Advertisement

“ಸಮಿತಿಯ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ’

04:45 PM Feb 14, 2021 | Team Udayavani |

ಮುಂಬಯಿ : ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಬೊರಿವಲಿ-ದಹಿಸರ್‌ ಸ್ಥಳೀಯ ಕಚೇರಿಯ ಮಹಿಳಾ ವಿಭಾಗದ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 11ರಂದು ಸ್ಥಳೀಯ ಕಚೇರಿ ಫ್ಲಾಟ್‌ 134, ಗುರುಸನ್ನಿಧಿ, ಬೆಸ್ಟ್‌ ಕ್ವಾಟ್ರìಸ್‌ ಬಿಎಂಸಿ ಗ್ಯಾರೇಜ್‌ ಹತ್ತಿರ ಶಿಂಪೋಲಿ ರೋಡ್‌ ಗೋರೈ 1, ಬೊರಿವಲಿ ಪಶ್ಚಿಮ ಇಲ್ಲಿ ಜರಗಿತು.

Advertisement

ವಾರದ ಗುರುಪೂಜೆಯ ವಿಶೇಷ ದಿನದಂದು ಜರಗಿದ ಕಾರ್ಯಕ್ರಮದಲ್ಲಿ ಸ್ಥಳೀಯ ಕಚೇರಿಯ ಸದಸ್ಯರು ಹಾಗೂ ಮಹಿಳಾ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಅನಂತರ ಸದಸ್ಯ ಕೃಷ್ಣರಾಜ್‌ ಸುವರ್ಣ ಅವರು ನಾರಾಯಣಗುರುಗಳ ಅಲಂಕೃತ ಪ್ರತಿಬಿಂಬದ ವಿಗ್ರಹಕ್ಕೆ ವಿವಿಧ ಧಾರ್ಮಿಕ ವಿಧಿ ವಿಧಾನ ಪೂಜೆಗಳನ್ನು ನೆರವೇರಿಸಿದರು. ಮಂಗಳಾರತಿಯೊಂದಿಗೆ ಸಂಪನ್ನ ಗೊಂಡ ಧಾರ್ಮಿಕ ಕಾರ್ಯಕ್ರಮದ ಬಳಿಕ ಮಹಿಳಾ ಸದಸ್ಯೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು.

ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಎಲ್ಲ ಮಹಿಳಾ ಸದಸ್ಯೆ ಯರಿಗೆ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ. ಅಮೀನ್‌ ಅಭಿನಂದನೆ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಜರಗುವ ಕೇಂದ್ರ ಕಚೇರಿ ಮತ್ತು ಸ್ಥಳೀಯ ಕಚೇರಿಯ ವಿವಿಧ ಕಾರ್ಯಕ್ರಮ
ಗಳಲ್ಲಿ ಭಾಗವಹಿಸಿ ಸಹಕರಿಸುವಂತೆ ಮನವಿ ಮಾಡಿದರು.

ಗೌರವ ಕಾರ್ಯದರ್ಶಿ ಶೇಖರ ಅಮೀನ್‌ ಪೂಜಾ ಕೈಂಕರ್ಯದಲ್ಲಿ ಸಹಕರಿಸಿದರು. ಭಾಗವಹಿಸಿದ್ದ ಗುರು ಭಕ್ತರಿಗೆಲ್ಲ ಅನುಗ್ರಹಿಸಿ ಪ್ರಸಾದ ವಿತರಿಸಿ ಅರಸಿನ ಕುಂಕುಮ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳಾ ಸದಸ್ಯೆಯರನ್ನು ವಿಶೇಷವಾಗಿ ಅಭಿನಂದಿಸಿ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ತಿಳಿದರು.

ಕಾರ್ಯಕ್ರಮದಲ್ಲಿ ಗೌರವ ಕಾರ್ಯಾಧ್ಯಕ್ಷ ಎಂ. ಸುಂದರ ಪೂಜಾರಿ, ಉಪಕಾರ್ಯಾಧ್ಯಕ್ಷ ರಜಿತ್‌ ಎಲ್‌. ಸುವರ್ಣ, ಸಹ ಕಾರ್ಯದರ್ಶಿ ವತ್ಸಲಾ ಕೆ. ಪೂಜಾರಿ, ಸಹ ಕೋಶಾಧಿಕಾರಿ ಉಮೇಶ್‌ ಜಿ. ಕೋಟ್ಯಾನ್‌, ಸದಸ್ಯರಾದ ರಾಘು ಜಿ. ಪೂಜಾರಿ ಕೇಶರಂಜನ್‌ ಮೂಲ್ಕಿ, ಸುಂದರಿ ಪೂಜಾರಿ, ದಿನೇಶ್‌ ಸುವರ್ಣ, ಆರ್‌. ಡಿ. ಕೋಟ್ಯಾನ್‌, ಹರಿಣಾಕ್ಷಿ ಸುವರ್ಣ, ರವಿ ಪೂಜಾರಿ, ಮಂಜುಳಾ ಸುವರ್ಣ, ವಾರಿಜಾ, ವೇದಾ ಸುವರ್ಣ, ಅಶೋಕ್‌ ನಿಂಜೂರು, ಸುಜಾತಾ ಪೂಜಾರಿ, ಅಡ್ವೋಕೇಟ್‌ ಸೌಮ್ಯಾ ಪೂಜಾರಿ, ಸುಗುಣಾ ಹರೀಶ್‌, ಓಂಶ್ರೀ ಕೆ. ಪೂಜಾರಿ, ಸೋಮನಾಥ್‌ ಪೂಜಾರಿ, ಪಿ. ಎ. ಪೂಜಾರಿ, ಕೇಂದ್ರ ಕಚೇರಿ ಮಹಿಳಾ ವಿಭಾಗದ ಸಬಿತಾ ಪೂಜಾರಿ, ಯಮುನಾ ಸಾಲ್ಯಾನ್‌ ಕಾಂದಿವಲಿ, ಲಕ್ಷ್ಮೀ ದೇವಾಡಿಗ, ಡಾ| ಪ್ರವೀಣ್‌ ಪೂಜಾರಿ, ವಿಶ್ವನಾಥ್‌ ಪೂಜಾರಿ, ರೋಹಿಣಿ ಕೋಟ್ಯಾನ್‌, ಸರಸ್ವತಿ ರಾವ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ದಂತ ಚಿಕಿತ್ಸಕ ಡಾ| ಪ್ರವೀಣ್‌ ಪೂಜಾರಿ ಸ್ಥಳೀಯ ಕಚೇರಿಯ ಸರ್ವ ಸದಸ್ಯರಿಗೆ ಉಚಿತ ದಂತ ಚಿಕಿತ್ಸಾ ಸೇವೆಯನ್ನು ಘೋಷಿಸಿದರು. ಆರ್‌. ಡಿ. ಕೋಟ್ಯಾನ್‌ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಆಯೋ ಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗ ವಹಿಸಿದ ಸದಸ್ಯರೆಲ್ಲರು ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಲು ಸಹಕರಿಸಿದರು.

ಚಿತ್ರ-ವರದಿ: ರಮೇಶ್‌ ಉದ್ಯಾವರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next