Advertisement

ನಗರದ ಅಂದ ಹೆಚ್ಚಿಸುವ ವಿಶಿಷ್ಟ ಸೈಕಲ್ ಸ್ಟಾಂಡ್ಸ್‌

01:24 AM Sep 01, 2019 | sudhir |

ಉದ್ದೇಶ, ಪ್ರಯೋಜನ ಏನು

Advertisement

ಈ ರೀತಿಯ ಸೈಕಲ್ ಸ್ಟಾಂಡ್‌ಗಳು ನಿರ್ಮಾಣಗೊಂಡಾಗ ಜನ ಆದಷ್ಟು ಎಲ್ಲ ಸಂದರ್ಭದಲ್ಲೂ ಎಂಜಿನ್‌ ವಾಹನಗಳ ಬಳಕೆ ಮಾಡದೆ ಸೈಕಲ್ ಉಪಯೋಗಿಸುವ ಟ್ರೆಂಡ್‌ ನಿರ್ಮಿಸುವುದು. ಹೀಗೆ ನಗರದಲ್ಲಿ ಆದಷ್ಟು ವಾಹನದಟ್ಟನೆ ಕಡಿಮೆ ಆದಾಗ ಸಂಚಾರ ಮತ್ತು ಆರೋಗ್ಯಕರ ಪರಿಸರಕ್ಕೆ ಸಹಕಾರಿ. ವಿದೇಶದಲ್ಲಿ ಜನರನ್ನು ಸೈಕಲ್ ಪ್ರಿಯರನ್ನಾಗಿಸಲು ಹೊಟೇಲ್, ಮಾಲ್ಗಳು ಈ ರೀತಿಯ ವಿನೂತನ ಸ್ಟಾಂಡ್‌ಗಳ ನಿರ್ಮಾಣ ಮಾಡುತ್ತಿವೆ. ಸದ್ಯ ಪೋರ್ಟ್‌ಲ್ಯಾಂಡ್‌, ಸ್ಯಾನ್‌ ಫ್ರಾನ್ಸಿಸ್ಕೋ, ಸ್ವೀಡನ್‌ ನಗರಗಳಲ್ಲಿ ಈ ಸೈಕಲ್ ಸ್ಟಾಂಡ್‌ಗಳು ಇವೆ.

ನಮ್ಮ ನಗರದಲ್ಲೂ ಕಾಣಸಿಗಲಿ

ಅಭಿವೃದ್ಧಿ ವೇಗ ಪಡೆದುಕೊಂಡಂತೆ ನಮ್ಮ ಮಂಗಳೂರು ನಗರ ಕೂಡ ಅದಕ್ಕೆ ಬಹುಬೇಗನೆ ತೆರೆದುಕೊಳ್ಳುತ್ತಿದೆ. ನಗರದ ಅಂದವನ್ನು ಹೆಚ್ಚಿಸಲು ಸ್ಮಾರ್ಟ್‌ ನಗರದ ಕಲ್ಪನೆ ಮಂಗಳೂರಿಗೂ ಕಾಲಿಟ್ಟಿದೆ. ಹೀಗಾಗಿ ಸುಂದರ ನಗರದ ಎಲ್ಲ ವಿನೂತನ ಕೆಲಸಗಳನ್ನು ನಾವು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು.

ವಿನೂತನವಾಗಿ ನಮ್ಮ ನಗರ ಹೊರಜಗತ್ತಿಗೆ ಪರಿಚಿತವಾಗಬೇಕಾದರೆ ಇಂತಹ ಪ್ರಯೋಗಗಳು ನಗರಾಡಳಿತ ಅಥವಾ ಕೆಲವೊಂದು ಸಂಘಟನೆಗಳು ಕೈ ಜೋಡಿಸಬೇಕಾಗಿದೆ. ಇಂತಹ ಕ್ರಿಯಾತ್ಮಕ ಕಲ್ಪನೆಗಳು ಸ್ಮಾರ್ಟ್‌ ನಗರ ಕಲ್ಪನೆಗೆ ಹೊಸ ಅರ್ಥವನ್ನು ನೀಡುತ್ತವೆ. ಜತೆಗೆ ಜನರನ್ನು ಆಕರ್ಷಿಸುತ್ತದೆ ಕೂಡ.

Advertisement

– ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next