Advertisement

Israel: ಮುಂದುವರಿದ ಇಸ್ರೇಲ್-ಹಮಾಸ್ ಯುದ್ಧ; 600 ದಾಟಿದ ಸಾವಿನ ಸಂಖ್ಯೆ!

01:49 PM Oct 08, 2023 | Team Udayavani |

ಗಾಜಾ ಪಟ್ಟಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ಹಠಾತ್ ದಾಳಿ ನಡೆಸಿದ 24 ಗಂಟೆಗಳ ನಂತರವೂ ದಕ್ಷಿಣ ಇಸ್ರೇಲ್‌ನ ಹಲವು ಭಾಗಗಳಲ್ಲಿಇಸ್ರೇಲ್ ಮಿಲಿಟರಿ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವಿನ ಗುಂಡಿನ ಚಕಮಕಿ ಮುಂದುವರಿದಿದೆ.

Advertisement

ಲೆಬನಾನ್‌ ನಿಂದ ಮಾರ್ಟರ್ ಶೆಲ್ ದಾಳಿ ನಡೆಸಲಾಗಿದೆ. ಲೆಬನಾನಿನ ಇಸ್ಲಾಮಿಸ್ಟ್ ಗುಂಪು ಹೆಜ್ಬೊಲ್ಲಾಹ್ ಭಾನುವಾರ ಇಸ್ರೇಲಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಲೆಬನಾನ್‌ ಗೆ ಫಿರಂಗಿ ದಾಳಿ ಮತ್ತು ಗಡಿಯ ಸಮೀಪವಿರುವ ಹೆಜ್ಬುಲ್ಲಾ ಪೋಸ್ಟ್‌ನ ಮೇಲೆ ಡ್ರೋನ್ ದಾಳಿಯ ಮೂಲಕ ಪ್ರತಿಕ್ರಿಯಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಶನಿವಾರ ಬೆಳಗ್ಗೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಪ್ರಾರಂಭಿಸಿದ ದಾಳಿಯ ನಂತರ ಪ್ರಾರಂಭವಾದ ಇತ್ತೀಚಿನ ಸಂಘರ್ಷದಲ್ಲಿ ಇದುವರೆಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡರಲ್ಲೂ ಸುಮಾರು 500 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ICC World Cup 2023; ಭಾರತ- ಆಸೀಸ್ ಕದನಕ್ಕೆ ಚೆನ್ನೈ ಸಜ್ಜು; ಗಿಲ್-ಸ್ಟೋಯಿನಸ್ ಔಟ್

ಹಮಾಸ್ ಸಶಸ್ತ್ರ ವಿಭಾಗ ಕಸ್ಸಾಮ್ ಬ್ರಿಗೇಡ್ಸ್, ಇಸ್ರೇಲ್‌ ನ ಹಲವಾರು ಪ್ರದೇಶಗಳಲ್ಲಿ ತನ್ನ ಹೋರಾಟಗಾರರು ಇನ್ನೂ ತೀವ್ರ ಘರ್ಷಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದೆ.

Advertisement

ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್‌ ನಲ್ಲಿ ಹಮಾಸ್‌ ಉಗ್ರರಿಂದ 300 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು, ಪ್ರತೀಕಾರದ ಮಿಲಿಟರಿ ಕ್ರಮವಾಗಿ ಇಸ್ರೇಲ್ ರಕ್ಷಣಾ ಪಡೆಗಳು ಪ್ರಾರಂಭಿಸಿದ ಆಪರೇಷನ್ ಐರನ್ ಸ್ವೋರ್ಡ್ಸ್ ನಲ್ಲಿ ಗಾಜಾದಲ್ಲಿ 313 ಜೀವಗಳನ್ನು ಬಲಿ ತೆಗೆದುಕೊಂಡಿತು, ಒಟ್ಟು ಸಾವಿನ ಸಂಖ್ಯೆ 613 ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next