Advertisement

ಸಂಸ್ಕೃತಿ ಉಳಿವಿಗೆ ಮುಂಬಯಿ ತುಳುವರ ಕೊಡುಗೆ ಅಪಾರ: ರಂಜನಿ ಹೆಗ್ಡೆ

01:41 PM Aug 11, 2019 | Team Udayavani |

ಮುಂಬಯಿ, ಆ. 10: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಆ. 8ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಕಾಶಿ ಸಿದ್ದು ಶೆಟ್ಟಿ ಕಿರು ಸಭಾಗೃಹದಲ್ಲಿ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್‌ ಹೆಗ್ಡೆ ಅವರು, ಕರ್ನಾಟಕ ಕರಾವಳಿ ಪ್ರದೇಶದಲ್ಲಿ ನೆಲೆಸಿರುವ ತುಳುವರು ಆಷಾಢ ಮಾಸದಲ್ಲಿ ನಡೆಸಿಕೊಂಡು ಬರುತ್ತಿದ್ದ ಆಟಿ ಸಂಪ್ರದಾಯ ಇಂದು ಕ್ರಮೇಣ ಮಾಯವಾಗುತ್ತಿರುವುದು ವಿಷಾದನೀಯ. ಹೊರನಾಡ ಮುಂಬಯಿಯಂತಹ ಪ್ರದೇಶಗಳಲ್ಲಿರುವ ಕರಾವಳಿಯ ತುಳುವರು ಪ್ರತೀ ವರ್ಷ ಆಟಿ ತಿಂಗಳ ಮಹತ್ವವನ್ನು ಉಳಿಸಿಕೊಂಡು ಬರುತ್ತಿರುವುದು ತುಳು ಮಣ್ಣಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳ ಬಗ್ಗೆ ಅವರಲ್ಲಿರುವ ಪ್ರೀತಿ-ಅಭಿಮಾನವನ್ನು ಎತ್ತಿ ತೋರಿಸುತ್ತದೆ. ಆಟಿಯ ಮಹತ್ವದ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯ ನಮ್ಮಿಂದಾಗಬೇಕು ಎಂದರು.

ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ವಿಶ್ವದ ಯಾವ ಕಡೆಯಲ್ಲಿಯೂ ಸಿಗದ ತುಳುವರ ಆಟಿ ಆಚರಣೆಯಲ್ಲಿ ಸಮಾಜ ಶಾಸ್ತ್ರಜ್ಞರು ಸಂಶೋಧನೆಗೆ ಎತ್ತಿಕೊಳ್ಳಬೇಕಾದ ಎಷ್ಟೋ ವಿಚಾರಗಳಿವೆ ಎಂಬುದನ್ನು ಗಮನಕ್ಕೆ ತಂದರು. ಆಟಿಯಲ್ಲಿ ಜರಗುವ ಕುಲೆ ಮದ್ಮೆಯ ಬಗ್ಗೆ ವಿವರಿಸಿ ಶುಭ ಹಾರೈಸಿದರು.

ಸದಸ್ಯರಲ್ಲಿ ಶಾಂತಾ ಎಂ. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಸುಚಿತಾ ಶೆಟ್ಟಿ, ಮನೋರಮಾ ಎನ್‌. ಬಿ. ಶೆಟ್ಟಿ ಮೊದಲಾದವರು ಆಟಿ ತಿಂಗಳ ಮಹತ್ವ, ಈ ತಿಂಗಳಲ್ಲಿ ಬಳಸುವ ವಿವಿಧ ವ್ಯಂಜನಗಳು, ಆಟಿ ಕಳಂಜದ ವಿಶಿಷ್ಟತೆ, ಆಟಿ ಕುಲ್ಲುನು ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಮಹಿಳಾ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಗೂಕಾರ್ಯಕಾರಿ ಸಮಿತಿಯ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಆಟಿಯ ಕೂಟಕ್ಕೆ ಆಗಮಿಸಿದ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಸಂಘದ ವಿಶ್ವಸ್ತರಾದ ಬಿ. ವಿವೇಕ್‌ ಶೆಟ್ಟಿ, ರಘುರಾಮ ಶೆಟ್ಟಿ ಅವೆನ್ಯೂ, ಸಿಎ ಶಂಕರ್‌ ಬಿ. ಶೆಟ್ಟಿ, ಮುಂಡಪ್ಪ ಎಸ್‌. ಪಯ್ಯಡೆ, ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ, ಪ್ರಭಾಕರ ಎಲ್. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ, ಕೋಶಾಧಿಕಾರಿ ಆಶಾ ವಿ. ರೈ, ಜೊತೆ ಕಾರ್ಯದರ್ಶಿ ಮನೋರಮಾ ಎನ್‌. ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾ ಬಿ. ಶೆಟ್ಟಿ ಅವರು ಪುಷ್ಪಗುಚ್ಛವನ್ನಿತ್ತು ನೀಡಿ ಗೌರವಿಸಿ ಅಭಿನಂದಿಸಿದರು.

Advertisement

ಮಹಿಳೆಯರು ಆಟಿಯ ಪದ್ಯಗಳನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಮಹಿಳೆಯರು ಮನೆಯಲ್ಲಿ ಸಿದ್ಧಪಡಿಸಿದ ತಂದ ವಿವಿಧ ವ್ಯಂಜನಗಳಾದ ಪತ್ರಡೆ, ತಿಮರೆದ ಚಟ್ನಿ, ತೆಕ್ಕರೆದ ಅಡ್ಡೆ, ಬಣಲಡ್ಡೆ, ತೇಟ್ಲ, ಅಂಬಡೆ, ಮಶ್ರೂಮ್‌ ಸುಕ್ಕ, ಓಂಟೆ ಪುಲಿತ ಉಪ್ಪಡ್‌, ಕೋಸದಂಟು ಮತ್ತು ಅಂಬಡೆ ಬಾಜಿ, ಪಡುವಲ ಮತ್ತು ಹಿರೇಕಾಯಿ ಸುಕ್ಕ, ಮಣ್ಣಿ, ಇಡ್ಲಿ, ನೀರ್‌ದೋಸೆ, ನೆಸಲಡ್ಡೆ, ಮೆತ್ತೆ ಆಜಾದಿನ, ಚಿಲಿಂಬಿ, ಪೊದ್ದುಲು ಲಾಡ್‌, ಗುರಿಯಪ್ಪ, ನೀರ್‌ದೋಸೆ, ಓಂಟೆ ಪುಲಿ, ಸಂತೋಷ್‌ ಕ್ಯಾಟರರ್ನ ಕೋರಿ ಸುಕ್ಕವನ್ನು ಪ್ರದರ್ಶಿಸಲಾಯಿತು.

ವಿವಿಧ ವ್ಯಂಜನಗಳನ್ನು ರಂಜನಿ ಎಸ್‌. ಹೆಗ್ಡೆ, ಉಮಾ ಕೆ. ಶೆಟ್ಟಿ, ಚಿತ್ರಾ ಆರ್‌. ಶೆಟ್ಟಿ, ಆಶಾ ವಿ. ರೈ, ಮನೋರಮಾ ಎಂ. ಬಿ. ಶೆಟ್ಟಿ, ರತ್ನಾ ಪಿ. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಕಾಂತಿ ಕೆ. ಶೆಟ್ಟಿ, ಜಯಂತಿ ವಿ. ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ, ವನಜಾ ಕೆ. ಶೆಟ್ಟಿ, ರಮಾ ವಿ. ಶೆಟ್ಟಿ, ಸುಜಾತಾ ಜಿ. ಶೆಟ್ಟಿ, ಸರಳಾ ಬಿ. ಶೆಟ್ಟಿ, ಪ್ರಭಾ ಎಂ. ಶೆಟ್ಟಿ, ಸುನಂದಾ ಎಸ್‌. ಶೆಟ್ಟಿ, ಸವಿತಾ ಕೆ. ಶೆಟ್ಟಿ, ಸುಚಿತಾ ಕೆ. ಶೆಟ್ಟಿ, ಸಾರಿಕಾ ವಿ. ಶೆಟ್ಟಿ, ಕವಿತಾ ಐ. ಆರ್‌. ಶೆಟ್ಟಿ, ಯಶೋದಾ ಶೆಟ್ಟಿ ಇವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next