Advertisement

ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಠಡಿ ಕೊಡಬಹುದೆ: ಶೆಟ್ಟರ್‌ ಪ್ರಶ್ನೆ

06:00 AM Jul 11, 2018 | Team Udayavani |

ವಿಧಾನಸಭೆ: ಸಮನ್ವಯ ಸಮಿತಿ ಅಧ್ಯಕ್ಷರಿಗೆ ವಿಧಾನ ಸೌಧದಲ್ಲಿ ಕೊಠಡಿ ಕೊಡಲು ಅವಕಾಶವಿದೆಯೇ? ಸಮನ್ವಯ ಸಮಿತಿ ಅಧ್ಯಕ್ಷರ ಹುದ್ದೆಯ ಬಗ್ಗೆ ಸರ್ಕಾರಿಂದ ಅಧಿಸೂಚನೆ ಆಗಿದೆಯೇ? ಎಂಬ ಪ್ರಶ್ನೆ ಸದನದಲ್ಲಿ ಉದ್ಭವವಾಯಿತು. ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಂಗಳವಾರ ಮಾತನಾಡಿದ ಬಿಜೆಪಿಯ ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿಗಳಿಗೆ ವಿಧಾನಸೌಧದಲ್ಲಿ ಕೊಠಡಿ ಕೊಡುವುದಾದರೆ ಎಲ್ಲರಿಗೂ
ಕೊಡಿ. ಮಾಜಿ ಮಂತ್ರಿಗಳಿಗೂ ಕೊಡಿ. ಜನರು ಅವರ ಭೇಟಿಗೂ ಬರುತ್ತಾರೆ ಎಂದು ಸರ್ಕಾರಕ್ಕೆ ವ್ಯಂಗ್ಯಭರಿತ ಸಲಹೆ ನೀಡಿದರು.

Advertisement

ಇದು ಸಿದ್ದರಾಮಯ್ಯ ಅವರ ವೈಯಕ್ತಿಕ ವಿಚಾರವಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಠಡಿ ಕೊಡಬಹುದೇ ಎಂಬುದು ಪ್ರಶ್ನೆ. ಯುಪಿಎ ಅಧ್ಯಕ್ಷ ಹುದ್ದೆಗೆ ಮಾನ್ಯತೆ ನೀಡಲಾಗಿತ್ತು. ಇಲ್ಲೂ ಅದೇ ರೀತಿ ಮಾನ್ಯತೆ ನೀಡಲಾಗಿದೆಯೇ? ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಠಡಿ ನೀಡುವ ಬಗ್ಗೆ ಸರ್ಕಾರದಿಂದ ನಿರ್ಣಯ ಆಗಿದೆಯೇ ಎಂದು ಪ್ರಶ್ನಿಸಿದರು. ಈ ವಿಚಾರ ಪ್ರಸ್ತಾಪವಾದಾಗ ಆಡಳಿತ ಪಕ್ಷದ ಸಾಲಿನಲ್ಲಿ ಮೂವರು ಸಚಿ
ವರು, ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಇದ್ದುದನ್ನು ಗಮನಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ನೀವು ಯಾರಿಗೆ ಈ ವಿಚಾರ ಹೇಳುತ್ತಿದ್ದೀರಿ ಎಂದು ಶೆಟ್ಟರ್‌ ಅವರನ್ನು ಪ್ರಶ್ನಿಸಿ ಸರ್ಕಾರವನ್ನು ಚುಚ್ಚಿದರು. ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡುವುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಂದ ಮಾಹಿತಿ ಪಡೆದು ಸದನಕ್ಕೆ ನೀಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next