Advertisement

ಶಿಕ್ಷಣ ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರ

10:59 AM Feb 19, 2018 | |

ಕಾಳಗಿ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಮಾಡುವಂತಹ ಕೆಲಸಗಳನ್ನು ಮಠ ಮಂದಿರಗಳು ಮಾಡುತ್ತಿವೆ ಎಂದು ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು.

Advertisement

ಪಟ್ಟಣದ ಶ್ರೀ ಶಿವಬಸವೇಶ್ವರ ದಕ್ಷಿಣಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್‌ ಸಂಚಾಲಿತ ಶಿವಬಸವೇಶ್ವರ ಹಿರಿಯ ಹಾಗೂ ಕಾಳಪ್ಪಗೌಡ ಪ್ರೌಢಶಾಲೆ 17ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ 17 ವರ್ಷಗಳಿಂದ ಕಾಳಗಿ ಪಟ್ಟಣದಲ್ಲಿ ಪೂಜ್ಯ ಶಿವಬಸವ ಶಿವಾಚಾರ್ಯರು ತಮ್ಮ ಮಠದಲ್ಲಿ ಅನ್ನ ದಾಸೋಹದ ಜತೆಗೆ ಸಾವಿರಾರು ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಶಿವಬಸವೇಶ್ವರ ಶಾಲೆಯಲ್ಲಿ ಮಾನವಿಯ ಮೌಲ್ಯ, ಉತ್ತಮ ಸಂಸ್ಕಾರ, ಶಿಸ್ತು-ಸಂಯಮ ಎದ್ದು ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಶ್ರೀಮಠ ಬೃಹತ್‌ ಜ್ಞಾನಭಂಡಾರವಾಗಿ ಬೆಳೆಯಬೇಕು. 

ಅದಕ್ಕೆ ಬೇಕಾದ ಸಕಲ ಸೌಲಭ್ಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸೊಂತ ಪೂಜ್ಯ ಶಿವಕುಮಾರ ಶಿವಾಚಾರ್ಯರು ದಕ್ಷಿಣಕಾಶಿ ದಿನದರ್ಶಿಕೆ ಬಿಡುಗಡೆ ಮಾಡಿದರು. 

ಸಂಸ್ಥೆ ಅಧ್ಯಕ್ಷ ಪೂಜ್ಯ ಶಿವಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶರಣಗೌಡ ಪೊಲೀಸ್‌ಪಾಟೀಲ ಮಾತನಾಡಿದರು. ಸುಗೂರ(ಕೆ) ವೆಂಕಟೇಶ್ವರ ದೇವಸ್ಥಾನದ
ಪವನದಾಸ ಮಹಾರಾಜರು, ಜೇಮ್‌ ಸಿಂಗ್‌ ಮಹಾರಾಜರು, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ತಾಪಂ ಸದಸ್ಯೆ ರತ್ನಮ್ಮ ಗುತ್ತೇದಾರ, ಸಂಸ್ಥೆ ಪ್ರಧಾನ ಸತ್ಯನಾರಾಯಣ ವನಮಾಲಿ, ಗ್ರಾಪಂ ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಚಂದ್ರಶೇಖರ ಹರಸೂರ, ಶಿವಶರಣಪ್ಪ ಗುತ್ತೇದಾರ, ದೀಪಸಿಂಗ ಕಾರಬಾರಿ, ಸಂಸ್ಥೆ ಆಡಳಿತಾಧಿಕಾರಿ ಶರಣು ಪಾಟೀಲ ಮಳಗಿ ಇದ್ದರು. ಶಿಕ್ಷಕಿ ನಾಗವೇಣಿ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ಸತೀಶ ಪಾಟೀಲ ಸ್ವಾಗತಿಸಿದರು.

Advertisement

ಶರಣು ಕೋರವಾರ ಬಹುಮಾನ ವಿತರಿಸಿದರು. ಲಕ್ಷ್ಮೀàಕಾಂತ ಗಂಗಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬಾಬುರಾವ ಪೂಜಾರಿ ನಿರೂಪಿಸಿದರು, ಪ್ರಕಾಶ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next