Advertisement

ಭಾಷೆ ಬೆಳವಣಿಗೆಗೆ ಅನುವಾದದ ಕೊಡುಗೆ ಅಪಾರ

02:58 PM Feb 19, 2020 | Suhan S |

ಕೊಪ್ಪಳ: ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಯಲ್ಲಿ ಅನುವಾದ ಸಾಹಿತ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ಹಿರಿಯ ಸಾಹಿತಿ, ಅನುವಾದಕ ಡಾ| ಕೆ.ಬಿ. ಬ್ಯಾಳಿ ಹೇಳಿದರು.

Advertisement

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ಅನುವಾದ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾಷಾಂತರ, ಅನುವಾದ ಎರಡಕ್ಕೂ ಸೂಕ್ಷ್ಮ ವ್ಯತ್ಯಾಸವಿದೆ. ಅನುವಾದ ನಿರಂತರ ಅಧ್ಯಯನ ಮಾಡುವವರಿಗೆ ಅರ್ಥವಾಗುತ್ತದೆ. ಅನುವಾದ ಬರೆಯಬೇಕಾದಲ್ಲಿ ಎರಡೂ ಭಾಷೆಗಳ ಮೇಲೆ ಸಾಕಷ್ಟು ಹಿಡಿತ ಹೊಂದಿರಬೇಕಾಗುತ್ತದೆ. ಅನುವಾದಕ ಅನುಭವಿ ಕೌಶಲ್ಯಯುಕ್ತ ಮತ್ತು ಸೃಜನಶೀಲನಾಗಿದ್ದರೆ ಅನುವಾದ ಗೆಲ್ಲುತ್ತದೆ. ಇಲ್ಲವಾದಲ್ಲಿ ಕೊಲೆಯಾಗುತ್ತದೆ. ಅನುವಾದ ಎಂದರೆ ಪರಕಾಯ ಪ್ರವೇಶವಿದ್ದಂತೆ. ನಮ್ಮ ಭಾಷೆಯೊಂದಿಗೆ ಬೇರೊಂದು ಭಾಷೆಯ ಸಾಹಿತ್ಯವನ್ನು ಅವಲೋಕಿಸುವ ವಿಧಾನ ಎಂದರು.

ಕೇಂದ್ರದ ನಿರ್ದೇಶಕ ಪ್ರೊ| ಬಸವರಾಜ ಎಸ್‌. ಬೆಣ್ಣಿ ಮಾತನಾಡಿ, ಅನುವಾದ ಎಂದರೆ ಒಂದು ಭಾಷೆಯಿಂದ ಮತ್ತೂಂದು ಭಾಷೆಗೆ ಹಾವ-ಭಾವ, ಚಿಂತನೆಗಳನ್ನು ಕೊಂಡೊಯ್ಯೋವ ಪ್ರಕ್ರಿಯೆಯೇ ಅನುವಾದ. ಬಸವಣ್ಣನವರು ವಚನಗಳು ಬೇರೆ ಬೇರೆ ಭಾಷೆಗಳಲ್ಲಿ ಅನುವಾದಗೊಳ್ಳುತ್ತವೆ. ಪಾಶ್ಚಿಮಾತ್ಯರು ಬಸವಣ್ಣನವರು ವಚನಗಳಿಗೆ ಮಾರು ಹೋಗುತ್ತಾರೆ. 12ನೇ ಶತಮಾನದಲ್ಲಿಯೇ ಸಂವಹನ ಕೌಶಲ್ಯಗಳ ಬಗ್ಗೆ ತಮ್ಮ ವಚನದ ಮುಖೇನ ಶರಣರು ತಿಳಿಸಿದ್ದರು. ನುಡಿದರೆ ಮುತ್ತಿನ ಹಾರದಿಂದರಬೇಕು. ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು ಬಸವಣ್ಣನವರ ವಚನ ಸ್ಮರಿಸಿದರಲ್ಲದೆ, ಯಾರು ಭಾಷಾ ಕೌಶಲ್ಯ ಹೊಂದಿರುವನೋ ಅವರು ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕು ಕಟ್ಟಿಕೊಳ್ಳುತ್ತಾನೆ. ಪ್ರತಿಯೊಬ್ಬನೂ ಬಹು ಭಾಷಾ ಪ್ರಾವೀಣ್ಯತೆ ಹೊಂದಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕವಿಯತ್ರಿ, ಅನುವಾದಕಿ ನಿರ್ಮಲಾ ಶೆಟ್ಟರ್‌, ಸಹ ಪ್ರಾಧ್ಯಾಪಕ ಡಾ| ಜಾಜಿ ದೇವೇಂದ್ರಪ್ಪ ಸೇರಿದಂತೆ ಕೇಂದ್ರದ ವಿವಿಧ ವಿಭಾಗಗಳ ಉಪನ್ಯಾಸಕರಾದ ಡಾ| ಗಿರೇಗೌಡ ಅರಳಿಹಳ್ಳಿ, ಡಾ| ರಂಗನಾಥ, ಡಾ| ಡಿ.ಡಿ. ಸಂದೀಪ, ಡಾ| ಚಾಂದ ಭಾಷಾ, ವೈ.ವಿ. ಕುಲಕರ್ಣಿ, ವಿಶಾಲಾಕ್ಷಿ, ಶಶಿ, ಶ್ರೀಕಾಂತ ಮತ್ತು ವಿದ್ಯಾರ್ಥಿಗಳು ಕೊಪ್ಪಳ: ಅನುವಾದ ಕಮ್ಮಟ ಕಾರ್ಯಕ್ರಮವನ್ನು ಡಾ| ಕೆ.ಬಿ. ಬ್ಯಾಳಿ ಉದ್ಘಾಟಿಸಿದರು. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next