Advertisement

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿ

07:43 AM Mar 12, 2019 | Team Udayavani |

ಮಾಲೂರು: ಲೋಕಾಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುರುಕಾದ ತಾಲೂಕು ಅಡಳಿತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಎಂ.ನಾಗರಾಜು, ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ,

Advertisement

ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಗಮನಕ್ಕೆ ತರಬೇಕು. ತಾಲೂಕಿನ ಎಲ್ಲಾ ಸಂಪರ್ಕ ರಸ್ತೆಗಳಲ್ಲಿ ತಕ್ಷಣದಿಂದಲೇ ಚೆಕ್‌ಪೋಸ್ಟ್‌ ಅರಂಭಿಸಿ ಪ್ರತಿ ವಾಹನವನ್ನೂ ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಪೊಲೀಸ್‌ ಅಧಿಕಾರಿಗಳ ಜೊತೆಗೆ ಎಸ್‌ಎಸ್‌ಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.

ಚುನಾವಣೆ ನೀತಿ ಸಂಹಿತೆ ತಕ್ಷಣದಿಂದ ಅರಂಭವಾಗಿರುವುದರಿಂದ ಜನಪ್ರತಿನಿಧಿಗಳು ಮೇಲೆ ಸೂಕ್ತ ಕ್ರಮವಹಿಸುವ ಜೊತೆಗೆ ಗುಪ್ತದಳದ ಅಧಿಕಾರಿಗಳು ಕಾಲಕಾಲಕ್ಕೆ ಚುನಾವಣಾ ಶಾಖೆಗೆ ಮಾಹಿತಿ ರವಾನಿಸುತ್ತಿರುವುದಿಂದ ಚುನಾವಣೆ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಭೇಕಾಗಿದೆ.

ರಾಜಕೀಯ ಮತ್ತು ಚುನಾಯಿತ ಜನಪ್ರತಿನಿಧಿಗಳು ಜನರಿಗೆ ಆಸೆ ಅಮಿಷ ಒಡ್ಡುವುದು ಕಂಡು ಬಂದರೆ ಕಡ್ಡಾಯವಾಗಿ ಪ್ರಕರಣ ದಾಖಲಿಸಬೇಕು. ಸೂಕ್ತ ದಾಖಲೆ ಸಂಗ್ರಹಿಸುವ ನಿಟ್ಟಿನಲ್ಲಿ ತಮ್ಮೊಂದಿಗೆ ವಿಡಿಯೋ ಚಿತ್ರೀಕರಣ ಸಿಬ್ಬಂದಿಗಳನ್ನು ಹೊಂದಿರಬೇಕಾಗಿದೆ ಎಂದರು. ಸಭೆಯಲ್ಲಿ ತಾಪಂ ಇಒ ಅನಂದ್‌, ಪೊಲೀಸ್‌ ವೃತ್ತನಿರೀಕ್ಷ ಬಿ.ಎಸ್‌.ಸತೀಶ್‌, ವಿವಿಧ ವಿಭಾಗಗಳ ಚುನಾವಣಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next