Advertisement

ಬಿಜೆಪಿ ಅವಧಿಯಲ್ಲಿ ನಗರ ಪ್ರಗತಿ ಕಂಡಿಲ್ಲ

03:01 PM Apr 12, 2018 | Team Udayavani |

ಕೆಂಗೇರಿ: ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಉದ್ಯಾನ ನಗರವನ್ನು ಗಾರ್ಬೇಜ್‌ ಸಿಟಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.

Advertisement

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ವತಿಯಿಂದ ಯಲಚೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ “ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಅರ್ದ ಡಜನ್‌ ಮುಖಂಡರು ವಿವಿಧ ಹಗರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಅದೆಲ್ಲವನ್ನೂ ಮರೆಮಾಚಿ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರಂಥ ಸುಳ್ಳುಗಾರರು ದೇಶದಲ್ಲಿ ಮತ್ತೂಬ್ಬರಿಲ್ಲ. ಸುಳ್ಳಿಗೆ ಪ್ರಶಸ್ತಿ ಏನಾದರೂ ಇದ್ದರೆ ಅದನ್ನು ಇವರಿಗೇ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಈ ಭಾಗದಿಂದ 25 ವರ್ಷಗಳಿಂದ ಬಿಜೆಪಿಯವರೇ ಸಚಿವ, ಶಾಸಕ, ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು ಮೂಲ ಸೌಲಭ್ಯಗಳನ್ನು ಶಾಸಕರು ಒದಗಿಸಿಲ್ಲ ಎಂದರು. ಬೆಂಗಳೂರು ಡೈರಿ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್‌, ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌, ಒ.ಮಂಜುನಾಥ್‌, ಜಿ.ಕೃಷ್ಣಪ್ಪ, ಮಹೇಶ್‌, ಪಾಲಿಕೆ ಸದಸ್ಯೆ ಶೋಭಾ ಗೌಡ, ಮಾಜಿ ಸದಸ್ಯ ಎಸ್‌.ಗಂಗಾಧರ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next