Advertisement

“ಪೊಗರು’ಚಿತ್ರಕ್ಕೆ ಭರ್ಜರಿ ಕ್ಲೈಮ್ಯಾಕ್ಸ್‌

10:01 AM Aug 28, 2019 | Lakshmi GovindaRaj |

ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಸದ್ಯ “ಪೊಗರು’ ಚಿತ್ರದ ಆ್ಯಕ್ಷನ್‌ ದೃಶ್ಯಗಳನ್ನು ವಿಭಿನ್ನವಾಗಿ ಸೆರೆಹಿಡಿಯಲು ಯೋಜಿಸಿರುವ ಚಿತ್ರತಂಡ, ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ನಾಯಕ ಧ್ರುವ ಸರ್ಜಾ ಅವರೊಂದಿಗೆ ಕಾದಾಡಲು ಅಂತರಾಷ್ಟ್ರೀಯ ಮಟ್ಟದ ಜನಪ್ರಿಯ ಬಾಡಿ ಬಿಲ್ಡರ್ಸ್‍ಗಳನ್ನೆ ಕಣಕ್ಕಿಳಿಸುತ್ತಿದೆ.

Advertisement

ಹೌದು, ಡಬ್ಲ್ಯು.ಡಬ್ಲ್ಯು.ಇ ಕ್ರೀಡೆಯ ಮೂಲಕ ಸಾಕಷ್ಟು ಜನಪ್ರಿಯತೆಕೊಂಡಿರುವ ಮೋರ್ಗನ್‌ ಆಸ್ಟೆ, ಕೈಗ್ರೀನ್‌ , ಜಾನ್‌ ಲುಕಾಸ್‌, ಜೋಸ್ಥೆಟಿಕ್ಸ್‌ ಮೊದಲಾದ ಘಟಾನುಘಟಿಗಳು “ಪೊಗರು’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಸದ್ಯ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ “ಪೊಗರು’ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣದಲ್ಲಿರುವ ಚಿತ್ರತಂಡ, ಚಿತ್ರದ ಸೆಟ್‌ನಲ್ಲಿಯೇ ಮೋರ್ಗನ್‌ ಆಸ್ಟೆ ಅವರ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದೆ. ಈ ಸೆಲೆಬ್ರೇಷನ್‌ನ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದ್ದು, “ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಯಾರೆಲ್ಲ ಗುದ್ದಾಡಬಹುದು ಎನ್ನುವುದಕ್ಕೆ ಒಂದು ಮಟ್ಟಿಗೆ ಉತ್ತರ ಸಿಕ್ಕಂತಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next