Advertisement

Zero Shadow Day: ಮಂಗಳೂರು..  ಇಂದು ಶೂನ್ಯ ನೆರಳಿನ ದಿನ

10:23 AM Aug 18, 2023 | Team Udayavani |

ಮಂಗಳೂರು: ಇಂದು (ಆ. 18) ಶೂನ್ಯ ನೆರಳಿನ ದಿನ. ಅಂದರೆ ಮಧ್ಯಾಹ್ನ 12.35 ಗಂಟೆಗೆ ನಮ್ಮ ನೆರಳು ಕಾಣಸಿಗದು. ಈ ವಿದ್ಯಮಾನವು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಂದು ಸಂಭವಿಸುತ್ತದೆ.

Advertisement

ಮುಂಜಾನೆ ಸೂರ್ಯನ ಬೆಳಕು ನಮ್ಮ ಮೇಲೆ ಬಿದ್ದಾಗ ನೆರಳು ಉದ್ದವಾಗಿರುತ್ತದೆ. ಮಧ್ಯಾಹ್ನ ವಾಗುತ್ತಿದ್ದಂತೆ ಸಣ್ಣದಾಗಿ ಪುನಃ ಸಾಯಂಕಾಲ ಉದ್ದವಾಗುತ್ತದೆ. ಇಂತಹ ವಿದ್ಯಮಾನ ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ (ಮಂಗಳೂರಿನಲ್ಲಿ ಆಗಸ್ಟ್‌ 18 ಮತ್ತು ಎಪ್ರಿಲ್‌ 24).

ಈ ವಿಶೇಷ ವಿದ್ಯಮಾನ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕೆಲವು ಪ್ರಾತ್ಯಕ್ಷಿಕೆಗಳನ್ನು ಆ. 18ರಂದು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next