Advertisement
ಇಂದು ತಮಟೆ ವಾದ್ಯ ಈ ಸಮುದಾಯದ ಅವಿಭಾಜ್ಯ ಅಂಗವಾಗಿದೆ. ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿದೆ. ಇಂತಹ ವಾದ್ಯವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ರಾಜ್ಯದಲ್ಲಿ ತುಳಿತಕ್ಕೆ ಒಳಗಾಗಿದ್ದು, ಇವರ ಕೂಗನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನೆರೆಯ ಆಂಧ್ರ ಸರ್ಕಾರ ಈಗಾಗಲೇ ಈ ತಮಟೆ ಕಲಾವಿದರಿಗೆ ತಿಂಗಳಿಗೆ 3 ಸಾವಿರ ರೂ. ಮಾಸಾಶನ ಘೋಷಣೆ ಮಾಡಿದ್ದು, ನಮ್ಮ ರಾಜ್ಯದಲ್ಲೂ ಈ ಯೋಜನೆ ಅನುಷ್ಠಾನವಾಗಬೇಕಿದೆ.
Related Articles
Advertisement
ತಮಟೆ ಕಲಾವಿದರ ಬೇಡಿಕೆಗಳು: ಪ್ರತಿ ತಮಟೆ ಕಲಾವಿದನಿಗೆ 3 ಸಾವಿರ ಮಾಸಾಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯ, ರಾಜ್ಯ ಸರ್ಕಾರದ ವಿವಿಧ ಕ್ಷೇತ್ರದ ಪ್ರಶಸ್ತಿಗೆ ತಮಟೆ ಕಲಾವಿದರನ್ನು ಪರಿಗಣಿಸುವುದು, ಜಾನಪದ ಸಾಹಿತ್ಯ ಅಕಾಡಮಿಯ ಸ್ಥಾನಮಾನ ಕಲ್ಪಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಹತ್ತಾರು ವರ್ಷದಿಂದ ಮಾಡುತ್ತಿದ್ದ ಹೋರಾಟ, ಶ್ರೀನಿವಾಸ್ ಸಾವಿನಿಂದ ಮೂಲೆಗೆ ಸೇರಿದ್ದು, ಸರ್ಕಾರ ಈ ಬಡ ನೊಂದ ಜೀವಗಳ ಕೈಹಿಡಬೇಕೆಂದು ರಾಜ್ಯಾದ್ಯಂತ ಮಾದಿಗ ಸಮುದಾಯದ ಒತ್ತಾಯವಾಗಿದೆ. ಆದರೆ, ಸರ್ಕಾರದ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.
ನಮ್ಮ ಕಲೆ, ಸಂಸ್ಕೃತಿಗೆ ಸರ್ಕಾರಗಳು ಬೆಲೆ ನೀಡಿಲ್ಲ. ಈ ಸರ್ಕಾರವಾದರೂ ನಮ್ಮ ಕೂಗಿಗೆ ಸ್ಪಂದಿಸಿದರೆ, ಸಾವಿರಾರು ತಮಟೆ ಕಲಾವಿದರ ಬದುಕು ಬೀದಿಗೆ ಬೀಳದೆ ತುತ್ತು ಅನ್ನ ತಿಂದು ಬದುಕುತ್ತಾರೆ.-ಐಡಿಹಳ್ಳಿ ಬಾಲಕೃಷ್ಣ, ರಾಜ್ಯ
ಕಾರ್ಯದರ್ಶಿ, ತಮಟೆ ಕಲಾವಿದರ ಸಂಘ ನನ್ನ ಮತಕ್ಷೇತ್ರದಲ್ಲಿ 4ರಿಂದ 5 ಸಾವಿರದಷ್ಟು ತಮಟೆ ಕಲಾವಿದರಿದ್ದಾರೆ. ಈ ಕಲೆ ಧರ್ಮದ ಜೊತೆ ಹುಟ್ಟಿದ್ದು, ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ. ಇದನ್ನೇ ನಂಬಿರುವ ಈ ಸಮುದಾಯದ ಕೈಹಿಡಿಯುವುದು ಸರ್ಕಾರದ ಕರ್ತವ್ಯ. ಸರ್ಕಾರ ಕೂಡಲೇ ಈ ಕಲಾವಿದರಿಗೆ ಮಾಸಾಶನ ನೀಡಲು ಮುಂದಾಗಬೇಕು. ಈ ವಿಚಾರವಾಗಿ ಅವಕಾಶ ಸಿಕ್ಕರೆ ಸದನದಲ್ಲಿ ಧ್ವನಿಯಾಗುತ್ತೇನೆ.
-ಎಂ.ವಿ.ವೀರಭದ್ರಯ್ಯ, ಶಾಸಕ, ಮಧುಗಿರಿ – ಮಧುಗಿರಿ ಸತೀಶ್