Advertisement
ಈಕೆಯ ಪತಿ ನಾಸೀರ್(54)ನ ಮೃತಹೇದ ಆಂಧ್ರಪ್ರದೇಶದ ಪೆನ್ನಗೊಂಡ ಬಳಿ ಪತ್ತೆಯಾಗಿದೆ. ನಾಸೀರ್ ನ.19ರಂದು ರಾಜೇಂದ್ರನಗರದ ಮನೆಯಲ್ಲಿ ಪತ್ನಿ ಆಯೇಷಾ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದರು. ದರ್ಗಾ ಮತ್ತು ಮಸೀದಿಗಳ ಅಭಿವೃದ್ಧಿಗೆ ಚಂದಾ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದ ನಾಸೀರ್ 25 ವರ್ಷಗಳ ಹಿಂದೆ ಆಯೇಷಾ ಎಂಬವರನ್ನು ಮದುವೆ ಯಾಗಿದ್ದ.
Related Articles
Advertisement
ನಂತರ ಮನೆಯಲ್ಲಿ ಒಬ್ಬರೇ ಇದ್ದ ಆಯೇಷಾರ ಬಾಯಿ ಕಟ್ಟಿ, ಆಕೆ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ನಂತರ ಕೋಣೆಯ ಬಾಗಿಲು ಮತ್ತು ಕಿಟಕಿ ಹಾಕಿಕೊಂಡು ಹೊರಗಡೆ ಹೋಗಿದ್ದು, ಕಿಟಕಿಯ ಗಾಜನ್ನು ಒಡೆದು ಹೊರಗಡೆಯಿಂದಲೇ ಬೆಂಕಿ ಹಚ್ಚಿ ಪರಾರಿ ಯಾಗಿದ್ದ. ಪರಿಣಾಮ ಬೆಂಕಿಯ ಸ್ಫೋಟಕ್ಕೆ ಬಾಗಿಲು ಒಡೆದುಹೋಗಿದೆ. ಸ್ಫೋಟದ ಶಬ್ಧಕ್ಕೆ ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಆತ ಪರಾರಿಯಾಗಿದ್ದ.
ಘಟನೆ ಯಲ್ಲಿ ಆತನಿಗೂ ಗಾಯಗಳಾಗಿದ್ದರೂ ಚಿಕಿತ್ಸೆ ಪಡೆ ಯದೇ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಹೇಳಿ ದರು. ಬೆಂಕಿ ನಂದಿಸಿದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಆಯೇಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಸಿಗದೆ ತಡರಾತ್ರಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆಡುಗೋಡಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಆಗಾಗ್ಗೆ ಪುತ್ರ ಮನ್ಸೂರ್‌ಗೆ ಕರೆ ಮಾಡಿ ನೆರೆ ರಾಜ್ಯದಲ್ಲಿರುವುದಾಗಿ ಹೇಳಿ ಫೋನ್ ಸ್ವಿಚ್ಚ್ ಆಫ್ ಮಾಡಿಕೊಳ್ಳು ತ್ತಿದ್ದ. ಸ್ಥಳ ಬದಲಾಯಿಸಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಪೆನ್ನಗೊಂಡದಲ್ಲಿ ಸಾವು
ಎರಡು ದಿನಗಳ ಹಿಂದೆ ನಾಸೀರ್ ಪುತ್ರನಿಗೆ ಕರೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆಂಧ್ರಪ್ರದೇಶದ ಪೆನ್ನಗೊಂಡದಲ್ಲಿರುವ ಆತನ ಬಂಧನಕ್ಕೆ ತೆರಳಿದ್ದರು. ಆದರೆ, ಆತನ ಸುಳಿವು ಸಿಗದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆತನ ಮೊಬೈಲ್ ನಂಬರ್‌ಗೆ ಕರೆ ಮಾಡಿದ, ಸ್ಥಳೀಯರು ಕರೆ ಸ್ವೀಕರಿಸಿ ಮೃತ ಪಟ್ಟಿ ರುವುದನ್ನು ದೃಢಪಡಿಸಿದ್ದಾರೆ.
ಅಲ್ಲದೆ, ಸ್ಥಳೀಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡು ಮರಣೋತ್ತರ ಪರೀಕ್ಷೆ ನಡೆಸಿ, ಆಡುಗೋಡಿ ಠಾಣೆ ಪೊಲೀಸರ ಸಮ್ಮುಖದಲ್ಲಿಯೇ ಕಾನೂನು ಪ್ರಕ್ರಿಯೆ ಮುಗಿಸಿ ಅವರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.