Advertisement
ನರೇಂದ್ರ ಮೋದಿ ದಿಟ್ಟ ಪ್ರಧಾನಿ* ಕನ್ನಡ ಭಾಷಾ ಮಾಧ್ಯಮ ಕುರಿತು ಚರ್ಚಿಸಲು ನಾನು ಮತ್ತು ಕಂಬಾರರು ಮೋದಿಯನ್ನು ಭೇಟಿ ಮಾಡಿದ್ದೆವು. ನಾನು ಎಷ್ಟು ಸಿದ್ಧನಾಗಿದ್ದೆನೋ ಅದಕ್ಕಿಂತ ಹೆಚ್ಚು ಮಾಹಿತಿ ಅವರಲ್ಲಿತ್ತು. ಅವರು ನಿಜಕ್ಕೂ ಬುದ್ಧಿವಂತರು.
Related Articles
Advertisement
* ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಹಿಂದೂ ಸಮಾಜದ ಒಗ್ಗಟ್ಟನ್ನು ಕಂಡು, ಜಾತಿಗಳಾಗಿ ಒಡೆದು ಹಾಕಿದರು. ಹಿಂದೂಗಳಿಗೆ ಬ್ರೂಟ್ ಮೆಜಾರಿಟಿ ಇದೆ. ನಿಮ್ಮನ್ನು ತುಳಿದುಬಿಡ್ತಾರೆ ಎಂದು ಮುಸಲ್ಮಾನರಲ್ಲಿ ಆತಂಕ ಹುಟ್ಟಿಸಿ, ಮುಸ್ಲಿಂ ಸಮು ದಾಯದರನ್ನು ಓಟ್ ಬ್ಯಾಂಕಾಗಿ ಸೃಷ್ಟಿಮಾಡಿ ಕೊಂಡರು. ಅದೇ ತಂತ್ರವನ್ನು ಸ್ವಾತಂತ್ರಾನಂತರ ನೆಹರೂ ಅನುಸರಿಸಿದರು. ಕಾಂಗ್ರೆಸ್, ಇಂದಿಗೂ ಅದೇ ಐಡಿಯಾಲಜಿಯನ್ನು ಅನುಸರಿಸುತ್ತಿದೆ.
* ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಇಂದು ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಇದು ಬದಲಾಗಬೇಕು. ಮತದಾನ ಶುದ್ಧವಾಗಬೇಕು.
ಎನ್‌ಆರ್‌ಸಿ ಅನಿವಾರ್ಯ* 23 ವರ್ಷ ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರಿಗೆ ಆಸ್ಪದ ನೀಡಿದ್ದರಿಂದ ಸಿಎಎ , ಎನ್‌ಆರ್‌ಸಿ ಇಂದು ಅನಿವಾರ್ಯವಾಗಿದೆ. ಈ ಎರಡೂ ಕಾನೂನುಗಳನ್ನು ಈಗಲ್ಲದಿದ್ದರೆ ಮತ್ತೆ ಯಾವಾಗ ಜಾರಿ ಮಾಡಬೇಕು. ಇಷ್ಟು ದಿನ ಆಗದಿರುವುದು ಮುಂದೆ ಆಗುತ್ತದೆಯೇ? * ಸ್ವಾತಂತ್ರಾನಂತರ ಫಕ್ರುದ್ದೀನ್ ಅಲಿಯವರು ಪಶ್ಚಿಮ ಬಂಗಾಳದ ಮೂಲಕ ಲಕ್ಷಾಂತರ ಬಾಂಗ್ಲಾ ವಲಸಿಗರನ್ನು ತುಂಬಿದರು. ಇದರಿಂದ ಸ್ಥಳೀಯರು ಅಸ್ಸಾಂನಲ್ಲಿ ದೊಡ್ಡ ಚಳವಳಿ ಮಾಡಿದರು. ಅದಕ್ಕಾಗಿಯೇ ತಮಗೆ ವಿಧೇಯರಾಗಿರಲು ಇಂದಿರಾಗಾಂಧಿಯವರು ಅವರಿಗೆ ರಾಷ್ಟ್ರಪತಿ ಹುದ್ದೆ ಕೊಟ್ಟರು. * ಕೆಲವರು ಜೆಎನ್‌ಯು ವಿದ್ಯಾರ್ಥಿಗಳನ್ನು ತಮ್ಮ ಸ್ವಾರ್ಥಗಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಯಾವ ವಿವಿಗೂ ಕೊಡದಷ್ಟು ಹಣ ವನ್ನು ಜೆಎನ್‌ಯುಗೆ ನೀಡಲಾಗುತ್ತಿದೆ. ಇದೆಲ್ಲ ಜನರ ತೆರಿಗೆ ಹಣ. ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್. ಅದಕ್ಕೂ, ವಿದ್ಯಾರ್ಥಿ ಗಳಿಗೂ ಸಂಬಂಧವಿಲ್ಲ. ವಿದ್ಯಾರ್ಥಿಗಳು ಓದಬೇಕು. ಅಧ್ಯಯನಕ್ಕೆ ಕೊರತೆ ಇರುವುದನ್ನು ಪೂರೈಸಿ ಅಂತಾ ಕೇಳಬೇಕು. ಅದನ್ನು ಬಿಟ್ಟು ರಾಜಕೀಯ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡಬಾರದು. * ಸಾಹಿತಿಗಳಿಗೆ ಯಾವುದೇ ಅಜೆಂಡಾ ಇರಬಾರದು. ಸ್ವತಂತ್ರವಾಗಿ ಯೋಚಿಸಬೇಕು. ನಾನು ಇಂತಹ ಯಾವುದೇ ಗುಂಪಿಗೆ ಸೇರಿದವನಲ್ಲ. ನಾನು ಚಿಕ್ಕಂದಿನಿಂದ ಬಹಳ ಕಷ್ಟಪಟ್ಟು ಓದಿದ್ದಕ್ಕೆ ಈವತ್ತು ಲೇಖಕನಾಗಲು ಸಾಧ್ಯವಾಯ್ತು. ವಿದ್ಯಾರ್ಥಿಗಳ ಹೋರಾಟ ಎಂದಿಗೂ ಶೈಕ್ಷಣಿಕ ಅಗತ್ಯತೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ, ಕೆಲವರು ವಿದ್ಯಾರ್ಥಿಗಳನ್ನು ಅಡ್ಡ ದಾರಿಗೆ ಎಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೆಎನ್‌ಯುವನ್ನು ಮುಂದುವರೆಸಬೇಕಾ ಎಂಬ ಬಗ್ಗೆ ಸರ್ಕಾರ ಚಿಂತಿಸಲಿ.
-ಡಾ.ಎಸ್.ಎಲ್. ಭೈರಪ್ಪ