Advertisement
ಲಾರ್ಡ್ಸ್, ಓವರ್ ಹಾಗೂ ಟ್ರೆಂಟ್‌ಬ್ರಿಡ್ಜ್ ಕ್ರೀಡಾಂಗಣಗಳು ಟೆಸ್ಟ್ ಪಂದ್ಯಗಳಿಗೆ ಭರ್ತಿಯಾಗಿರುತ್ತವೆ. ಪ್ರತಿ ರನ್, ವಿಕೆಟಿಗೂ ಪ್ರೇಕ್ಷಕರ ಚಪ್ಪಾಳೆಯ ಪ್ರೋತ್ಸಾಹ ಸಿಗುತ್ತದೆ. ಇಂಗ್ಲೆಂಡ್ ತಂಡದ ಸಾವಿರನೇ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣ ತುಂಬಿ ತುಳುಕಬೇಕಿತ್ತು. ಆದರೆ, ಪಾಕಿಸ್ಥಾನ ವಿರುದ್ಧದ ಪಂದ್ಯಕ್ಕೆ ಹೋಲಿಸಿದರೆ ಬಹುತೇಕ ದುಪ್ಪಟ್ಟು ದರ ವಿಧಿಸಿದ್ದರಿಂದ ಟಿಕೆಟ್‌ಗಳ ಮಾರಾಟ ಆಗಲಿಲ್ಲ. ಟೆಸ್ಟ್‌ನ ಮೊದಲ ದಿನ 25 ಸಾವಿರ ಆಸನಗಳ ಸಾಮರ್ಥ್ಯದ ಕ್ರೀಡಾಂಗಣದಲ್ಲಿ 18,159 ಪ್ರೇಕ್ಷಕರಷ್ಟೇ ಬಂದಿದ್ದರು. ಹೀಗಾಗಿ, ಆಯೋಜಕರು ಬುಧವಾರ ಚಹಾ ವಿರಾಮದ ಬಳಿಕ ಟಿಕೆಟ್ ದರಗಳನ್ನು ಇಳಿಸಿದ್ದರು. ಆದರೆ, ಎರಡನೇ ದಿನ ಕೇವಲ 16,754 ಪ್ರೇಕ್ಷಕರು ಹಾಜರಿದ್ದರು ಎಂದು ಕೌನ್ಸಿಲ್‌ನ ಗುಲ್ಫ್ರಾಜ್ ರಿಯಾಜ್ ಟೀಕಿಸಿದ್ದಾರೆ. Advertisement
ಪ್ರೇಕ್ಷಕರ ಕೊರತೆಗೆ ದುಬಾರಿ ಟಿಕೆಟ್ ದರವೇ ಕಾರಣ: ಆರೋಪ
06:20 AM Aug 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.