Advertisement

ಹಕ್ಕುಪತ್ರದಿಂದ ಭದ್ರತೆಯ ಭಾವ: ಪ್ರಮೋದ್‌

07:10 AM Sep 10, 2017 | Team Udayavani |

ಬ್ರಹ್ಮಾವರ: ಅಶಕ್ತರಿಗೆ ಶಕ್ತಿ ತುಂಬಿ, ಧ್ವನಿ ಇಲ್ಲದವರಿಗೆ ಧ್ವನಿಯಾಗುವುದು ಸರಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸರ್ವ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಶನಿವಾರ ಇಲ್ಲಿನ ಬಂಟರ ಭವನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ಬ್ಲಾಕ್‌ ವ್ಯಾಪ್ತಿಯ ಪ್ರಥಮ ಹಂತದ ಹಕ್ಕುಪತ್ರ ವಿತರಿಸಿ ಮಾತನಾಡಿದರು.

450 ಮಂದಿಗೆ ವಿತರಣೆ
ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಹಕ್ಕುಪತ್ರ ಇಲ್ಲದ ಕಾರಣ ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾದ 94 ಸಿಯ 285 ಮಂದಿಗೆ, 94 ಸಿಸಿ ಯಡಿ 127 ಮಂದಿಗೆ ಹಕ್ಕುಪತ್ರ ಹಾಗೂ 28 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗುತ್ತಿದ್ದು, 30 ದಿನಗಳ ಒಳಗೆ ಆರ್‌ಟಿಸಿ ನೀಡಲಾಗುವುದು. 94 ಸಿ, 94 ಸಿಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಸೆ. 12ರ ವರೆಗೆ ಕಾಲಾವಕಾಶವಿದೆ. ಬ್ರಹ್ಮಾವರ ವ್ಯಾಪ್ತಿಯಲ್ಲಿ 2ನೇ ಸುತ್ತಿನ ಹಕ್ಕುಪತ್ರ ವಿತರಣೆ ನ. 4ರಂದು ನಡೆಯಲಿದೆ ಎಂದು ಮಧ್ವರಾಜ್‌ ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿ.ಪಂ. ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾರ್ದನ ತೋನ್ಸೆ, ತಾ.ಪಂ. ಸದಸ್ಯರಾದ ಡಾ| ಸುನೀತಾ ಶೆಟ್ಟಿ, ದಿನಕರ ಹೇರೂರು, ಗೋಪಿ ಕೆ. ನಾಯ್ಕ, ಸು ಧೀರ್‌ ಕುಮಾರ್‌ ಶೆಟ್ಟಿ, ವಸಂತಿ ಪೂಜಾರಿ, ವಿಶೇಷ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ನಾಗರತ್ನ ಕರ್ಜೆ, ವಿವಿಧ ಗ್ರಾ.ಪಂ. ಅಧ್ಯಕ್ಷರು, ಅಕ್ರಮ ಸಕ್ರಮ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಮೈರ್ಮಾಡಿ ಸ್ವಾಗತಿಸಿ, ತಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಸ್ತಾವನೆ ಗೈದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ, ರಾಘವೇಂದ್ರ ಶೆಟ್ಟಿ ಕರ್ಜೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next