Advertisement
ಬಿ.ಎಸ್. ವೈ ಅವರ ಮಟ್ಟಿಗೆ ‘ಈಗ’ ಎಂಬ ಪದವನ್ನು ಬಳಸುವುದು ಸಮಂಜಸವಾಗಲಾರದು. ಕಾರಣ, ಕಳೆದ 12 ವರ್ಷಗಳಲ್ಲಿ ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದೊಂದು ದಾಖಲೆ ಸಂಖ್ಯೆಯೂ ಪುನರಾಗಮನವೂ ಹೌದು.
Related Articles
Advertisement
ಈಗ 17 ಮಂದಿಯ ಸದಸ್ಯತ್ವ ರದ್ದಾಗಿರುವುದರಿಂದ ಇನ್ನು ಆರು ತಿಂಗಳೊಳಗೆ ಈ 17 ಸ್ಥಾನಗಳಿಗೆ ಉಪಚುನಾವಣೆ ನಡೆಯಬೇಕು. ಸುಪ್ರೀಂ ಕೋರ್ಟು ಈ ಮೊಕದ್ದಮೆಗಳ ವಿಚಾರಣೆಯನ್ನು ಆರು ತಿಂಗಳಿಗೂ ಹೆಚ್ಚು ಕಾಲ ನಡೆಸಿದರೆ, ಇದೇ ವೇಳೆ ಚುನಾವಣಾ ಆಯೋಗ ಅಷ್ಟರೊಳಗೆ ಉಪಚುನಾವಣೆ ಪ್ರಕ್ರಿಯೆಯನ್ನು ಹಮ್ಮಿಕೊಂಡರೆ, ಈ 17 ಮಂದಿ ವಿಧಾನಸಭೆಯನ್ನು ಮರು ಪ್ರವೇಶಿಸುವುದು ಸಾಧ್ಯವಾಗಲಾರದು. ಇಂಥ ಮರುಪ್ರವೇಶಿಸುವುದು ಸಾಧ್ಯವಾಗಲಾರದು. ಇಂಥ ಪರಿಸ್ಥಿತಿ ಎದುರಾದರೆ ಬಿಜೆಪಿಗೆ ಲಾಭವೇ ಆಗಲಿದೆ; ಅದು ತನ್ನ ನಿಷ್ಠಾವಂತರನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸುವಲ್ಲಿ ತನ್ನ ಎಲ್ಲ ಪ್ರಯತ್ನಗಳನ್ನು ಧಾರೆಯೆರೆಯಬಹುದಾಗಿದೆ.
ವಿಧಾನಸಭೆಯಲ್ಲಿ ಬಹುಮತ ದಕ್ಕಿಸಿಕೊಳ್ಳುವುದಕ್ಕಾಗಿ ನಡೆದಿರುವ (ನಡೆದಿದೆಯೆಂದು ಹೇಳಲಾಗುತ್ತಿರುವ) ಕಮಲ ಕಾರ್ಯಾಚರಣೆಯ ಬಗ್ಗೆ ಹೇಳುವುದಾದರೆ, ಬಹುಶಃ ಪಕ್ಷವು ನಿಮ್ಮನ್ನು ಉಪಚುನಾವಣೆಯಲ್ಲಿ ನಮ್ಮದೇ ಅಭ್ಯರ್ಥಿಗಳೆಂದು ಕಣಕ್ಕಿಳಿಸುತ್ತೇವೆಂದು ಈ 17 ಮಂದಿಗೆ ಭರವಸೆ ನೀಡಿರಬೇಕು. ಇಲ್ಲವಾದರೆ ಎ.ಎಚ್. ವಿಶ್ವನಾಥ್, ಮುನಿರತ್ನ, ರಮೇಶ್ ಜಾರಕಿಹೊಳಿ ಅಥವಾ ರೋಶನ್ ಬೇಗ್‌ರಂಥ ಅತ್ಯಂತ ಪ್ರಭಾವಶಾಲಿ, ಸಮರ್ಥರು ಬಿಜೆಪಿಯ ಬಲೆಗೆ ಬೀಳುತ್ತಿರಲಿಲ್ಲ. ಬೇಗ್ ಅವರಂತೂ ಹಲಾಲ್ ಬ್ಯಾಂಕಿಂಗ್ ಹೆಸರಲ್ಲಿ ನಡೆದ ಐಎಂಎ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ವಿಚಾರಣೆಗೊಳಪಡುವ ಎಷ್ಟೋ ಮುಂಚಿತವಾಗಿಯೇ ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬೇಗ್ ಅವರ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 45ರಷ್ಟು ಮುಸ್ಲಿಂ ಮತದಾರರಿದ್ದಾರೆ. ಬಿಜೆಪಿ ಜತೆಗಿನ ಸ್ನೇಹದ ಮಟ್ಟಿಗೆ ಅಲ್ಲವಾದರೂ, ಕಾಂಗ್ರೆಸ್‌ನ ವಿರುದ್ಧ ಬಂಡಾಯವೆದ್ದಿರುವ ಅವರ ನಡವಳಿಕೆ ಯಾವುದೋ ಒಂದು ಲೆಕ್ಕಾಚಾರದ ಅಪಾಯಕಾರಿ ಉಪಾಯವಾಗಿ ಕಂಡು ಬಂದಿದೆ.
ಅನರ್ಹಗೊಂಡಿರುವ 17 ಶಾಸಕರಲ್ಲಿ ಎ.ಎಚ್. ವಿಶ್ವನಾಥ್‌ರಂಥ ಕೇವಲ ಕೆಲವರಷ್ಟೇ ಬಿಜೆಪಿ ಅಥವಾ ಇತರ ಯಾವುದೇ ಪಕ್ಷಕ್ಕೆ ನಿಜವಾದ ಆಸ್ತಿಯಾಗಿರುತ್ತಾರೆ ಎನ್ನಬಹುದು. ಮುನಿರತ್ನ, ರೋಶನ್‌ಬೇಗ್ ಹಾಗೂ ಎಂ.ಟಿ.ಬಿ. ನಾಗರಾಜ್ ಅವರಂಥವರು ತಮ್ಮ ರಾಜಕೀಯ ವೃತ್ತಿಗೆ ತಟ್ಟಿರುವ ಕಳಂಕದಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇಂಥವರೇ ಇದ್ದರೆ ಬಿಜೆಪಿ ಹೇಗಿರುತ್ತದೆಂದು ಒಮ್ಮೆ ಕಲ್ಪಿಸಿಕೊಳ್ಳಿ. ಸುಪ್ರೀಂಕೋರ್ಟ್ ತಮ್ಮ ಪರವಾಗಿ ತೀರ್ಪಿತ್ತರೆ ತಮಗೆ ಮಂತ್ರಿಗಿರಿ ದಯಪಾಲಿಸಬೇಕೆಂದು ಅನರ್ಹಗೊಂಡ ಶಾಸಕರು ಈಗಾಗಲೇ ಲಾಬಿ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಪಕ್ಷಕ್ಕಾಗಿ ತಮ್ಮ ಜೀವಮಾನ ಸವೆಸಿರುವ ಶಾಸಕರಿಗೆ, ಹಾಗೆಯೇ ವರ್ಷಗಟ್ಟಲೇ ಪಕ್ಷಕ್ಕೆ ಸೇವೆ ಸಲ್ಲಿಸಿ ಶಾಸಕರಾಗಿರುವವರಿಗೆ ಇದರಿಂದ ಅನ್ಯಾಯವೇ ಆಗುತ್ತದೆ. ಈ ಹಿಂದೆ ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದವರಲ್ಲಿ ಹೆಚ್ಚಿನವರು 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತದ್ದನ್ನು ನೋಡಿಯೇ ಇದ್ದೇವೆ. ಏನೇ ಇದ್ದರೂ ಬಿಜೆಪಿ ಕಮಲ ಕಾರ್ಯಚರಣೆಯನ್ನು ಅತಿಯೆಂಬಷ್ಟು ನಡೆಸಿದೆ. ಸರಕಾರ ಸುಭದ್ರವಾಗಿದೆಯೆಂದು ಮನದಟ್ಟಾದ ಕೂಡಲೇ ಅದು ವಿಪಕ್ಷೀಯ ಶಾಸಕರನ್ನು ಸೆಳೆಯುವ ಕೆಲಸವನ್ನು ನಿಲ್ಲಿಸಬೇಕಿತ್ತು.
ಬಳ್ಳಾರಿಯ ಅಕ್ರಮ ಗಣಿ ಲಾಬಿಯ ಮುಖಂಡ ಜಿ. ಜನಾರ್ದನ ರೆಡ್ಡಿಯವರನ್ನು ಬಿಜೆಪಿ ಅತಿಯಾಗಿ ಅವಲಂಬಿಸಿತು; ಇದರಿಂದ ಅದು ಪಾಠ ಕಲಿಯಬೇಕಿತ್ತು. ಆ ಲಾಬಿಯೊಂದಿಗೆ ಸಂಪರ್ಕವಿರಿಸಿಕೊಂಡವರನ್ನು ಸಚಿವ ಸಂಪುಟದಿಂದ ದೂರವೇ ಇರಿಸಲು ಬೇಕಾದ ಗರಿಷ್ಠ ಎಚ್ಚರವನ್ನು ಪಕ್ಷ ಇರಿಸಿಕೊಳ್ಳಬೇಕಾಗಿದೆ. ಇಂಥವರಲ್ಲೊಬ್ಬರಾದ ಬಿ. ಶ್ರೀರಾಮುಲು. ಅವರು ಉಪಮುಖ್ಯಮಂತ್ರಿ ಪದವಿಯ ಮೇಲೆ ಕಣ್ಣಿಟ್ಟಿದ್ದಾರೆಂಬ ವರದಿಗಳಿವೆ. ಬಿಎಸ್‌ವೈ ಸರಕಾರಕ್ಕಿರುವ ಒಂದು ಅನುಕೂಲತೆಯೆಂದರೆ, ಕೇಂದ್ರದಲ್ಲಿ ಹಾಗೂ ಬಹುತೇಕ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿಯ ಆಡಳಿತವೇ ಇದೆ. ರಾಜ್ಯಪಾಲ ವಜೂಭಾೖವಾಲಾ ಅವರ ಅಧಿಕಾರಾವಧಿ ಮುಕ್ತಾಯದ ಹಂತದಲ್ಲಿದ್ದು , ಅವರಿಗೆ ಎರಡನೆಯ ಅವಧಿ ಸಿಗದಿದ್ದರೂ, ಮುಂದೆ ರಾಜ್ಯಪಾಲರಾಗುವವರು ಬಿಎಸ್‌ವೈ ಆ್ಯಂಡ್ ಕಂಪೆನಿಯ ಮಿತ್ರನೇ ಆಗಿರಬೇಕಾಗುತ್ತದೆ. ಅದೃಷ್ಟ ಕೈಕೊಟ್ಟಿದ್ದ ತಮ್ಮ ಎರಡನೆಯ ಮುಖ್ಯಮಂತ್ರಿತ್ವದ ಅವಧಿಯಲ್ಲಿ ಯಡಿಯೂರಪ್ಪ ಅವರು ತಮ್ಮನ್ನು ಕಂಡರಾಗದಂತೆ ನಡೆದುಕೊಳ್ಳುತ್ತಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರೊಂದಿಗೆ ಏಗಬೇಕಾಗಿ ಬಂತು. ಅಕ್ರಮ ಡಿನೋಟಿಫಿಕೇಶನ್ ಕೇಸಿನಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸುವ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದವರು ಭಾರದ್ವಾಜರೇ. ದಸ್ತಗಿರಿಯ ಅವಮಾನ ಹಾಗೂ 23 ದಿನಗಳ ಜೈಲುವಾಸವನ್ನು ಅವರು (ಲೋಕಾಯುಕ್ತದ ವಿಶೇಷ ನ್ಯಾಯಾಲಯದ ವಿವಾದಾತ್ಮಕ ಆದೇಶದ ಫಲವಾಗಿ) ಅನುಭವಿಸಬೇಕಾಯಿತು. ಆಮೇಲೆ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡರೂ 2015ರಲ್ಲಿ, ಉಚ್ಚನ್ಯಾಯಾಲಯ, ರಾಜ್ಯಪಾಲ ಭಾರದ್ವಾಜ್ ಅವರ ‘ಮಂಜೂರಾತಿ ಆದೇಶ’ವನ್ನು ರದ್ದುಪಡಿಸಿತು.
ಅನರ್ಹ ಶಾಸಕರಲ್ಲಿ ಕೆಲವರ ನಿಕಟ ಸಂಬಂಧಿಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂಬಂಥ ಕಳವಳಕಾರಿ ವರದಿಗಳು ಪ್ರಕಟ/ಪ್ರಸಾರವಾಗಿವೆ. ಬಿಜೆಪಿ ರಾಜ್ಯದ ಜನರನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ; ಇಂಥ ಧೋರಣೆಯೊಂದಿಗೆ ವಿಧಾನಸಭಾ ಸದಸ್ಯತ್ವ ಕಳೆದುಕೊಂಡ ಮಂದಿಯೊಡನೆ ಇಂಥ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವ ಹಾಗಿಲ್ಲ ಅಥವಾ ಅವರಿಗೆ ಇಂಥ ಭರವಸೆಯನ್ನೂ ನೀಡುವಂತಿಲ್ಲ.