Advertisement

ಕೋಮುವಾದಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

12:04 PM Aug 18, 2018 | |

ಔರಾದ: ನವದೆಹಲಿಯಲ್ಲಿ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ಕೋಮುವಾದಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಸೇರಿದ ದಲಿತ ಸಂಘಟನೆಯ ಮುಖಂಡರು ಹಾಗೂ ಸದಸ್ಯರು, ಮುಖ್ಯರಸ್ತೆ ಮಾರ್ಗವಾಗಿ ತಹಶೀಲ್ದಾರ್‌ ಕಚೇರಿಗೆ ತೆರಳಿ ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

Advertisement

ಈ ವೇಳೆ ಮುಖಂಡ ಬಂಟಿ ದರ್ಬಾರೆ, ಹಿಂದುಳಿದ ಹಾಗೂ ದಲಿತರ ಜೀವನಕ್ಕೆ ದಾರಿ ದೀಪವಾಗಿರುವ ಭಾರತೀಯ ಸಂವಿಧಾನಕ್ಕೆ ಬೆಂಕಿ ಹಚ್ಚಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದರು.

ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗದೇ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ
ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಶಿವುಕುಮಾರ ಕಾಂಬಳೆ ಮಾತನಾಡಿ, ದೇಶದ ಸಂವಿಧಾನ ಆಪತ್ತಿಗೆ ಒಳಗಾಗುತ್ತಿದೆ. ಕೋಮುವಾದಿಗಳು ಸಂವಿಧಾನ ವಿರೋಧಿ ನಂಬಿಕೆಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ. ಮನುಸ್ಮೃತಿ ಆಧಾರವಿಲ್ಲವೆಂಬ ಕಾರಣಕ್ಕಾಗಿ ತಾವು ಸಂವಿಧಾನ ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ನಾಯಕರು ತಮ್ಮ ನಿಲುವನ್ನು ಪ್ರಕಟಿಸಿದ್ದು,
ಇತಿಹಾಸದಲ್ಲಿ ದಾಖಲೆಯಾಗಿದೆ.

ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗವಾಗಿದ್ದು ಸಹಜವೆ. ಅದು ಸಂವಿಧಾನದ ಆಧಾರದಲ್ಲಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದರೂ ಸಂವಿಧಾನ ವಿರೋಧಿ ನಿಲುವನ್ನು ದೃಢಗೊಳಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಂವಿಧಾನ ವಿರೋಧಿ ನಿಲುವು ಹೊಂದಿರುವ ಆರ್‌ಎಸ್‌ಎಸ್‌ ವಿರುದ್ಧ ಕಾನೂನು ಕ್ರಮ ಕೈಗೋಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಶಾಸಕ ಪ್ರಭು ಚವ್ಹಾಣ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ಮುಖಂಡ ಬಾಬುರಾವ್‌ ತಾರೆ, ರಾಜಾಜೀವನ ಮಹಿಕರ್‌, ರಹಿಮಶಾಬ, ಸುನೀಲ ಮಿತ್ರಾ, ಸಂಜು ಯನಗುಂದಾ, ರಾಜಕುಮಾರ ಮೈಲಾರೆ, ದಯಾಸಾಗರ ಭಂಡೆ, ರಾಜಕುಮಾರ ಮೈಲಾರೆ, ಸುಭಾಷ
ಲಾಧಾ, ಸ್ವಾಮೀದಾಸ ಮೇಘಾ, ಸತೀಶ ವಗ್ಗೆ, ಅಶೋಕ ದರ್ಬಾರೆ, ಪ್ರಕಾಶ ಭಂಗಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next