Advertisement

ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ

05:34 AM Jun 28, 2020 | Lakshmi GovindaRaj |

ಮೈಸೂರು: ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯನ್ನು ಚಾಮರಾಜಪುರಂನ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ.

Advertisement

ಬೆಂಗಳೂರು ಇಂದು ಅಪಾರ ಸಂಪತ್ತನ್ನು ಹೊಂದಿದ್ದು, ರಾಜಧಾನಿಯಾಗಿ ಕೋಟ್ಯಂತರ ಮಂದಿಗೆ ಬದುಕು ಕಲ್ಪಿಸಿಕೊಟ್ಟಿದೆ. ಅದಕ್ಕೆ  ಕೆಂಪೇಗೌಡರ ಶ್ರಮವೇ ಕಾರಣ. ರಾಜ್ಯದ ಜನತೆ ಅವರನ್ನು ಎಂದೆಂದೂ ಮರೆಯಬಾರದು ಎಂದು ಹೇಳಿದರು. ಕೆಂಪೇಗೌಡರು ಅಂದಿನ ದಿನಗಳಲ್ಲೇ ಸುಂದರ ನಗರದ ಪರಿಕಲ್ಪನೆ ರೂಪಿಸಿದ್ದರು.

ಭದ್ರವಾದ ಕೋಟೆ ಕಟ್ಟಿ ನಾಡಿನ ಗಡಿ ಹಾಗೂ ಪ್ರಜೆಗಳ ರಕ್ಷಣೆ ಕೆಲಸ ಮಾಡಿದ್ದರು. ಆಡಳಿತದಲ್ಲಿ ಸ್ತ್ರೀಯರಿಗೆಗೌರವ ನೀಡುವಅಂಶಗಳನ್ನು ಅಳವಡಿಸಿಕೊಂಡಿದ್ದರು. ರಾಜ್ಯದ ಸಮಸ್ತ ಅಭಿವೃದ್ಧಿ ಮಾಡುವ ಕಲ್ಪನೆ ಅವರದಾಗಿತ್ತು. ಹಾಗಾಗಿ ನಾಡಿನ ಪ್ರಭು ಕೆಂಪೇಗೌಡ  ಎಂಬ ಖ್ಯಾತಿ ಗಳಿಸಿದ್ದರು. ಕೆಂಪೇಗೌಡರು ಕೇವಲ ಒಂದು ಜನಾಂಗದ ನಾಯಕರಲ್ಲ. ಅವರ ಪ್ರಯತ್ನದ ಫ‌ಲವಾಗಿ ಬೆಂಗಳೂರು ಜನ್ಮ ತಾಳಿತು.

ಇಂದು ಆ ಮಹಾನಗರ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು. ಈ ವೇಳೆ ಪಕ್ಷದ  ಮುಖಂಡ ಗಿರಿಧರ್‌, ಗ್ರಾಮಾಂತರ ಮುಖಂಡರಾದ ರಾಜಕುಮಾರ್‌, ನಗರ ಪಾಲಿಕೆ ಸದಸ್ಯೆ ಲಕ್ಷ್ಮೀ, ಪ್ರಮಿಳಾ, ಲಕ್ಷ್ಮೀದೇವಿ, ಗೋಕುಲ್‌ ಗೋವರ್ಧನ್‌, ಜಯಪ್ರಕಾಶ್‌, ಮಹಿಳಾ ಘಟಕದ ಅಧ್ಯಕ್ಷೆ ಹೇಮ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next