Advertisement
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕ್ರೀಡಾಪಟುಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಮೂರನೇ ಆವೃತ್ತಿಯ ಆಯೋಜನೆಯು ತನ್ನದೇ ಆದ ವಿಶೇಷವಾಗಿದೆ.ದೇಶದ ಯುವಜನರಲ್ಲಿ ಟೀಮ್ ಸ್ಪಿರಿಟ್ ಹೆಚ್ಚಿಸಲು, ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಭಾವನೆಯನ್ನು ಹೆಚ್ಚಿಸಲು ಇದೊಂದು ಉತ್ತಮ ಮಾಧ್ಯಮವಾಗಿದೆ ಎಂದರು.
Related Articles
Advertisement
ಕಾಮನ್‌ವೆಲ್ತ್ ಹಗರಣ ಹಿಂದಿನ ಸರ್ಕಾರಗಳು ಕ್ರೀಡೆಯ ಬಗ್ಗೆ ಹೊಂದಿದ್ದ ಧೋರಣೆಗೆ ಜೀವಂತ ಸಾಕ್ಷಿಯಾಗಿದೆ.ವಿಶ್ವದಲ್ಲಿ ಭಾರತದ ಪ್ರತಿಷ್ಠೆಯನ್ನು ಸ್ಥಾಪಿಸಲು ಉಪಯುಕ್ತವಾಗಬಹುದಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ ಹಗರಣವೊಂದು ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ಬಾಣ ಬಿಟ್ಟರು.
ದೇಶದಲ್ಲಿ ಕ್ರೀಡೆಯ ಬಗ್ಗೆ ಅಸಡ್ಡೆ ಇದ್ದ ಕಾಲವೊಂದಿತ್ತು. ಕ್ರೀಡೆಯ ಮೂಲಕ ವೃತ್ತಿಜೀವನವನ್ನು ಮಾಡುವ ಬಗ್ಗೆ ಕೆಲವರು ಮಾತ್ರ ಯೋಚಿಸಿದ್ದಾರೆ. ಕ್ರೀಡೆಗೆ ಸರಕಾರದಿಂದ ಸೂಕ್ತ ಬೆಂಬಲ ಸಿಗದಿರುವುದೇ ಕಾರಣ. ಇದಲ್ಲದೆ, ಕ್ರೀಡಾ ಮೂಲ ಮತ್ತು ಕ್ರೀಡಾಪಟುಗಳ ಅಗತ್ಯತೆಗಳ ಬಗ್ಗೆ ಗಮನ ಹರಿಸಲಾಗಿರಲಿಲ್ಲ ಎಂದರು.