Advertisement

ಪ್ರತೀ ಉತ್ಪನ್ನದ ಮೇಲೆ ‘ಕಂಟ್ರಿ ಆಫ್ ಒರಿಜಿನ್’ ಕಡ್ಡಾಯಗೊಳಿಸಿ: CAIT ಆಗ್ರಹ

06:08 PM Jun 23, 2020 | Hari Prasad |

ನವದೆಹಲಿ: ಲಡಾಖ್‌ ಗಡಿಯಲ್ಲಿ ಅನಗತ್ಯವಾಗಿ ಕ್ಯಾತೆ ತೆಗೆದು ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿರುವ ಚೀನಾ ದೇಶಕ್ಕೆ ಆರ್ಥಿಕವಾಗಿ ಪೆಟ್ಟು ನೀಡಲು ದೇಶ ಸಜ್ಜಾಗುತ್ತಿದೆ.

Advertisement

ಈ ನಿಟ್ಟಿನಲ್ಲಿ ಚೀನ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಬೃಹತ್ ಅಭಿಯಾನ ದೇಶಾದ್ಯಂತ ಪ್ರಾರಂಭವಾಗಿದೆ.

ಈ ಅಭಿಯಾನಕ್ಕೆ ಇದೀಗ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟವೂ (CAIT) ಧ್ವನಿಗೂಡಿಸಿದೆ.

ದೇಶಾದ್ಯಂತ ಚೀನೀ ಉತ್ಪನ್ನಗಳ ಮೇಲೆ ನಿಷೇಧ ಹೇರುವ ನಿರ್ಧಾರದೊಂದಿಗೆ ಪ್ರತಿ ಇ-ಕಾಮರ್ಸ್ ಪೋರ್ಟಲ್‌ಗ‌ಳ ಮೂಲಕ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೆ ‘ಕಂಟ್ರಿ ಆಫ್‌ ಒರಿಜಿನ್‌’ ಅನ್ನು ಕಡ್ಡಾಯವಾಗಿ ನಮೂದಿಸುವಂತೆ ಅದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರ ಮುಂದೆ ಬೇಡಿಕೆಯನ್ನು ಇಟ್ಟಿದೆ.

ಪೂರ್ವ ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಬಳಿಕ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಲು ಅಭಿಯಾನ ಆರಂಭಿಸಿರುವ CAIT, ಇ-ಕಾಮರ್ಸ್‌ ಪೋರ್ಟಲ್‌ಗ‌ಳು ಹೆಚ್ಚಾಗಿ ಚೀನ ಉತ್ಪನ್ನಗಳನ್ನು ಒಳಗೊಂಡಿದ್ದು, ಆನ್‌ಲೈನ್‌ ಮಾರುಕಟ್ಟೆಯಲ್ಲಿ ಡ್ರ್ಯಾಗನ್‌ ದೇಶಗಳ ವಸ್ತುಗಳೇ ಹೆಚ್ಚಾಗಿ ಮಾರಾಟ ಆಗುತ್ತಿವೆ, ಆದರೆ ಇದರ ಬಗ್ಗೆ ಗ್ರಾಹಕರಿಗೆ ಮಾಹಿತಿ ಇಲ್ಲ.

Advertisement

ಇದು ಕೇವಲ ಚೀನ ಉತ್ಪನ್ನಗಳ ಬಹಿಷ್ಕಾರಕ್ಕೆ ಮಾತ್ರ ಸಂಬಂಧಪಟ್ಟಿದಲ್ಲ ಬದಲಾಗಿ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಹಾಗೂ ಸ್ಥಳೀಯ, ದೇಶೀಯ ಉತ್ನನ್ನಗಳ ಕುರಿತು ಗ್ರಾಹಕರಿಗೆ ಮಾಹಿತಿಯಿದ್ದರೆ ಒಳಿತು.

ಹೀಗಾಗಿ ಆಯಾ ವಸ್ತುಗಳ ಮೇಲೆ ಅದು ಯಾವ ದೇಶದ ಉತ್ಪನ್ನ ಎಂದು ನಮೂನಿಸಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು CAIT ವ್ಯಕ್ತಪಡಿಸಿದೆ.

ಇನ್ನು ಇದರೊಂದಿಗೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜಕೀಯ ಪಕ್ಷಗಳಿಗೆ ತಮ್ಮ ಕ್ಯಾಂಪೇನ್‌ಗೆ ಕೈ ಜೋಡಿಸುವಂತೆ CAIT ಆಗ್ರಹಿಸಿದ್ದು, ವಿವೊ ಸೇರಿದಂತೆ ಇತರ ಚೀನೀ ಕಂಪನಿಯ ಪ್ರಾಯೋಜಕತ್ವವನ್ನು ರದ್ದುಗೊಳಿಸಬೇಕೆಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ ಗಳನ್ನು (ಐಒಎ) ಇದೇ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next