Advertisement

ಮನೆಗೋಡೆ ಕುಸಿದು ಇಬ್ಬರ ದುರ್ಮರಣ

11:49 PM Oct 28, 2019 | Team Udayavani |

ಅಫಜಲಪುರ: ತಾಲೂಕಿನ ದಿಕ್ಸಂಗಾ(ಕೆ) ಗ್ರಾಮದಲ್ಲಿ ಹಳೇ ಮಣ್ಣಿನ ಗೋಡೆ ಕುಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಗ್ರಾಮದ ಶಿವಕುಮಾರ ಹಿರೇಮಠ ಪುತ್ರಿ ಕಾವೇರಿ(20) ಹಾಗೂ ಮೊಮ್ಮಗಳು ವಿದ್ಯಾಶ್ರೀ(5) ಮೃತರು. ಇಬ್ಬರೂ ಜಮೀನಿನಿಂದ ಮರಳಿ ಮನೆಗೆ ಬರುತ್ತಿದ್ದರು.

Advertisement

ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ರಸ್ತೆಗೆ ಹೊಂದಿಕೊಂಡಿರುವ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಗೋಡೆ ಕುಸಿದ ಪರಿಣಾಮ ಇಬ್ಬರು ಮಣ್ಣಿನ ಕೆಳಗೆ ಸಿಲುಕಿಕೊಂಡಿದ್ದರು. ತಕ್ಷಣ ಹೊರ ತೆಗೆದು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next