Advertisement

ಕಾಲೇಜು ಕ್ಯಾಂಟೀನ್‌

03:50 AM Feb 24, 2017 | Team Udayavani |

ಕಾಲೇಜು ದಿನಗಳಲ್ಲಿ ಹಲವಾರು ತರಗತಿಗಳು. ಆದರೆ, ಎಲ್ಲರಿಗೂ ಎಲ್ಲವೂ ಹಿಡಿಸದು, ಹಿಡಿಸಬೇಕೆಂದೂ ಇಲ್ಲ. ಕ್ಲಾಸಿಗಿಂತ ಫ್ರೀಟೈಮ್‌ಗೆ ಕಾಯೋರೇ ಜಾಸ್ತಿ. ಫ್ರೀ ಏನಾದರೂ ಸಿಕ್ಕಿದರೆ ಹೆಚ್ಚಾಗಿ ಕ್ಯಾಂಟೀನ್‌ ಕಡೆ ನಡೆಯುವುದಿದೆ ಇಲ್ಲವೇ ಶುರುವಾಯಿತು ನೋಡಿ ಮಾತಿನ ಮಳೆ. ಸ್ನೇಹಿತರೆಲ್ಲರೂ ಒಟ್ಟಾಗಿಯೇ ಬಿಟ್ಟರು. ಟಾಪಿಕ್‌ ಏನೂ ಬೇಕಾಗಿಲ್ಲ, ಆದರೂ ಒಂದು ಮೂಲೆಯಿಂದ ಪ್ರಾರಂಭವಾದ ಮಾತು ಮುಗಿಯುವುದು ಇನ್ನೊಂದು ಮೂಲೆಯಲ್ಲಿ. ಸಮಯ ಕಡಿಮೆಯಾದರೂ ಬಂದು ಹೋಗುವ ವಿಷಯಗಳ ಸರಮಾಲೆ ದೊಡ್ಡದು.

Advertisement

ಹುಡುಗಿಯರಾದರೆ ಬೆಳಗಿನ ಉಪಹಾರದಿಂದ ಪ್ರಾರಂಭವಾದರೆ, ಏನಾದರೂ ವಿಶೇಷ ಬಗೆಯಾದರೆ ಅದನ್ನು ಮಾಡುವ ವಿಧಾನದವರೆಗೂ ಬರುತ್ತೇವೆ. ಮಾಡುತ್ತೇವೋ ಇಲ್ಲವೋ ಮುಂದಿನ ಮಾತು. ಉಡುಪಿನ ವಿನ್ಯಾಸಗಳ ಬಗ್ಗೆ ಒಂದಷ್ಟು ವಿವರಣೆ. ಇನ್ನು ಚಲನಚಿತ್ರ, ಧಾರಾವಾಹಿ, ಟಿ. ವಿ. ಕಾರ್ಯಕ್ರಮಗಳ ವಿಷಯ ಬಂದರೆ ಅದರ ಪಾತ್ರಧಾರಿಗಳು, ನಾಯಕ, ನಾಯಕಿಯರ ಚರಿತ್ರೆಯೇ ಬಂದು ಬಿಡುತ್ತದೆ. ಯಾರ¨ªೋ ಜೀವನದ ಮಾತು ಯಾರ¨ªೋ ಬಾಯಲ್ಲಿ ಅನ್ನುತ್ತಾರಲ್ಲ, ಹಾಗೆ- ಇದು ಕೂಡಾ. ಇನ್ನೂ ಸಮಯ ದೊರೆತರೆ ಕಣ್ಣೆದುರು ಹಾದವರ ಬಗ್ಗೆ ಕೆಲವು ಮಾತುಗಳು.

ಹುಡುಗರಾದರೆ ಆಟೋಟ ಗಳ ಮಾತು ಜಾಸ್ತಿ. ಅಲ್ಲದೆ ಹೇರ್‌ಸ್ಟೈಲ್ಸ…, ಡ್ರೆಸ್‌ ಮತ್ತು ಇಲೆಕ್ಟ್ರಾನಿಕ್‌ ಬ್ರಾಂಡ್‌ಗಳ ಬಗ್ಗೆ ಒಂದಷ್ಟು ಮಾತುಗಳು. ಪಕ್ಕದವನಿಗೆ ರೇಗಿಸುವುದೂ ಇದೆ, ಕಿತ್ತಾಡುವುದೂ ಇದೆ. ಮತ್ತೂ ಸಮಯ ಸಿಕ್ಕಿದಲ್ಲಿ ಏನಾದರೂ ಆಟ ಪ್ರಾರಂಭಿಸಿ ಬಿಡುತ್ತಾರೆ.

ನಿಜಹೇಳಬೇಕೆಂದರೆ, ಇವುಗಳಲ್ಲಿ ಬಹುತೇಕ ಉಪಯೋಗಕ್ಕೆ ಬರುವಂತಹದ್ದಲ್ಲ.ಆದರೂ ಏನೋ ಆ ಕ್ಷಣಗಳಲ್ಲಿ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನಬಹುದು. ಮನೆ ಮನದ ದುಃಖಗಳೇನಿದ್ದರೂ ಆ ಸಮಯದಲ್ಲಿ ಮಾಯವಾಗಿ ಬಿಡುತ್ತದೆ. ಅದು ಸ್ನೇಹ ಎಂಬ ಬಂಧದ ಮಾಯೆಯೇ ಇರಬಹುದು.

  ಮತ್ತೆ ತರಗತಿ ಪ್ರಾರಂಭವಾಗುವ ಸಮಯ ಬಂದದ್ದು ಗೊತ್ತೇ ಆಗದು. ಅದೇ ಸಮಯವನ್ನು ತರಗತಿಯಲ್ಲಿ ಕಳೆದಾಗ ಯಾವಾಗ ಮುಗಿಯುತ್ತದೆ ಎಂದು ಅನಿಸುವುದೂ ಉಂಟು.ಎಲ್ಲರೂ ಹೀಗೇ ಇರುತ್ತಾರೆಂದೇನಿಲ್ಲ. ಆದರೂ ಕಾಲೇಜಿನ ಫ್ರೀ ಟೈಮ್‌ನ ತಿರುಳು ಬೇರೆ ಯಾವುದೇ ಹಂತದಲ್ಲೂ ಸಿಗಲಾರದು ಎನ್ನಬಹುದು. ಅದಕ್ಕೆ ಇರಬೇಕು ಕಾಲೇಜ್‌ ಲೈಫ್ ಈಸ್‌ ಗೋಲ್ಡನ್‌ ಲೈಫ್ ಅಂತ ಹೇಳಿರೋದು.

Advertisement

ಎಚ್‌. ಶ್ರಾವ್ಯಾ, ಹಿರಿಯಡಕ ಎಂಜಿಎಂ ಕಾಲೇಜ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next