ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಚಿತ್ವವಿಲ್ಲದೇ, ಸಕಾಲದಲ್ಲಿ ಬೇಕಾದ ಮೂಲ ಸೌಕರ್ಯಗಳು ದೊರಕದೆ ರೈತರು ಪರದಾಡುವಂತಾಗಿದೆ.
ಪ್ರತಿ ವರ್ಷವೂ ಕೋಟ್ಯಂತರ ರೂ. ವಹಿವಾಟು ನಡೆಸಿ ಲಾಭದಾಯಕವಾಗಿರುವ ಈ ಮಾರು ಕಟ್ಟೆ ಯಲ್ಲಿ ರೈತರಿಗೆ ವಿಶ್ರಾಂತಿ ಕೊಠಡಿ, ಶುದ್ಧ ಕುಡಿವ ನೀರು, ಶೌಚಾಲಯಗಳು, ಗುಂಡಿಬಿದ್ದ ರಸ್ತೆಗಳು, ಹರಾಜುಕಟ್ಟೆಗಳಿಗೆ ವಿದ್ಯುತ್ ಸಂಪರ್ಕ, ಹೋಟೆಲ್ ವ್ಯವಸ್ಥೆಗಳಿಲ್ಲದೆ ತೊಂದರೆ ಎದುರಿಸುವಂತಾಗಿದೆ.
ಆವರಣದೊಳಗೆ ಒಂದು ಸುತ್ತು ಹೊಡೆದರೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಕೊಳೆತ ತರಕಾರಿಗಳ ರಾಶಿಯನ್ನು ನಿರಂತರವಾಗಿ ತೆರವು ಗೊಳಿಸದೆ ಇರುವುದರಿಂದ ಎಲ್ಲೆಡೆ ಗಬ್ಬುನಾರುತ್ತಿದೆ. ದೂರ ದೂರುಗಳಿಂದ ಬರುವ ರೈತರು ಹರಾಜು ಪ್ರಕ್ರಿಯೆ ಮುಗಿಯುವವರೆಗೂ ಕಾಯಬೇಕಾಗಿದ್ದು ಇವರಿಗೆ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.
ಕಾಮಗಾರಿಗಳು ಅಪೂರ್ಣ: ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಓವರ್ ಹೆಡ್ ಟ್ಯಾಂಕ್, ಹೋಟೆಲ್ ಕಟ್ಟಡ, ಹರಾ ಜುಕಟ್ಟೆಗಳನ್ನು ನಿರ್ಮಿ ಸಿದ್ದರೂ ಸಹ ಗುತ್ತಿಗೆದಾರನಿಗೆ ಬಿಲ್ ಪಾವತಿಯಾ ಗದ ಕಾರಣ ಕಾಮಗಾರಿಗಳು ಅಪೂರ್ಣವಾಗಿವೆ.
ನೀರಿನ ಕೊರತೆ: ಸದ್ಯ ಪಟ್ಟಣಕ್ಕೆ ಸರಬರಾ ಜಾಗುತ್ತಿ ರುವ ಕಬಿನಿ ನೀರನ್ನೇ ಬಳಕೆಮಾಡಲಾಗುತ್ತಿದ್ದು, ನೀರಿನ ಕೊರತೆ ತೀವ್ರವಾಗಿದೆ. ಪ್ರತ್ಯೇಕ ಕೊಳವೆ ಕೊರೆಯಿಸುವವರೆಗೂ ಟ್ಯಾಂಕಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗದ ಪರಿಣಾಮ ಈಗಾಗಲೇ ಬಿರುಕುಬಿಡುತ್ತಿದೆ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸೇತುವೆಗಳ ಬಳಿ ಹಳ್ಳಗುಂಡಿಗಳನ್ನು ಮುಚ್ಚದೆ ಬಿಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.
ಬಯಲಲ್ಲೇ ಮೂತ್ರ ವಿಸರ್ಜನೆ: ಹೋಟೆಲ್ ಕಟ್ಟಡ ನಿರ್ಮಾಣವಾಗಿ ವರ್ಷವೇ ಕಳೆದರೂ ಇನ್ನೂ ಬಳಕೆಗೆ ತಂದಿಲ್ಲ. ಶುದ್ಧ ಕುಡಿಯುವ ನೀರು ಸರಬರಾಜು ಮಾಡದ ಪರಿಣಾಮ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಶೌಚಾಲಯಗಳಿಲ್ಲದ ಕಾರಣ ಎಲ್ಲರೂ ಬಯಲಿನಲ್ಲಿಯೇ ಮೂತ್ರ ವಿಸಜ ರ್ನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರೈತರ ಒತ್ತಾಯ: ವಾರ್ಷಿಕ ಎರಡು ಕೋಟಿ ರೂ.ಗೂ ಹೆಚ್ಚಿನ ಆದಾಯ ವಿರುವ ಈ ಮಾರುಕಟ್ಟೆಯಲ್ಲಿ ಶುಚಿತ್ವ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
● ಸೋಮಶೇಖರ್. ಎಸ್