Advertisement
ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ರಾಜ್ಯ ಕ್ರಿಕೆಟ್ ಸಂಸ್ಥೆಯ ದಿಗ್ಗಜರ ಸಮ್ಮುಖದಲ್ಲಿ ಶಾಮನೂರಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮೈದಾನ ನಿರ್ಮಾಣ ಆಗಲಿದೆ ಎಂಬಂತ ಸ್ಥಿತಿ ಅಂದುಇತ್ತು.
Related Articles
Advertisement
ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ವಿನಯಕುಮಾರ್ ಸಹ ಸಂತಸ ವ್ಯಕ್ತಪಡಿಸಿ, ನನ್ನ ಹುಟ್ಟೂರಾದ ದಾವಣಗೆರೆಯಲ್ಲಿ ಮೈದಾನ ಆಗುತ್ತಿರುವುದುನನಗೆ ಸಂತಸ ತಂದಿದೆ. ಆದಷ್ಟು ಬೇಗ ಮೈದಾನ ನಿರ್ಮಾಣ ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದರು. ಕ್ರಿಕೆಟ್ ಮೈದಾನ ನಿರ್ಮಾಣ ಕಾರ್ಯ ಈಗಾಗಲೇ ಆರಂಭ ಆಗಬೇಕಿತ್ತು. ಆದರೆ, ಐಪಿಎಲ್ ಪಂದ್ಯಾವಳಿ ಆರಂಭವಾಗಿದ್ದರಿಂದ ಪಿಚ್ ನಿರ್ಮಾಣ ಕಾರ್ಯ ನಿಭಾಯಿಸುವರರು ಐಪಿಎಲ್ ಪಂದ್ಯ ನಡೆಯುವ ಮೈದಾನದ ನಿಗಾವಹಿಸಬೇಕಾಯಿತು. ಇದೇ ಕಾರಣಕ್ಕೆ ಇಲ್ಲಿನ ಮೈದಾನದ ಕಾರ್ಯ ಇನ್ನೂ ಆರಂಭವಾಗಿಲ್ಲ ಎನ್ನುತ್ತವೆ ಮೂಲಗಳು. ಇದರ ಜೊತೆಗೆ ಇಲ್ಲಿ ನಿರ್ಮಾಣ ಆಗಲಿರುವ ಮೈದಾನ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರಲಿದೆ. ರಣಜಿ, ಕೆಪಿಎಲ್,
ವಲಯ ಮಟ್ಟದ ಪಂದ್ಯಾವಳಿ ಸೇರಿದಂತೆ ದೇಸಿಯ ಕ್ರಿಕೆಟ್ ಪಂದ್ಯ ಆಯೋಜಿಸಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮೈದಾನದಲ್ಲಿ ಒದಗಿಸುವ ಯೋಜನೆ ಸದ್ಯ ರೂಪುಗೊಳ್ಳುತ್ತಿದೆ. ಮುಂದಿನ ವರ್ಷ ರಣಜಿ ಪಂದ್ಯ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ನಮ್ಮೂರಲ್ಲಿ ರಣಜಿ, ಕೆಪಿಎಲ್ ಪಂದ್ಯಗಳು ನಡೆಯಲಿವೆ. ರಾಜ್ಯ ತಂಡದಲ್ಲಿನ ಮನೀಶ್ ಪಾಂಡೆ, ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರವಾಲ್ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರ ಆಟವನ್ನು ನೇರವಾಗಿ ನೋಡುವ ಅವಕಾಶ ದೊರೆಯಲಿದೆ. ಅಂತಾರಾಷ್ಟ್ರೀಯ ಮೈದಾನ ಆಗಲಿದೆ ನಮ್ಮ ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ಮೈದಾನ ನಿರ್ಮಾಣ ಮಾಡುವ ಕನಸನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೊಂದಿದ್ದರು. ಅವರ ಪ್ರಯತ್ನದಿಂದಾಗಿ 8.5 ಎಕರೆ ವಿಶಾಲವಾದ ಜಮೀನು ಕ್ರಿಕೆಟ್ ಮೈದಾನಕ್ಕೆ ಸಿಕ್ಕಿದೆ. ಇಲ್ಲೊಂದು ಸುಸಜ್ಜಿತ, ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವ ಅವರ ಕನಸು ಶೀಘ್ರ ನನಸಾಗಲಿದೆ. 15 ದಿನಗಳಲ್ಲಿ ಮೈದಾನ ನಿರ್ಮಾಣ ಕಾರ್ಯ ಆರಂಭ ಆಗಲಿದೆ.
ಕೆ. ಶಶಿಧರ್, ಕೆಎಸ್‌ಸಿಐ ಸದಸ್ಯ. ಪಾಟೀಲ ವೀರನಗೌಡ