Advertisement

ಶಿಶಿರದ ನಂತರ ಬಂದೇ ಬರುವ ವಸಂತ…

08:50 PM Mar 09, 2020 | Sriram |

ಪರೀಕ್ಷೆ ಮುಗಿದ ಕೂಡಲೇ ಮತ್ತೆ ನನ್ನ ಅಂಗೈಯಲ್ಲಿ ಮೊಬೈಲ್‌ ಮೂಲಕ ಸಂವಹನ ಶುರುವಾಗುತ್ತೆ. ಅಲ್ಲಿಯವರೆಗೆ ಕಾಯದೇ ವಿಧಿಯಿಲ್ಲ.

Advertisement

“ಇತ್ತೀಚೆಗೆ ನಿನಗೆ ನನ್ನ ಸಂದೇಶಗಳು ಸಿಕ್ತಿಲ್ಲ ಅಂತ ಬೇಸರವೇನೋ, ನಾನು ಬೇಕೂಂತ್ಲೆà ಅವಾಯ್ಡ ಮಾಡ್ತಿದ್ದೀನಿ ಅನ್ನುವ ನಿರ್ಧಾರಕ್ಕೆ ಬಂದಿರಬೇಕು. ಇಲ್ಲ ಕಣೋ, ವಿಷಯ ಅದಲ್ಲ. ಮನೇಲಿ ತಮ್ಮನಿಗೆ ಪರೀಕ್ಷೆ, ಅವನ ಮುಂದೆ ನಾನು ಮೊಬೈಲ್‌ ಹಿಡಿದರೆ ನನಗೂ ಬೇಕು ಅಂತ ಓದುವುದಕ್ಕೆ ಕಳ್ಳಬೀಳ್ತಾನೆ. ಹೀಗಾಗಿ, ಮನೇಲಿ ನಮ್ಮಿಬ್ಬರ ಮೊಬೈಲ್‌ಗ‌ಳೂ ಸದ್ಯಕ್ಕೆ ಸ್ವಿಚ್‌ ಆಫ್ ಆಗಿ ಅಪ್ಪನ ಕಸ್ಟಡಿಯಲ್ಲಿದೆ. ಪರೀಕ್ಷೆ ಮುಗಿಯೋತನಕ ಮೊಬೈಲ್‌ ಅಂತ ಉಸಿರು ಬಿಡೋ ಹಾಗಿಲ್ಲ. ಒಂದೆರಡು ದಿನ ಕಷ್ಟವಾಯ್ತು. ಈಗ ಹೊಂದಿಕೊಳ್ತಿದ್ದೀನಿ. ಪುಸ್ತಕಗಳ ಜೊತೆ ಅನಿವಾರ್ಯವಾಗಿ ಗೆಳೆತನ ಬೆಳೆಸಿಕೊಂಡಿರುವೆ. ಅಫ್ ಕೋರ್ಸ್‌, ನಿನ್ನನ್ನು ತುಂಬಾ ಮಿಸ್‌ ಮಾಡ್ತಿದ್ದೀನಿ. ನಿನಗೆ ಹೇಳ್ಳೋಕ್ಕೆ ಅವಕಾಶ ಸಿಗಲಿಲ್ಲ. ಸಾರಿ, ಮನೇಲಿ ನೆಟ್‌ ಇಲೆª ಸೈಬರ್‌ ಕೆಫೆಗೆ ಬಂದು ಮೈಲ್‌ ಹಾಕ್ತಿದ್ದೀನಿ. ಪ್ಲೀಸ್‌, ಕ್ಷಮಿಸಿಬಿಡು, ಎಕ್ಸಾಂ ಆಗೋ ತನಕ ನನ್ನ ಗಮನ ಕೇವಲ ಪುಸ್ತಕಗಳಿಗೆ ಮೀಸಲು.

ಪರೀಕ್ಷೆ ಮುಗಿದ ಕೂಡಲೇ ಮತ್ತೆ ನನ್ನ ಅಂಗೈಯಲ್ಲಿ ಮೊಬೈಲ್‌ ಮೂಲಕ ಸಂವಹನ ಶುರುವಾಗುತ್ತೆ. ಅಲ್ಲಿಯವರೆಗೆ ಕಾಯದೇ ವಿಧಿಯಿಲ್ಲ. ಒಂದು ರೀತಿ ಇದು ಶಿಕ್ಷೆಯೇ ಆದರೂ, ಒಂದು ಗುರಿಯತ್ತ ನಡೆಸುತ್ತಿದೆ ಅನ್ನುವ ಸಮಾಧಾನ. ನನಗೆ ಫ‌ಸ್ಟ್‌ ಕ್ಲಾಸ್‌ ಬರೋಲ್ಲಾಂತ ಗೊತ್ತು, ಅರಿಯರ್ಸ್‌ ಇಲ್ಲದಿದ್ದರೆ ಅದೇ ದೊಡ್ಡ ಸಾಧನೆ. ಜಸ್ಟ್‌, ಈ ತಿಂಗಳ ಕೊನೆಯವರೆಗೆ ಕಾದರೆ ಸಾಕು, ಶಿಶಿರದ ನಂತರ ವಸಂತನ ಆಗಮನ ಇದ್ದೇ ಇದೆ. ನಿನಗೂ ಆಲ್‌ ದ ಬೆಸ್ಟ್‌, ಚೆನ್ನಾಗಿ ಓದಿಕೋ, ಈ ತರಲೆಯ ತಂಟೆ ಇರದು. ಬೈ ‘

ಹೀಗೆ, ಒಂದು ತುಂಟ ನಗೆಯ ಇಮೋಜಿಯೊಂದಿಗೆ ಸೆಂಡ್‌ ಮಾಡಿದಳು.
ಎರಡೇ ನಿಮಿಷದಲ್ಲಿ ಅವನ ಉತ್ತರ ಬಂತು.
“ನಿನ್ನನ್ನು ತಪ್ಪು ತಿಳಿಯುವ ಪ್ರಶ್ನೆ ಯೇ ಇಲ್ಲ, ನನ್ನ ಸಹಕಾರವಿದೆ. ನಿನ್ನ ಪರೀಕ್ಷೆಗೆ ನನ್ನ ಶುಭಹಾರೈಕೆಗಳು’.

ರಾಜಿ, ಬೆಂಗಳೂರು.

Advertisement
Advertisement

Udayavani is now on Telegram. Click here to join our channel and stay updated with the latest news.

Next