Advertisement

ಕಾಪಿ ರೈಟ್‌ ವಿವಾದ: ಓಲಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

09:19 PM Feb 01, 2022 | Team Udayavani |

ಬೆಂಗಳೂರು: ಓಲಾ ಕ್ಯಾಬ್‌ಗಳಲ್ಲಿ ಸಿನಿಮಾ ಹಾಡುಗಳ ಪ್ರಸಾರ ಸಂಬಂಧ ಲಹರಿ ಆಡಿಯೋ ಸಂಸ್ಥೆ ನೀಡಿದ್ದ ದೂರು ಆಧರಿಸಿ ಕಾಪಿ ರೈಟ್‌ ಕಾಯ್ದೆಯಡಿ ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಎನ್‌ಎಐ ಖಾಸಗಿ ಕಂಪನಿಯ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಎಫ್ಐರ್‌ ರದ್ದು ಕೋರಿ ಓಲಾ ಕ್ಯಾಬ್‌ ಎಂದೇ ಪ್ರಚಲಿತದಲ್ಲಿರುವ ಎನ್‌ಎಐ ಎಂಬ ಖಾಸಗಿ ಕಂಪೆನಿಯ ನಿರ್ದೇಶಕ ಭವಿಶ್‌ ಅಗರವಾಲ್‌ ಮತ್ತು ಅಂಕಿತ್‌ ಭಾಟಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ “ಕಾಪಿ ರೈಟ್‌ ಕಾಯ್ದೆ ಸೆಕ್ಷನ್‌ 63ರಡಿ ಸಕ್ಷಮ ನ್ಯಾಯಾಲಯ ತಪ್ಪಿತಸ್ಥರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಹಾಗಾಗಿ ಪೊಲೀಸರು ದೂರು ಆಧರಿಸಿ ಎಫ್‌ಐಅರ್‌ ದಾಖಲು ಮಾಡಿರುವುದು ಸರಿ ಇದೆ. ಕಾಯ್ದೆಯ ಸೆಕ್ಷನ್‌ 64ರಡಿ ಪೊಲೀಸರಿಗೆ ಶೋಧ ಕಾರ್ಯ ಮತ್ತು ವಶಕ್ಕೆ ಪಡೆಯುವ ಅಧಿಕಾರ ಇದೆ ಎಂದ ಮಾತ್ರಕ್ಕೆ ಸೆಕ್ಷನ್‌ 63ರಡಿ ಲಭ್ಯವಿರುವ ಸಂಜ್ಞೆàಯ ಅಪರಾಧದ(ಕಾಗ್ನಿಜಬಲ್‌ ಅಫೆನ್ಸ್‌ ) ಅ ಧಿಕಾರ ಮೊಟಕು ಆಗುವುದಿಲ್ಲ. ಹಾಗಾಗಿ, ಹೈಕೋರ್ಟ್‌ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಓಲಾ ಕ್ಯಾಬ್‌ ಗಳಲ್ಲಿ ಅಳವಡಿಸುವ ಟಿವಿ/ಡಿಸ್‌ಪ್ಲೇ ಸೆಟ್‌ಗಳಲ್ಲಿ ಜನಪ್ರಿಯ ಚಿತ್ರಗೀತೆಗಳ ವಿಡಿಯೋ ಮತ್ತು ಆಡಿಯೋ ಪ್ರಸಾರ ಮಾಡಲಾಗಿತ್ತು. ಇದು ಕಾಪಿ ರೈಟ್‌ ಕಾಯ್ದೆ ಉಲ್ಲಂಘನೆಯಾಗಿದ್ದು ಓಲಾ ಕಂಪನಿ ತಮ್ಮ ಅನುಮತಿ ಪಡೆಯದೆ, ತಮ್ಮ ಕಾಫಿರೈಟ್‌ ಇರುವ ಹಾಡುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಲಹರಿ ರೆಕಾರ್ಡಿಂಗ್‌ ಕಂಪನಿ 2017ರ ಮೇ 13ರಂದು ದೂರು ನೀಡಿದ್ದರು. ಹೆಚ್ಚುವರಿ ಪೊಲೀಸ್‌ ಆಯುಕ್ತರು ಎಫ್‌ಐಆರ್‌ ದಾಖಲಿಸಿ ತನಿಖೆಗೆ ಆದೇಶಿಸಿದ್ದರು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next