Advertisement
ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಯಲ್ಲಾಪುರ ಗ್ರಾಮ ಘಟಕ, ಮಹಿಳಾ ಘಟಕಗಳ ಉದ್ಘಾಟನೆ, ಕಿತ್ತೂರು ಚನ್ನಮ್ಮನವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಂಘಟನೆಯಲ್ಲಿ ಸರ್ವಶಕ್ತಿ ಅಡಗಿದ್ದು, ಸಮಾಜ ಸಂಘಟನೆಯಾದರೆ ನ್ಯಾಯಯುತ, ಕಾನೂನು ಬದ್ಧ ಬೇಡಿಕೆಗಳು ಈಡೇರಲು ಸಾಧ್ಯ ಎಂದರು.
Related Articles
Advertisement
ರಾಜ್ಯ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಹುಲ್ಲತ್ತಿ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ, ಸಮಾಜದ ಬೆಳಕಾಗಿ ಕಾರ್ಯನಿರ್ವಹಿಸುತ್ತಿರುವ ಹರಿಹರ ಪೀಠಕ್ಕೆ ಸಮಾಜ ಬಾಂಧವರು ತನು, ಮನ, ಧನ ಸೇವೆಗೆ ಸನ್ನದ್ಧರಾಗೋಣ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ರೈತರು, ನೌಕರರು, ನಿವೃತ್ತ ಶಿಕ್ಷಕರು, ಗಣ್ಯರು, ಮಹಿಳೆಯರು ಸೇರಿ 150ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಗ್ರಾಮದಲ್ಲಿ ಸಕಲ ವಾದ್ಯಗಳೊಂದಿಗೆ ನಡೆದ ವೀರರಾಣಿ ಕಿತ್ತೂರ ಚನ್ನಮ್ಮಾಜಿ ಭಾವಚಿತ್ರದ ಮೆರವಣಿಗೆಗೆ ಪೂರ್ಣಕುಂಭದೊಂದಿಗೆ ಭಾಗವಹಿಸಿದ್ದ ಸಮಾಜದ ಮಹಿಳೆಯರು ಮೆರಗು ತಂದರು.
ಕಾರ್ಯಕ್ರಮದಲ್ಲಿ ಶಿವನಗೌಡ ಭರಮಗೌಡ, ತಿರಕಪ್ಪ ಪ್ಯಾಟಿ. ಶಿವನಗೌಡ ನರಸಮ್ಮನವರ ಚಂದ್ರಶೇಖರ ಅಂಗಡಿ, ನಾಗಪ್ಪ ಅಕ್ಕೂರ, ಎಂ.ಎನ್.ನರಸಮ್ಮನವರ, ತಿರುಪತಿ ಅಕ್ಕೂರ, ಬಿ.ಎಂ. ಅಂಗಡಿ, ಎಸ್.ಬಿ. ಮತ್ತೂರ, ಜೆ.ಎಸ್ .ನರಸಮ್ಮನವರ, ಬಿ.ಡಿ. ಮತ್ತೂರ, ಎನ್. ಎನ್., ಸೋಮನಕಟ್ಟಿ, ಎಸ್.ಎನ್. ಭರಮಗೌಡ್ರ,ನೀಲವ್ವ ಸೋಮನಕಟ್ಟಿ, ವಿದ್ಯಾ ಅಕ್ಕೂರ, ರೇಣುಕಾ ಪಾಟೀಲ ಸೇರಿ ಸಮಾಜದ ಹಿರಿಯರು ಉಪಸ್ಥಿತರಿದ್ದರು. ಯಲ್ಲಾಪುರ ಮತ್ತು ಸುತ್ತಲಿನ ಗ್ರಾಮಗಳ ಸಮಾಜ ಬಾಂಧವರು, ಪಿ.ಬಿ. ಕಾಳಪ್ಪನವರ ಸೇರಿದಂತೆ ತಾಲೂಕು ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೂ ಅದರ ಋಣ ತೀರಿಸುವ ನೈತಿಕ ಹೊಣೆ ಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ. ಹರಿಹರ ಪೀಠ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಕೇವಲ ಪ್ರತಿಭಟನೆ, ಹೋರಾಟಕ್ಕಿಳಿಯದೇ ಸಾಂವಿಧಾನಾತ್ಮಕ, ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ.ಶ್ರೀ ಜ|ವಚನಾನಂದ ಸ್ವಾಮೀಜಿ,
ಹರಿಹರ ಪೀಠ