ಬೆಂಗಳೂರು: ಕುಮಾರಸ್ವಾಮಿ ಬಿಜೆಪಿ ಜತೆ ಬಂದಿದ್ದರೇ ಸಿಎಂ ಆಗುತ್ತಿರಲಿಲ್ಲ. ರೈತ ನಾಯಕ ಯಡಿಯೂರಪ್ಪ ಇರಬೇಕಾದರೇ ನಾವೇಕೆ ಸಿಎಂ ಸ್ಥಾನ ಬಿಟ್ಟು ಕೊಡುತ್ತಿದ್ದೇವು. ನಮ್ಮ ಯಡಿಯೂರಪ್ಪ ಅವರೇ ಸಿಎಂ ಆಗುತ್ತಿದ್ದರು. ಎಲ್ಲೂ ಬಿಜೆಪಿ ಅವರು ಸಿಎಂ ಸ್ಥಾನ ಬಿಟ್ಟು ಕೊಟ್ಟ ಇತಿಹಾಸ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಬಿಜೆಪಿ ಜೊತೆ ಸೇರಿದ್ದರೇ ನಾನೂ ಈಗಲೂ ಸಿಎಂ ಆಗಿರುತ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿ.ಎಂ ಕುಮಾರಸ್ವಾಮಿ ಅವರಿಗೆ, ಕಾಂಗ್ರೆಸ್ ಅವರು ಸಮಸ್ಯೆ ಮಾಡಿರುವುದು ಈಗ ಅರಿವಾಗಿದೆ. ಕಾಂಗ್ರೆಸ್ ವಿರೋಧಿ ಮತಗಳಿಂದಲೇ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿರುವುದು. ಈ ವಿಚಾರ ಅವರಿಗೆ ಈಗ ಮನವರಿಕೆ ಆಗಿದೆ ಎಂದರು.
ಕಾಂಗ್ರೆಸ್ ನವರಿಂದ ನಾನು ಹಾಳಾದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಗೋಪಾಲಯ್ಯ, ಕುಮಾರಸ್ವಾಮಿ ಅವರು ನೋವಿನಿಂದ ಈ ಮಾತು ಹೇಳಿದ್ದಾರೆ. ಅವರು ಕಾಂಗ್ರೆಸ್ ನವರ ಜೊತೆ ಎಷ್ಟು ದಿನ ಇದ್ದರೋ, ಅಷ್ಟು ದಿನವೂ ನೋವಿನಲ್ಲೇ ಇದ್ದರು. ಇಂದು ಅವರ ನೋವಿನ ಕಥೆಯನ್ನು ಜನತೆ ಮುಂದೆ ಬಿಚ್ಚಿಟ್ಟಿದ್ಸಾರೆ. ಇವಾಗಾದರೂ ಅವರಿಗೆ ನಮ್ಮಿಂದ (ಬಿಜೆಪಿ) ನೋವು ಆಗಿಲ್ಲ. ಕಾಂಗ್ರೆಸ್ ನವರಿಂದಲೇ ನೋವು ಆಗಿದೆ ಎಂಬ ವಿಚಾರ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಗೋಪಾಲಯ್ಯ ಟಾಂಗ್ ನೀಡಿದರು.
ಇದನ್ನೂ ಓದಿ: ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ
ಇಂದು ಸಿಎಂ ಯಡಿಯೂರಪ್ಪ ಬೆಳಗಾವಿಯಿಂದ ಸಿಹಿ ಸುದ್ದಿ ತರುವ ನಿರೀಕ್ಷೆಯಿದೆ. ಅಧಿವೇಶನ ಮುಂಚಿತವಾಗಿ ಮಂತ್ರಿಯಾಗುವ ನಿರೀಕ್ಷೆ ಹೊಂದಿದ್ದೇವೆ. ಈಗಾಗಲೇ ಸಂಪುಟ ವಿಸ್ತರಣೆ ತುಂಬಾ ತಡವಾಗಿದೆ. ಹೀಗಾಗಿ ಸಿಎಂ ಮಾತಿನ ಮೇಲೆ ನಂಬಿಕೆ ಇಟ್ಟು ಕಾಯುತ್ತಿದ್ದೇವೆ. ನಾಳೆ ಮಧ್ಯಾಹ್ನವೇ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ಮಾಡಬಹುದು ಎಂದು ಬೆಂಗಳೂರಿನಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆರ್ ಶಂಕರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ 2 ವರ್ಷಗಳ ಪ್ರೀತಿ: ವಿವಾಹದ ಸಿದ್ಧತೆಯಲ್ಲಿದ್ದ ಪ್ರೇಮಿಗಳ ಮೇಲೆ ಯುವತಿಯ ಮನೆಯವರಿಂದ ಹಲ್ಲೆ