿಜಿಟಲ್‌ ಪ್ರೊಜೆಕ್ಟರ್‌ಗಳನ್ನು ಸರಿಯಾದ ಸ್ಥಾನದಲ್ಲಿ ಇರಿಸುವಿಕೆ ಸೇರಿದಂತೆ ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇದ್ದು, ಕೆಲಸಗಳು ಪೂರ್ಣಗೊಂಡ ಬಳಿಕ ಕೇಂದ್ರ ಮಾಹಿತಿ ಸಚಿವ ಎಂ.ಎಸ್‌. ಸೀತಾರಾಮ್‌ ಅವರ ದಿನ ನಿಗದಿಪಡಿಸಿ ತಾರಾಲಯ ಉದ್ಘಾಟನೆಗೊಳ್ಳಲಿದೆ. 18 ಮೀ. ವ್ಯಾಸ 15 ಡಿಗ್ರಿ ಕೋನದಲ್ಲಿ  ಡೋಮ್‌ ಆ್ಯಕ್ಟಿವ್‌ 3ಡಿ 8ಕೆ ಪ್ರೊಜೆಕ್ಷನ್‌ ಸಿಸ್ಟಮ್‌ಗಳನ್ನೊಳಗೊಂಡ ಈ ತಾರಾಲಯವು ದೇಶದ ಮೊದಲ, ಜಗತ್ತಿನ 21ನೇ ತಾರಾಲಯ ಎಂಬ ಮಾನ್ಯತೆಯನ್ನು ಪಡೆದುಕೊಂಡಿದೆ. 

8ಕೆ ಯುಎಚ್‌ಡಿ ಹೈಬ್ರಿಡ್‌ 4ಕೆ ಅಲ್ಟ್ರಾ ಎಚ್‌ಡಿ ಪರದೆಗಳು ಚಿತ್ರಗಳನ್ನು 1080ಪಿ ಫುಲ್‌ ಎಚ್‌ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿ ಮೂಡಿಸಬಲ್ಲವು. 4ಕೆ ಯುಎಚ್‌ಡಿಗಿಂತ 4 ಪಟ್ಟು ಉತ್ತಮ ಚಿತ್ರವನ್ನು 8ಕೆ ಯುಎಚ್‌ಡಿ ಮೂಡಿಸುತ್ತದೆ. ಯಾವುದೇ ವೀಡಿಯೋದ ಉದಾಹರಣೆ ತೆಗೆದುಕೊಂಡರೆ ಅದರ ಪ್ರತಿ ಫ್ರೇಮಿನಲ್ಲೂ ಒಂದಷ್ಟು “ಪಿಕ್ಚರ್‌ ಎಲಿಮೆಂಟ್‌’ ಗಳಿರುತ್ತವೆ. ಪಿಕ್ಸೆಲ್‌ಗ‌ಳು ವೀಡಿಯೋದ ಸ್ಪಷ್ಟತೆ ತೀರ್ಮಾನಿಸುತ್ತವೆ. ಸಾಧಾರಣ ವೀಡಿಯೋಗಳಲ್ಲಿ ಪ್ರತಿ ಪರದೆಗೆ 480 ಸಾಲುಗಳಿರುತ್ತವೆ ಎಂದಿಟ್ಟುಕೊಂಡರೆ ಎಚ್‌ಡಿಯಲ್ಲಿ 1080 ಸಾಲುಗಳಿರುತ್ತವೆ. 8ಕೆ ಯುಎಚ್‌ಡಿ 7680 ಪಿಕ್ಸೆಲ್‌ ಹೊಂದಿದ್ದು, 7680 x 4320 ರೆಸಲ್ಯೂಶನ್‌ ಹೊಂದಿವೆ. ಪಿಲಿಕುಳ ತಾರಾಲಯದಲ್ಲಿ 8ಕೆ ಯುಎಚ್‌ಡಿ ಅಳವಡಿಕೆಯಾಗುತ್ತಿರುವುದರಿಂದ ನಭೋಮಂಡ ಲದ ನೈಜ ಅನುಭವ ಸಿಗಲಿದೆ. ಹಿಂದೆ ಇದ್ದ ಅಪ್ಟೊ ಮೆಕಾನಿಕಲ್‌ ಮತ್ತು ಈಗಿನ ಡಿಜಿಟಲ್‌ ತಂತ್ರಜ್ಞಾನ ಒಟ್ಟಾಗಿಸಿ ಹೈಬ್ರಿಡ್‌ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದ್ದು, ಗ್ಯಾಲಕ್ಸಿ, ನಕ್ಷತ್ರಗಳು, ಗ್ರಹ ಗಳ ಸಹಿತ ಎಲ್ಲ ಆಕಾಶಕಾಯಗಳ ಚಿತ್ರಣ ಚಂದ್ರನ ಮೇಲೆ ನಿಂತು ನೋಡಿದಷ್ಟೇ ಸ್ಪಷ್ಟವಾಗಿ ನೋಡಬಹುದು.

ಫೆ. 11ರಂದು ದಿನ ಬಹುತೇಕ ನಿಗದಿ 
ತಾರಾಲಯದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೇಂದ್ರ ಸಚಿವರ ದಿನ ನಿಗದಿಗಾಗಿ ಕಾಯಲಾಗುತ್ತಿದೆ. ಫೆ.11 ಬಹುತೇಕ ಖಚಿತಗೊಂಡಿದೆ. ಇನ್ನೂ ದಿನ ಬದಲಾಗುವ ಸಾಧ್ಯತೆ ಇದೆ. 
ಕೆ.ವಿ. ರಾವ್‌, ನಿರ್ದೇಶಕರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ

 ಪ್ರಜ್ಞಾ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next