Advertisement
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರದಿದ್ದರೂ ಬಿಜೆಪಿ ಕಳೆದ 12 ತಿಂಗಳಿನಿಂದ ಸರ್ಕಾರ ಉರುಳಿಸಲು ವಾಮಮಾರ್ಗದ ಮೂಲಕ ಪ್ರಯತ್ನ ಮುಂದುವರಿಸಿದೆ. ಬಿಜೆಪಿ ಆಪರೇಷನ್ ಕಮಲದ ನಿರಂತರ ಪ್ರಯತ್ನ ವಿಫಲಗೊಳಿಸಿದ್ದೇವೆ, ಶಾಸಕರನ್ನು ಹಣ ಕೊಟ್ಟು ಖರೀದಿಸಿ ಸರ್ಕಾರ ಕೆಡವಲು ನಡೆಸುವ ಪ್ರಯತ್ನ ಈಗಲೂ ಮುಂದುವರಿದಿರುವ ಸುಳಿವು ನಮಗೆ ಸಿಕ್ಕಿದೆ ಎಂದು ಹೇಳಿದರು.
Related Articles
Advertisement
ಸ್ಪಷ್ಟತೆ ಮೂಡಿದೆ: ಮೈತ್ರಿ ಸರ್ಕಾರ ಸಮನ್ವಯದಿಂದ ಕೆಲಸ ಮಾಡುತ್ತಿದೆ.
ನಮ್ಮ ಕೆಲವು ಸದಸ್ಯರು ಅಚಾತುರ್ಯದಿಂದ ಹೇಳಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ ಗೊಂದಲ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಗೊಂದಲಕ್ಕೆ ಎಡೆಮಾಡಿಕೊಟ್ಟಿರುವ ಹೇಳಿಕೆಗಳಿಗೆ ಇನ್ಮು ಮುಂದೆ ಅವಕಾಶ ನೀಡದಂತೆ ಎಚ್ಚೆತ್ತು ಸರ್ಕಾರವನ್ನು ಉಳಿಸಿ ಕೆಲಸ ಮಾಡುವ ಬಗ್ಗೆ ಸಚಿವರು, ಶಾಸಕರಲ್ಲಿ ಸ್ಪಷ್ಟತೆ ಮೂಡಿಸಲಾಗಿದೆ ಎಂದು ಹೇಳಿದರು.
ನಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ಗೊಂದಲ ಇದೆ ಎನ್ನುವಂತೆ ಕಾಣಲು ಬಿಡದಂತೆ ಎಚ್ಚೆತ್ತು ಕೆಲಸ ಮಾಡಬೇಕು. ಇನ್ನೂ ಸುಧಾರಣೆಗೆ ಅವಕಾಶ ಇದೆ. ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ 2 ಗಂಟೆಗಳ ಕಾಲ ಚರ್ಚೆ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಜನರಲ್ಲಿ ನಂಬಿಕೆ ತನ್ನಿ: ಇವಿಎಂ ಕುರಿತು ರಾಷ್ಟ್ರ ಮಟ್ಟದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಈ ಕುರಿತು ಜನರಲ್ಲಿ ಮತ್ತು ನಾಯಕರಲ್ಲಿ ವಿಶ್ವಾಸ, ನಂಬಿಕೆ ಮೂಡಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿಲ್ಲ. ಹೀಗಾಗಿ ಅನುಮಾನ ನಾನಾ ರೀತಿ ಮುಂದುವರಿಯುತ್ತಿದೆ. ಅನುಮಾನಕ್ಕೆ ಕೊನೆಯಾಡಲು ನ್ಯೂನ್ಯತೆ ಸರಿಮಾಡಿಕೊಂಡು ಜನರಲ್ಲಿ ನಂಬಿಕೆ ತರುವ ಕೆಲಸವನ್ನು ಯಾಕೆ ಮಾಡಲು ಆಗುತ್ತಿಲ್ಲ ಎಂಬುದಕ್ಕೆ ಆಯೋಗ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ದೂಷಿಸಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಾನು ಶಾಸಕನಾಗಿರುವ ಕ್ಷೇತ್ರದಲ್ಲೇ ನನಗೆ ಬಹುಮತ ಬಂದಿಲ್ಲ, ಆ ವಾತಾವರಣ ರಾಜ್ಯ ಮತ್ತು ರಾಷ್ಟ್ರದ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಕಂಡುಬಂದಿದೆ. ಈ ರೀತಿ ಇರುವಾಗ ಹಿನ್ನಡೆಗೆ ಬೇರೆ ವ್ಯಕ್ತಿಗಳ ಮೇಲೆ ದೂಷಣೆ ಮಾಡಲು ಹೋದರೆ ಸ್ವಕ್ಷೇತ್ರದಲ್ಲೇ ನನ್ನ ಹಿನ್ನಡೆಗೆ ನಾನು ಯಾರನ್ನು ದೂಷಿಸಲಿ ಎಂದು ಪ್ರಶ್ನಿಸಿದರು.
ಸೋಲಿಗೆ ಕಾರಣವಾದ ಅಂಶಗಳನ್ನು ವಿಮರ್ಶಿಸಿ, ಮೂಲ ಕಾರಣವನ್ನು ಆತ್ಮವಿಮರ್ಶೆ ಮಾಡಿಕೊಂಡರೆ ಭವಿಷ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಬಹುದು. ಸೋಲಿಗೆ ಮತ್ತೂಬ್ಬರ ಮೇಲೆ ಬೆರಳು ತೋರಿಸುವುದು ಕಾರ್ಯಸಾಧುವಲ್ಲ, ಸಮಸ್ಯೆಗೆ ಪರಿಹಾರವೂ ಅಲ್ಲ.
ಚುನಾವಣೆ ಸಂದರ್ಭದಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಆತ್ಮಾವಲೋಕನ ನಡೆಸಿ ಪಕ್ಷ ಕಟ್ಟುವ ಕುರಿತು ಚರ್ಚೆಯಾಗುತ್ತಿದ್ದು, ಮೈತ್ರಿ ಧರ್ಮ ಕಾಪಾಡಲು ಎಲ್ಲರೂ ಬದ್ಧರಾಗಿದ್ದೇವೆ ಎಂದರು. ಸಚಿವ ಶಿವಶಂಕರರೆಡ್ಡಿ, ಶಾಸಕ ಕೆ.ವೈ.ನಂಜೇಗೌಡ ಉಪಸ್ಥಿತರಿದ್ದರು.