Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಕುರಿತು ಹರ್ಷ ವ್ಯಕ್ತಪಡಿಸಿದರು. ನಾವು ಪದವೀಧರ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ, ಶಿಕ್ಷಕರ ಕ್ಷೇತ್ರದಲ್ಲಿ ನಾವು ಗೆಲ್ಲುತ್ತಿದ್ದೆವು. ಇದು ಮೊದಲ ಗೆಲುವಾಗಿದೆ.ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ. ಅಲ್ಲಿ ಎರಡು ಬಾರಿ ಗೆದ್ದಿದ್ದ ಅರುಣ್ ಶಹಾಪೂರ ಅವರನ್ನು ಸೋಲಿಸಿ ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ. ಈ ಕ್ಷೇತ್ರವೂ ಮೂರು ಜಿಲ್ಲೆಗೆ ಸೇರಿದ್ದು, ಅಲ್ಲಿನ ಶಿಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲಿನ ನಮ್ಮ ಎಲ್ಲ ನಾಯಕರಿಗೆ ಕೃತಜ್ಙತೆ ಸಲ್ಲಿಸುತ್ತೇನೆ. ಜನ ಬದಲಾವಣೆಯನ್ನಬಯಸಿದ್ದಾರೆ. ಅದು ಈ ಚುನಾವಣೆಯಿಂದ ಗೊತ್ತಾಗುತ್ತಿದೆ ಎಂದರು.
ಪದವೀಧದರರು ಮತ ಚಲಾಯಿಸಿದ್ದರು, ಅಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಿ ಗೆದ್ದಿದ್ದೇವೆ, ಇಲ್ಲಿ ಜೆಡಿಎಸ್ ಅಭ್ಯರ್ಥಿಸೋಲಿಸಿ ಗೆದ್ದಿದ್ದೇವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸೋತಿದ್ದೇವೆ, ವಾಯುವ್ಯ ಪದವೀಧರ ಕ್ಷೇತ್ರದಲ್ಲೂ ಸೋತಿದ್ದೇವೆ. ಹೊರಟ್ಟಿ ಜೆಡಿಎಸ್ ನಿಂದ ಬಿಜೆಪಿಗೆ ಹೋಗಿ ಗೆದ್ದಿದ್ದಾರೆ. ನಮ್ಮವರು ಸೋತಿದ್ದರೂ ಹೆಚ್ಚಿನ ಮತ ಗಳಿಸಿದ್ದಾರೆ ಎಂದರು.
Related Articles
Advertisement
ಬಿಜೆಪಿಯವರು ನಾಲ್ಕೂ ಗೆಲ್ಲುತ್ತೇವೆ ಎಂದು ಅಂತ ಜಂಭ ಪಟ್ಟಿದ್ದರು. ಸ್ವತಃ ಸಿಎಂ ಹೋಗಿ ಪ್ರಚಾರ ಮಾಡಿದ್ದರು. ನಮಗೆ ಸಂಪನ್ಮೂಲ ಕೊರತೆ ಇದ್ದರೂ ಗೆದ್ದಿದ್ದೇವೆ. ನಾವೂ ಏನೂ ಇಲ್ಲದ ಕಡೆ ಗೆದ್ದಿದ್ದೇವೆ. ಜೀರೋ ಇದ್ದವರು ನಾವು ಎರಡು ಗೆದ್ದಿದ್ದೇವೆ ಎಂದರು.
ಇದನ್ನೂ ಓದಿ : ರಾಹುಲ್ ಗಾಂಧಿಯ ಖ್ಯಾತಿಯಿಂದ ಭಯಗೊಂಡು ಕೇಂದ್ರ ಸರ್ಕಾರದಿಂದ ವಿಚಾರಣೆ ಕೆಲಸ: ಡಿಕೆ ಶಿವಕುಮಾರ್
ರಕ್ಷಣೆಗೆ ಜನ ನಿಲ್ಲುತ್ತಾರೆ
ಬಿಜೆಪಿಯವರ ಕೋಮುವಾದ,ರಾಜಕೀಯ ದ್ವೇಷ ಸೇಡಿನ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ.ದ್ವೇಷ ರಾಜಕಾರಣವನ್ನ ಜನ ಒಪ್ಪುವುದಿಲ್ಲ.ಹಿಂದೆಯೂ ಒಪ್ಪಿಲ್ಲ ಮುಂದೆಯೂ ಜನ ಒಪ್ಪುವುದಿಲ್ಲ.ಸಂವಿಧಾನಕ್ಕೆ ಆಪತ್ತು ಬಂದಾಗ ಜನ ರಕ್ಷಣೆಗೆ ನಿಲ್ಲುತ್ತಾರೆ ಎಂದರು.
ಹೊಟ್ಟೆ ಉರಿ !
ವ್ಯಕ್ತಿ ಗೆಲ್ಲುತ್ತಾನೆ ಅಂದರೆ ಸೋಲಿಸುವುದಕ್ಕೆ ಕಾಯುತ್ತಿರುತ್ತಾರೆ. ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡುತ್ತಿದ್ದಾರೆ. ಅಂತವರು ನಮ್ಮನ್ನ ದ್ವೇಷಿಸಬಹುದು. ನಮ್ಮ ಪಕ್ಷದಲ್ಲಿ ಅಂತವರು ಯಾರು ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ಪ್ರೀತಿಸುತ್ತಾರೆ. ಬೇರೆ ಪಕ್ಷದಲ್ಲಿ ಹೊಟ್ಟೆ ಉರಿಯವರು ಇದ್ದಾರೆ. ನಮ್ಮ ಶಾಸಕರು ಎಲ್ಲರೂ ನನ್ನ ಪರವೇ ಇದ್ದಾರೆ. ಸಿಎಂ ಯಾರು ಅನ್ನೋದು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.