Advertisement

ರೈತರ ಸಮಗ್ರ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಬದ್ಧ

12:32 PM Aug 19, 2018 | Team Udayavani |

ಸುರಪುರ: ರೈತರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ರೈತರಿಗಾಗಿ ಬಜೆಟ್‌ನಲ್ಲಿ ಕೂಡ ಸಾಕಷ್ಟು ಅನುದಾನ ಮೀಸಲಿರಿಸಲಾಗಿದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರೆಡ್ಡಿ ಹೇಳಿದರು. ತಾಲೂಕಿನ ಚಂದಲಾಪುರ ಗ್ರಾಮದಲ್ಲಿ ಕೃಷಿ ಹೊಂಡ ಪರಿಶೀಲಿಸಿ ನಂತರ ರೈತರೊಂದಿಗೆ ಸಂವಾದ ನಡೆಸಿದ ಅವರು, ರೈತರು ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡು, ಅದರಿಂದ ಜಮೀನುಗಳಿಗೆ ನೀರಾವರಿ ಮಾಡಿಕೊಳ್ಳುವುದರ ಮೂಲಕ ಬೆಳೆಗಳನ್ನು ಬೆಳೆಯಬೇಕು ಎಂದರು.

Advertisement

ರೈತರು ಪರ್ಯಾಯ ಬೆಳೆ ಬೆಳೆಯುವತ್ತ ಗಮನ ಹರಿಸಬೇಕು. ನಿರಂತರ ಆದಾಯ ಬರುವಂತೆ ನೂತನ ಕೃಷಿಯತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ ಅವರು, ಚಂದಲಾಪುರ ಗ್ರಾಮದ ರೈತರೊಬ್ಬರು 9 ಎಕರೆ ಜಮೀನಿನಲ್ಲಿ 40 ಲಕ್ಷ ರೂ. ಆದಾಯ ಪಡೆದುಕೊಂಡಿರುವುದು ಸಂತೋಷದ ಸಂಗತಿ. ಜೇನು ಸಾಗಾಣಿಕೆ, ಹೈನುಗಾರಿಕೆ, ಬೆಲೆ ಬಾಳುವ ದೀರ್ಘಾವಧಿ ಗಿಡಗಳಾದ ಸಾಗವಾನಿ, ರಕ್ತ ಚಂದನ ಸೇರಿದಂತೆ ಇತರೆ ಎಲ್ಲ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವುದು ಮೆಚ್ಚುಗೆ ವಿಷಯವಾಗಿದೆ.

ಇವರೊಬ್ಬ ಮಾದರಿ ರೈತ ಎಂದ ಸಂತಸ ವ್ಯಕ್ತಪಡಿಸಿದ ಅವರು, ಇದೇ ರೀತಿ ಸುತ್ತಮುತ್ತಲಿನ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯಬೇಕು ಎಂದು ಹೇಳಿದರು.

ಶಾಸಕ ಶರಣಬಸಪಗೌಡ ದರ್ಶನಾಪುರ, ಜಿಪಂ ವಿಪ ನಾಯಕ ಮರಿಲಿಂಗಪ್ಪ ನಾಯಕ ಕರ್ನಾಳ, ತಹಶೀಲ್ದಾರ್‌ ಸುರೇಶ ಅಂಕಲಗಿ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್‌, ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ, ವಿರುಪಾಕ್ಷಿ ಕರ್ನಾಳ, ದೇವರಾಜ್‌ ಮಕಾಶಿ, ಕೃಷಿ ಅಧಿಕಾರಿಗಳಾದ ಸುರೇಶ, ರಾಜೇಂದ್ರ, ಚನ್ನಪ್ಪಗೌಡ, ವೆಂಕಟೇಶ ದೇಸಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next