Advertisement

ಪಿಲಿಕುಳದ ಮೃಗಾಲಯಕ್ಕೆ ಅಪರೂಪದ ಮೃಗಗಳ ಸೇರ್ಪಡೆ

06:17 PM Mar 09, 2023 | Team Udayavani |

ಮಂಗಳೂರು : ನಗರದ ಪಿಲಿಕುಳ ಮೃಗಾಲಯಕ್ಕೆ ನಾಲ್ಕು ಅಪರೂಪದ ಬಿಳಿ ಕೃಷ್ಣ ಮೃಗಗಳು ಮತ್ತು ನಾಲ್ಕು ನೀಲ್ ಗೈ ಗಳನ್ನು ಸೇರ್ಪಡೆ ಮಾಡಲಾಗಿದೆ.

Advertisement

ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿಯ ಮೇರೆಗೆ ವನ್ಯಪ್ರಾಣಿ ವಿನಿಮಯ ಯೋಜನೆಯಡಿ ನಾಗಪುರದ ಬಾಳಾ ಸಾಹೇಬ್ ಠಾಕ್ರೆ ಗೋರೆವಾದ ಇಂಟರ್ನ್ಯಾಷನಲ್ ಮೃಗಾಲಯದಿಂದ ಈ ಪ್ರಾಣಿಗಳನ್ನು ತರಲಾಗಿದೆ. ಇಲ್ಲಿಂದ 6 ರೆಟಿಕ್ಯುಲೇಟೆಡ್ ಹೆಬ್ಬಾವು ಮತ್ತು 4 ಗ್ರೇ ಕಳುಹಿಸಲಾಗಿದೆ.

ಪಿಲಿಕುಳದಲ್ಲಿ ಈಗಾಗಲೇ 50 ಕೃಷ್ಣ ಮೃಗಗಳು ಮತ್ತು 25 ರೆಟಿಕ್ಯುಲೇಟೆಡ್ ಹೆಬ್ಬಾವುಗಳಿವೆ. ನೀಲ್ ಗೈ ಗಳು ಏಷ್ಯಾ ದಲ್ಲಿ ಕಾಣಸಿಗುವ ದೊಡ್ಡ ಗಾತ್ರದ ಜಿಂಕೆ ಜಾತಿಗೆ ಸೇರಿದ ಮೃಗಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next