Advertisement

ಸಂವಿಧಾನವೇ ಬೃಹತ್‌ ನೀತಿ ನಿರೂಪಕ ದಾಖಲೆ

11:43 AM Jan 21, 2018 | Team Udayavani |

ಬೆಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ನೀತಿ ನಿರೂಪಕ ದಾಖಲೆ (ಪಬ್ಲಿಕ್‌ ಪಾಲಿಸಿ ಡಾಕ್ಯುಮೆಂಟ್‌) ಎಂದರೆ ಸಂವಿಧಾನ ಎಂದು ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯಮೂರ್ತಿ ಚಲಮೇಶ್ವರ ಅಭಿಪ್ರಾಯಪಟ್ಟರು.

Advertisement

ಗೋಕುಲ ಶಿಕ್ಷಣ ಪ್ರತಿಷ್ಠಾನದಿಂದ ಶನಿವಾರ ಎಂ.ಎಸ್‌.ರಾಮಯ್ಯ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ರಾಮಯ್ಯ ಪಬ್ಲಿಕ್‌ ಪಾಲಿಸಿ ಸೆಂಟರ್‌’ ಉದ್ಘಾಟಿಸಿ ಮಾತನಾಡಿದರು. ಅವರು, ಭಾರತದ ಸಂವಿಧಾನದಲ್ಲಿ ದೇಶದಲ್ಲಿ ಸರ್ಕಾರದ ಪಾತ್ರ ಏನು ಎಂಬುದನ್ನು ಸ್ಪಷ್ಟ ಹಾಗೂ ಸರಳ ರೀತಿಯಲ್ಲಿ ತಿಳಿಸಲಾಗಿದೆ. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಪ್ರತಿಯೊಬ್ಬರಿಗೂ ಅಗಾಧವಾದ ಜ್ಞಾನ ಇತ್ತು ಎಂದು ಹೇಳಿದರು.

ಸಂವಿಧಾನದ ಗುರಿಯ ಅನುಷ್ಠಾನದ ಬಗ್ಗೆಯೂ ಯುವ ಪೀಳಿಗೆ ಯೋಚಿಸಬೇಕಿದೆ. ಆಧುನಿಕತೆಗೆ ತಕ್ಕಂತೆ ಸಮಾಜದಲ್ಲಿ ಹಲವು ಬದಲಾವಣೆ ಆಗುತ್ತಿರುತ್ತದೆ. ಅದೇ ರೀತಿ ತಂತ್ರಜ್ಞಾನವೂ ವೇಗವಾಗಿ ಸಾಗುತ್ತಿದೆ. ನೀತಿ ನಿರೂಪಕರು ವಿಶಾಲ ದೃಷ್ಟಿಕೋನದಲ್ಲಿ ಈ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು. 

ದೇಶದಲ್ಲಿ ಖಾಸಗಿ ವಲಯದ ಸೌಲಭ್ಯ, ವ್ಯವಸ್ಥೆ ಹಾಗೂ ನಿರ್ವಹಣೆ ತುಂಬಾ ಉತ್ತಮವಾಗಿರುತ್ತದೆ. ಸರ್ಕಾರಿ ವಲಯದಲ್ಲಿ ಈ ರೀತಿಯ ಸೌಲಭ್ಯ ಹಾಗೂ ನಿರ್ವಹಣೆ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ.ಈ ಬಗ್ಗೆ ಯೋಚಿಸುವ ಅಗತ್ಯವಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಪದ್ಮಭೂಷಣ ಡಾ.ಅನಿಲ್‌ ಕಾಕೊಡ್ಕರ್‌, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಎಸ್‌.ವಿ.ರಂಗನಾಥ್‌, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತರಾಂ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಅರ್‌.ಜಯರಾಮ್‌ ಉಪಸ್ಥಿತರಿದ್ದರು.

Advertisement

ನೀತಿ ಕೇಂದ್ರ: ರಾಮಯ್ಯ ಸಾರ್ವಜನಿಕ ನೀತಿ ಕೇಂದ್ರದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ನೀತಿ, ರಾಷ್ಟ್ರೀಯ ಆರೋಗ್ಯ ನೀತಿ, ನದಿ ನೀರಿನ ಹಂಚಿಕೆ, ವಿಶ್ವವಿದ್ಯಾಲಯದ ಆಡಳಿತ, ಸ್ಥಳೀಯ ಹವಮಾನ, ಭಾರತೀಯ ಪಾರಂಪರಿಕ ಕಾನೂನು, ಸಾಂಸ್ಕೃತಿಕ ಮಾಹಿತಿ ಇತ್ಯಾದಿ ವಿಷಯಗಳ ಬಗ್ಗೆ ಸಂಶೋಧನೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ನ ಸನ್ಯಾಸಿ: ನ್ಯಾ.ಚೆಲಮೇಶ್ವರ ಅವರ ಆತ್ಮವು ಸತ್ಯ ಮತ್ತು ಧೈರ್ಯದ ಒಡನಾಡಿಯಾಗಿದೆ. ಅವರ ವ್ಯಕ್ತಿತ್ವ ಆಯಾಮಗಳನ್ನು ವಿವರಿಸುವುದು ಅಸಾಧ್ಯ. ಹೀಗಾಗಿಯೇ ಅವರು ಸುಪ್ರೀಂ ಕೋರ್ಟ್‌ನ ಸನ್ಯಾಸಿ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಬಣ್ಣಿಸಿದರು. ಹಾಗೆಯೇ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಅರ್‌.ಜಯರಾಂ ಅವರು ಅರಮನೆಯಲ್ಲಿರುವ ಸನ್ಯಾಸಿ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next