Advertisement
ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗೆ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವ “ಶಕ್ತಿ’ ಯೋಜನೆ ಜೂನ್ 11ರಿಂದ ಜಾರಿಗೆ ಬರಲಿದೆ. ಜುಲೈ 1ರಿಂದ ಬಿಪಿಎಲ್ ಮತ್ತು ಅಂತ್ಯೋ ದಯ ಅನ್ನ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡ ಲಿದೆ. ಜುಲೈ 1ರಿಂದ ಆಗಸ್ಟ್‌ವರೆಗಿನ ವಿದ್ಯುತ್ ಬಳಕೆಗೆ ಅನ್ವಯ ವಾಗುವಂತೆ 200 ಯೂನಿಟ್ ಉಚಿತ ವಿದ್ಯುತ್ ಕಲ್ಪಿಸುವ “ಗೃಹ ಜ್ಯೋತಿ’ ಯೋಜನೆ, ರಾಜ್ಯದಲ್ಲಿರುವ ಎಲ್ಲ ಕುಟುಂಬದ ಯಜ ಮಾನಿಯ ಖಾತೆಗೆ ಮಾಸಿಕ 2 ಸಾವಿರ ರೂ. ವರ್ಗಾವಣೆ ಮಾಡುವ “ಗೃಹ ಲಕ್ಷ್ಮಿ’ ಯೋಜನೆ ಹಾಗೂ 2022- 23ರಲ್ಲಿ ತೇರ್ಗಡೆಯಾದ ವೃತ್ತಿ ಶಿಕ್ಷಣವೂ ಸೇರಿ ಎಲ್ಲ ಪದವೀಧರರಿಗೆ 24 ತಿಂಗಳು ನೆರವು ನೀಡುವ “ಯುವ ನಿಧಿ’ ಯೋಜನೆ ಜಾರಿಗೆ ಸಂಪುಟ ಸಭೆ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಈ ಯೋಜನೆಗಳಿಗೆ ರಾಜ್ಯ ಸರಕಾರ ತನ್ನ ಬೊಕ್ಕಸದಿಂದ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಜನ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿ ಕೊಳ್ಳಬಾರದು. ವಿಶೇಷವಾಗಿ ಬಸ್ ಪ್ರಯಾಣ ಅನಿವಾರ್ಯ ಹಾಗೂ ಅಗತ್ಯವಿದ್ದ ಸಂದರ್ಭಗಳಲ್ಲಿ ಮಾತ್ರ ಇರಬೇಕೇ ಹೊರತು ಉಚಿತ ವೆಂದು ನಿತ್ಯವೂ ಅನಗತ್ಯ ಸುತ್ತಾಟ ಸರಿಯಲ್ಲ. ಅದೇ ರೀತಿ ಸರಕಾರ ಕೊಡುವ ಅಕ್ಕಿಯೂ ದುರ್ಬಳಕೆ ಆಗ ಕೂಡದು. ನ್ಯಾಯಬೆಲೆ ಅಂಗಡಿ ಗಳಿಂದ ತಂದ ಅಕ್ಕಿಯೂ ಊಟ- ತಿಂಡಿಗೆ ಬಳಕೆಯಾಗಬೇಕೇ ಹೊರತು ಆ ಅಕ್ಕಿಯನ್ನು ಮಾರಿಕೊಳ್ಳುವ ಚಟ ಬೆಳೆಸಿಕೊಳ್ಳಬಾರದು.
Advertisement
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ
11:52 PM Jun 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.