Advertisement

ಕವಿ ಗ್ರಹಿಸಿರುವ ಅನುಭವವೇ ಸಂಕಲನ

01:05 PM May 15, 2017 | Team Udayavani |

ಹರಪನಹಳ್ಳಿ: ಕವಿಯಾದವನಿಗೆ ಹೇಳಲು ವಿಷಯವಿರಬೇಕು ಮತ್ತು ಅದನ್ನು ಹೇಳಲು ಬರಬೇಕು. ದುರಾದೃಷ್ಟರವೆಂದರೆ ಹೇಳಲಿಕ್ಕೆ ಏನೂ ವಿಷಯವಿಲ್ಲದವರ ಬಳಿ ಹೇಳುವ ಕಲೆ, ನೈಪುಣ್ಯತೆ ಅಡಗಿದೆ. ಹಾಗಾಗಿ ವೇದ ಉಪನಿಷತ್‌, ಪುರಾಣಗಳಲ್ಲಿ ಹೇಳಿರುವುದನ್ನೇ ಹಾಡಿದ್ದು ಹಾಡೋ ಕಿಸುಬಾಯಿ ದಾಸ ಎಂಬಂತೆ ಮತ್ತೆ ಮತ್ತೆ ಬರೆಯುತ್ತಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್‌ ಹೇಳಿದರು. 

Advertisement

ಪಟ್ಟಣದ ತಾಪಂ ಸಾಮರ್ಥ್ಯಸೌಧ ಆವರಣದಲ್ಲಿ ಭಾನುವಾರ ಶಿವಮೊಗ್ಗ ಸಿರಿಗನ್ನಡ ಪುಸ್ತಕ ಮನೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಉಪನ್ಯಾಸಕ ದುಗೇಶ್‌ ಪೂಜಾರ್‌ ಅವರ “ಮಸಣದ ಮುತ್ತು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎಪ್ಪತ್ತರ ದಶಕದಲ್ಲಿ ಕಟ್ಟುಪಾಡಿನ ಬಂಧನದ ಕಟ್ಟೆ ಸಿಡಿದು ಪ್ರವಾಹ ಶುರುವಾಯ್ತು.

3ಸಾವಿರ ವರ್ಷಗಳ ನಂತರ ಹೇಳಲಿಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡದಲ್ಲಿ ದಾಖಲಾಗದಿರುವ ಬದುಕಿನ ಅನುಭವದ ಲೋಕವನ್ನು ತೆರೆದಿಡುವವರು ಇದೀಗ ನದಿಯಾಗಿ ಭೋರ್ಗರೆಯುತ್ತಿದ್ದಾರೆ. ಯಾವುದನ್ನು ಹೇಳಲು ಪವಿತ್ರವೋ ಉಳಿದೆಲ್ಲವೂ ನಗಣ್ಯ ಎನ್ನುವುದು ಮನುಷ್ಯ ಸಮುದಾಯಕ್ಕೆ ಅಪಾಯಕಾರಿ.

12ನೇ ಶತಮಾನದಲ್ಲಿ ಬಸವಣ್ಣ, ದಾಸರು, ದಲಿತ, ಬಂಡಾಯ ಸಾಹಿತ್ಯ ಕಾಲಘಟ್ಟದಲ್ಲಿ ಸಂಖ್ಯಾತ ಜನರು ಸೇರಿ ಸಾಹಿತ್ಯದ ಮೂಲಕ ಅನುಭವ ಹಂಚಿಕೊಂಡು ಸಂಸ್ಕೃತ ದಾರಿದ್ರ ಕೊನೆಗಾಣಿಸಿದ್ದಾರೆ ಎಂದು ತಿಳಿಸಿದರು. ಲೌಕಿಕ ದಾರ್ಶನಿಕತೆಯನ್ನು ಹೊಂದಿರುವ ಕಾರಣಕ್ಕೆ ಕವಿ ಬಹಳ ಮುಖ್ಯವಾಗುತ್ತಾನೆ. 

ಎಲ್ಲಾ ಕವಿಗಳ ದೃಷ್ಟಿಕೋನ ಒಂದೇ ಅಲ್ಲ, ಅವರವರ ಅನುಭವಕ್ಕೆ ತಕ್ಕಂತೆ ಒಂದು ದರ್ಶನವಿರುತ್ತದೆ. ಕವಿ ಗ್ರಹಿಸಿರುವ  ಅನುಭವವನ್ನು ಜನರಿಗೆ ತಲುಪಿಸುವ ಪ್ರಯತ್ನವೇ ಸಂಕಲನ. ಸಾಮಾನ್ಯ ಪದಗಳಲ್ಲಿ ಅಸಮಾನ್ಯವಾದ ಸಂದೇಶ ಸಾರುವವನೇ ನಿಜವಾದ ಕವಿ. ಇದೀಗ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬಂದಿರುವುದರಿಂದ ಪುನಃ ಕವಿಗಳಾಗುವ ಸಮಯ ಬಂದಿದೆ ಎಂದರು. 

Advertisement

ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸೇವಾ ಸಂಸ್ಥೆ ರಾಜ್ಯ ಗೌರವಾಧ್ಯಕ್ಷ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಇಂದು ವರ್ಗ ಹಾಗೂ ಶೋಷಣೆ ರಹಿತ ಲಿಂಗಭೇಧವಿಲ್ಲದ ಸಮಾಜವನ್ನು ಕಟ್ಟಬೇಕಾಗಿದ್ದು, ಬುದ್ದ, ಬಸವಣ್ಣ, ಅಂಬೇಡ್ಕರ್‌, ಪೆರಿಯಾರ್‌, ಗಾಂಧಿಧೀಜಿ ಅವರ ವಿಚಾರಧಾರೆಗಳನ್ನು ನಾಶಗೊಳಿಸುವ ಕೆಲಸ ನಡೆಯುತ್ತಿವೆ.  

ಮನುಷ್ಯ ಮನುಷ್ಯರನ್ನು ಪ್ರೀತಿಸುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ ಎಂದರು. ಕೃತಿ ಕುರಿತು ಸಾಹಿತಿ ಮಲ್ಲಿಕಾರ್ಜುನ ಕಲರಹಳ್ಳಿ, ಅಕ್ಷರ ಸೀಡ್ಸ್‌ ಕಂಪನಿ ಮಾಲೀಕ, ಬಿಜೆಪಿ ಮುಖಂಡ ಎನ್‌.ಕೊಟ್ರೇಶ್‌, ಭದ್ರಾವತಿ ಆಕಾಶವಾಣಿ ಹಿರಿಯ ಉದ್ಘೋಷಕ ಕೆ.ಎಂ.ಶಿವಕುಮಾರ್‌, ಪ್ರಕಾಶಕ ಕೆ.ಸುಂದರ್‌, ಲೇಖಕ ದುಗೇìಶ್‌ ಪೂಜಾರ್‌ ಮಾತನಾಡಿದರು.

ಕಸಾಪ ಅಧ್ಯಕ್ಷ ಡಿ.ರಾಮನಮಲಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್‌, ಇಒ ಬಿ.ರೇವಣ್ಣ, ಕಲಾವಿದ ಪೂಜಾರ ಚಂದ್ರಪ್ಪ, ಪುಣಬಗಟ್ಟಿ ನಿಂಗಪ್ಪ, ಸಿ.ಗಂಗಾಧರ್‌, ಎಚ್‌. ಎಂ.ಜುಂಜಪ್ಪ ಇತರರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next