Advertisement
ಮಲೇಬೆನ್ನೂರಿನ ಡಾ| ರಾಜಕುಮಾರ್ ಬಡಾವಣೆಯಲ್ಲಿ ಬಸವ ಬಳಗ ಮತ್ತು ಅಕ್ಕನ ಬಳಗದವರು ಸೋಮವಾರ ಏರ್ಪಡಿಸಿದ್ದ ಬಸವ ಮಂಟಪ ಕಟ್ಟಡದ ಭೂಮಿಪೂಜೆ ಹಾಗೂ ಶರಣ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವತತ್ವವು ವಿಶ್ವ ತತ್ವವಾಗಿದ್ದು ಸರ್ವರನ್ನೂ ಒಳಗೊಳ್ಳುವ, ಒಗ್ಗೂಡಿಸುವ ತತ್ವವಾಗಿದ್ದು, ನಮ್ಮ ಸಂವಿಧಾನದಲ್ಲೂ ಬಸವಣ್ಣವರ ಆಶಯ ಅಳವಡಿಸಿಕೊಳ್ಳಲಾಗಿದೆ ಎಂದರು.
Related Articles
ಅಕ್ಕನ ಬಳಗದವರಿಗೆ ಬಸವ ಹೃದಯವಿದೆ ಎಂದು ಪ್ರಶಂಸಿದರು. ಇಲ್ಲಿ ಸಾಂಸ್ಕೃತಿಕ ಪ್ರಜ್ಞೆಗೆ ಒಳಗೂಡಿ ಶರಣರಲ್ಲಿ ಒಡನಾಟವೂ ಇರುತ್ತೆ, ಒಳನೋಟವೂ ಇರುತ್ತೆ. ಬಸವತತ್ವಕ್ಕೆ ಯಾವುದೇ ರೇಖೆಗಳನ್ನು ಹಾಕಬಾರದು.
Advertisement
ಜಾತಿ, ಧರ್ಮ, ಮತಗಳ ಹೆಸರಲ್ಲಿ ದಾಂದಲೆಗೆ ಸಿಲುಕಿದ್ದೇವೆ. ಈ ಸಂದರ್ಭಧಲ್ಲಿ ಬಸವತತ್ವ ವಿಶಾಲಾರ್ಥದಲ್ಲಿ ವ್ಯಾಖ್ಯಾನ ಮಾಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂದೇಶ ನೀಡಿ, ಅಕ್ಕಮಹಾದೇವಿ ಮತ್ತು ಬಸವಣ್ಣ ಈ ನಾಡಿಗೆ ಬೆಳಕನ್ನು ಕೊಟ್ಟವರು.
ಅಜ್ಞಾನವನ್ನು ಕಳೆದವರು, ಸುಜ್ಞಾನದ ಸುಧೆ ನೀಡಿದವರು, ನೋವಿದ್ದರೂ ಸಮಾಧಾನಿಯಾಗಿದ್ದು ಬದುಕಿನಲ್ಲಿ ಸಾರ್ಥಕತೆ ಮೆರೆದವರು ಎಂದರು. ಜಗತ್ತಿನ ಯಾವುದೇ ಧರ್ಮವು ಸಂಕುಚಿತ ಗೋಡೆ ಕಟ್ಟಲು ಹೇಳಿಲ್ಲ. ಒಬ್ಬ ಮತ್ತೂಬ್ಬನನ್ನು ಗೌರವಿಸಬೇಕೆಂದೇ ಹೇಳಿದೆ. ಪ್ರಸ್ತುತ ಧರ್ಮದ ಹೆಸರಿನಲ್ಲಿ ನರಮೇಧ ನಡೆಯುತ್ತಿರುವುದನ್ನು ಕಾಣುತ್ತೇವೆ. ಈ ಸಣ್ಣತನ ಕಳೆದು ಸಮಾಜವನ್ನು ಕಟ್ಟಿ ಬೆಳೆಸಲು ಗಟ್ಟಿತನ ಅಗತ್ಯವಾಗಿದೆ. ಶರಣರು ಸಾಮ್ರಾಜ್ಯ ಕಟ್ಟದೆ, ಡಾಕ್ಟರೇಟ್ ಪದವಿ ಪಡೆಯದೇ ಅರಿವು ಆಚಾರದಿಂದ ಅನುಭವ ಮಂಟಪವನ್ನು ಕಟ್ಟಿ ಆ ಮೂಲಕ ಸಾಮಾನ್ಯರನ್ನು ಶರಣರನ್ನಾಗಿಸಿದ್ದಾರೆ ಎಂದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಹರಿಹರ ತಾಲೂಕಿನಲ್ಲಿ ವಿವಿಧ ಪೀಠಗಳು ಸ್ಥಾಪನೆಗೊಂಡಿವೆ. ಹಾಗೇನೆ ಮಲೇಬೆನ್ನೂರಿನಲ್ಲಿ ಅನುಭವ ಮಂಟಪ ಪ್ರಾರಂಭವಾಗುವುದರ ಮೂಲಕ ಹರಿಹರ ತಾಲೂಕು ಧರ್ಮದ ಬೀಡಾಗಲಿದೆ. ಅನುಭವ ಮಂಟಪಕ್ಕೆ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.
ಬಸವ ಬಳಗದ ಅಧ್ಯಕ್ಷ ವೈ. ನಾರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಕೂಡಲಸಂಗಮದ ಲಿಂಗಾಯಿತ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಸ್ವಾಮೀಜಿ, ಚಿತ್ರದುರ್ಗ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬಳ್ಳೇಕಟ್ಟೆ ಕುಂಬಾರ ಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಧರ್ಮ ಪೀಠಾಧ್ಯಕ್ಷೆ ಡಾ| ಗಂಗಾಮಾತಾಜಿ, ನಾಗಲಾಂಬಿಕೆ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ನಿಖಿಲ್ ಕೊಂಡಜ್ಜಿ, ಮಂಜುನಾಥ ಪಟೇಲ್, ಓ.ಜಿ. ರುದ್ರಗೌಡ, ಶಿವಾಜಿಪಾಟೀಲ್, ಇಂದೂಧರ್, ನಂದಿತಾವರೆ ತಿಮ್ಮನಗೌಡ, ಮೈಲಾರಪ್ಪ, ವಿಜಯಕುಮಾರ್, ಲಿಂಗರಾಜ್, ಎಚ್ .ಟಿ. ಪರಮೇಶ್ವರಪ್ಪ, ಅಜೇಯಗೌಡ, ರಾಷ್ಟ್ರೀಯ ಬಸವದಳ ಹಾಗೂ ಬಸವ ಬಳಗ ಮತ್ತು ಅಕ್ಕನ ಬಳಗದ ಸದಸ್ಯರು ಹಾಜರಿದ್ದರು.