Advertisement

ತೆಂಗಿನ ಮರ ಬಿದ್ದು ವಿದ್ಯುತ್‌ ಸಂಪರ್ಕ ಸ್ಥಗಿತ

10:44 PM Jun 03, 2019 | Team Udayavani |

ಉಪ್ಪಿನಂಗಡಿ: ಭಾರೀ ಸಿಡಿಲು, ಮಳೆ ಹಾಗೂ ಗಾಳಿ ಅಬ್ಬರಕ್ಕೆ ಎರಡು ಮನೆಗಳಿಗೆ ಹಾನಿಯಾಗಿದ್ದು, ಹಿರೇಬಂಡಾಡಿ ರಸ್ತೆಯಲ್ಲಿ ತೆಂಗಿನಮರ ದಿಡೀರ್‌ ಬಿದ್ದು ವಿದ್ಯುತ್‌ ಕಂಬಗಳು ಮುರಿದು ವಾಹನ ಸಂಚಾರಕ್ಕೆ ತೊಡಕಾದ ಘಟನೆ ವರದಿಯಾಗಿದೆ.

Advertisement

ಸೋಮವಾರ ಬೆಳಗ್ಗಿನ ಜಾವ ಮೂರು ಗಂಟೆ ವೇಳೆಗೆ ಭಾರೀ ಗಾಳಿ ಹಾಗೂ ಸಿಡಿಲು ಉಂಟಾಗಿತ್ತು. ಹಿರೇ ಬಂಡಾಡಿ ರಸ್ತೆ ಸಮೀಪ ರಾಮ ನಗರ ತಿರುವು ರಸ್ತೆಯಲ್ಲಿ ತೋಟ ವೊಂದಕ್ಕೆ ಸಿಡಿಲು ಬಡಿದು ತೆಂಗಿನ ಮರ ಏಕಾಏಕಿ ವಿದ್ಯುತ್‌ ತಂತಿ ಗಳ ಮೇಲೆ ಜೋತು ಬಿದ್ದು ಸತತ ನಾಲ್ಕು ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ರಾಮನಗರ – ಹಿರೇಬಂಡಾಡಿ, ಒಳ ಕಡಮ, ಅಡೆಕಲ್ಲು, ಕೊçಲ ಮುಂತಾದ ಕಡೆಗಳಲ್ಲಿ ಗ್ರಾಹಕರಿಗೆ ಸಂಜೆಯ ವರೆಗೂ ವಿದ್ಯುತ್‌ ಸಂಪರ್ಕ ಇರಲಿಲ್ಲ.

ಇದೇ ವೇಳೆ ಪೆರಿಯಡ್ಕ ಕುಂಟಿನಿ ನಿವಾಸಿ ನಾರಾಯಣ ಸಪಲ್ಯ ಎಂಬವರ ಮನೆಯ ಸಮೀಪದ ಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದ್ದರೆ, 34ನೇ ನೆಕ್ಕಿಲಾಡಿ ಗ್ರಾಮದ ಕರುವೇಲು ನಿವಾಸಿ ಮಹಮ್ಮದ್‌ ಎಂಬವರ ಮನೆಗೆ ಮಾವಿನ ಮರದ ಗೆಲ್ಲು ಮುರಿದುಬಿದ್ದು ಪುಟ್ಟ ಮಕ್ಕಳು ತರಚಿ ಗಾಯಗಳಿಂದ ಪಾರಾಗಿದ್ದಾರೆ. ಮನೆಯ ಛಾವಣಿಗೆ ಹಾನಿಯಾಗಿದೆ.

ಸ್ಥಳಕ್ಕೆ ಕಂದಾಯ ನಿರೀಕ್ಷಕರಾದ ಜಯವಿಕ್ರಮ, ಗ್ರಾಮ ಕರಣಿಕರಾದ ರಮಾನಂದ ಚಕ್ಕಡಿ, ಚಂದ್ರ ನಾಯ್ಕ ಭೇಟಿ ನೀಡಿ, ನಷ್ಟದ ಕುರಿತು ವರದಿಯನ್ನು ತಯಾರಿಸಿದ್ದು, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ನಾಡಕಚೇರಿ, ಗ್ರಾಮ ಕರಣಿ ಕಚೇರಿ ಹಗಲಲ್ಲಿ ಮಾತ್ರ ತೆರೆದಿರುತ್ತವೆ. ರಾತ್ರಿ ವೇಳೆ ಪೊಲೀಸ್‌ ಠಾಣೆಯ ಮೊರೆ ಹೋಗಬೇಕಾಗುತ್ತದೆ. ನಾಡಕ ‌ಚೇರಿಯಲ್ಲಿ ದೂರವಾಣಿ ಸ್ತಬ್ಧಗೊಂಡಿದೆ. ಗ್ರಾಮಕರಣಿಕರ ಕಚೇರಿಗೆ ದೂರವಾಣಿ ಸಂಪರ್ಕವೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಂಟ್ರೋಲ್‌ ರೂಂ ಆರಂಭಿಸಿ
ಉಪ್ಪಿನಂಗಡಿಯಲ್ಲಿ ಪ್ರಾಕೃತಿಕ ವಿಕೋಪ ಪರಿಹಾರ ಕುರಿತಾದ ಸಭೆ ಮುಗಿದ 24 ಗಂಟೆಗಳೊಳಗೆ ಮಳೆ, ಗಾಳಿ, ಸಿಡಿಲಿನ ಅಬ್ಬರ ತೀವ್ರವಾಗಿದೆ. ಸಭೆಯಲ್ಲಿ ಪುತ್ತೂರು ತಾಲೂಕು ದಂಡಾಧಿಕಾರಿಗಳಾದ ಪ್ರದೀಪ್‌ ಕುಮಾರ್‌ ಅವರು ಯಾವುದೇ ತುರ್ತು ಸಂದರ್ಭದಲ್ಲೂ ಉಪ್ಪಿನಂಗಡಿ ಹೋಬಳಿ ಮಟ್ಟದ ನಾಡಕಛೇರಿಯಲ್ಲಿ ಸಾರ್ವಜನಿಕ ಸೇವೆಗಾಗಿ 24×7 ಅಧಿಕಾರಿಗಳನ್ನು ನಿಯೋಜನಿಸಲಾಗುವುದು. ಪ್ರತ್ಯೇಕ ಕಂಟ್ರೋಲ್‌ ರೂಮ್‌ ಸ್ಥಾಪಿಸಲಿದ್ದು, ಇದರ ಸೇವೆ ಪಡೆಯಬಹುದು ಎಂದು ತಿಳಿಸಿದರು. ಆದರೆ ಕಂಟ್ರೋಲ್‌ ರೂಂ ಆರಂಭವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next