Advertisement

ಕೋಮು ಫ್ಯಾಕ್ಟರಿ ಬಂದ್‌ ಮಾಡಿಸುತ್ತಿದ್ದೆ: ಸಚಿವ ರಾಮಲಿಂಗಾರೆಡ್ಡಿ 

06:55 AM Feb 08, 2018 | Team Udayavani |

ವಿಧಾನಪರಿಷತ್‌: ಎರಡು ವರ್ಷದ ಹಿಂದೆ ಗೃಹ ಸಚಿವನಾಗಿದ್ದಿದ್ದರೆ ರಾಜ್ಯದಲ್ಲಿ ಕೋಮು ಉತ್ಪಾದನೆ ಫ್ಯಾಕ್ಟರಿ ಬಂದ್‌ ಮಾಡಿಸುತ್ತಿದ್ದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಎರಡು ವರ್ಷಗಳ ಹಿಂದೆ ಈ ಖಾತೆ ಸಿಕ್ಕಿದ್ದಿದ್ದರೆ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿರುವ ಸಂಘಟನೆ, ವ್ಯಕ್ತಿಗಳ ಸದ್ದು ಅಡಗಿಸುತ್ತಿದ್ದೆ
ಎಂದು ತಿಳಿಸಿದರು.

ಇದಕ್ಕೆ ಪ್ರತಿಪಕ್ಷ ನಾಯಕ ಈಶ್ವರಪ್ಪ, ಎರಡು ವರ್ಷ ಸಮಯ ಸಿಕ್ಕಿದ್ದರೆ ಎಲ್ಲವನ್ನು ಸರಿ ದಾರಿಗೆ ತರುತ್ತೇನೆ ಎಂದು
ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಆ ಮೂಲಕ ಇವರಿಗಿಂತ ಮೊದಲು ಈ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದವರು ನಾಲಾಯಕ್‌ ಎಂದು ಒಪ್ಪಿಕೊಂಡಂ ತಾಯಿತು ಎಂದು ಹೇಳಿದರು.

ನನಗೆ ಸರ್ಕಾರ ನೀಡಿದ್ದ ಎಸ್ಕಾರ್ಟ್‌, ಸೈಕಲ್‌ಗಿಂತ ಕಡೆಯಾಗಿ ಓಡುತ್ತಿದೆ. ಬೆದರಿಕೆ ಕರೆ ಬರುತ್ತಿದೆ. ಪ್ರತಿಪಕ್ಷದ ನಾಯಕರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ ಎಂದು ಆರೋಪ ಮಾಡಿದರು. ಆ ಸಂದರ್ಭದಲ್ಲಿ ಸಭಾಪತಿ ಸ್ಥಾನದಲ್ಲಿ ಕೂತಿದ್ದ ರಾಮಚಂದ್ರಗೌಡರು ಗೃಹ ಸಚಿವರು ರಕ್ಷಣೆಗೆ ಗನ್‌ ಮ್ಯಾನ್‌ ಕೂಡ ಇಟ್ಟುಕೊಂಡಿಲ್ಲ ಎಂದರು. ಆಗ ಕಾಂಗ್ರೆಸ್‌ನ ನಾರಾಯಣ ಸ್ವಾಮಿ, ಗೃಹ ಸಚಿವರು ಗನ್‌ಮ್ಯಾನ್‌, ಎಸ್ಕಾರ್ಟ್‌ ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಅವರಿಗೆ ಯಾರ ಭಯವೂ ಇಲ್ಲ ಎಂದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರೂ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮಚಂದ್ರಗೌಡರು ಮಧ್ಯ ಪ್ರವೇಶಿಸಿ, ನೆಹರು ಅವರು ಪ್ರಧಾನಿಯಾಗಿದ್ದಾಗ ಓಪನ್‌ ಜೀಪಿನಲ್ಲಿಯೇ ತಿರುಗಾಡುತ್ತಿದ್ದರು. ಈಗ ಆಧುನಿಕತೆಯ ಹೆಸರಿನಲ್ಲಿ ಯಾವ ದಾರಿಗೆ ಸಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next