Advertisement

ಸಂಸತ್ತಿನಲ್ಲಿ ಬಿಸಿ ಚರ್ಚೆಯಾಗುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ

09:58 AM Dec 10, 2019 | Sriram |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಮಸೂದೆ ಸಂಸತ್ತಿನ ಮುಂದೆ ಭಾರೀ ಚರ್ಚೆಯಲ್ಲಿದೆ. ಈ ಮಸೂದೆಗೆ ಕೆಲವು ರಾಜ್ಯಗಳು ಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಏನಿದು ಮಸೂದೆ? ಯಾಕೆ ವಿರೋಧ ಇಲ್ಲಿ ನೀಡಲಾಗಿದೆ. ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಭಾರತ ಪ್ರವೇಶಿಸಿ ನೆಲೆಸಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್‌ ಧರ್ಮದ ಜನರಿಗೆ ಕಾಯಂ ಪೌರತ್ವ ನೀಡಲು 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಂಡಿಸಲು ಸರಕಾರ ಮುಂದಾಗಿದೆ.

Advertisement

ಈ ಮಸೂದೆಯ ಆಶಯವೇನು?
ಈ ಕಾಯಿದೆ ಪ್ರಕಾರ ಭಾರತಕ್ಕೆ ಹೊರದೇಶಗಳಿಂದ ಬಂದ ಅಲ್ಲಿನ ಅಲ್ಲಸಂಖ್ಯಾಂಕರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ನೆರೆಯ ಪಾಕ್‌, ಬಾಂಗ್ಲಾ ಮತ್ತು ಅಫ್ಘಾನಿಸ್ಥಾನದಲ್ಲಿ ವಾಸವಿದ್ದ ಅಲ್ಪಸಂಖ್ಯಾಂಕರು ಭಾರತಕ್ಕೆ ಬಂದು 6 ವರ್ಷವಾದರೆ ಅವರು ಇಲ್ಲಿನ ಪೌರತ್ವವನ್ನು ಪಡೆಯಲು ಅರ್ಹರಾಗುತ್ತಾರೆ. ದಿಲ್ಲಿ,ರಾಜಸ್ಥಾನ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಪಾಕಿಸ್ಥಾನ, ಬಾಂಗ್ಲಾ, ಅಫ್ಘಾನಿಸ್ತಾನದಿಂದ ಬಂದ ಹಿಂದು, ಸಿಖ್‌, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್‌ ಧರ್ಮದವರಿದ್ದು, ಅವರ ಬದುಕು ಸಂಕಷ್ಟದಲ್ಲಿದೆ. ಪಾಕಿಸ್ಥಾನದಿಂದ ಬಂದ ಹಿಂದೂಗಳು ಭಾರತದಲ್ಲಿ ಇದ್ದು ಅವರನ್ನು ರಕ್ಷಿಸಲಾಗುತ್ತದೆ.

ಹಳೆಯ ಕಾಯಿದೆ ಏನು?
ಮೂಲ ಪೌರತ್ವ ಕಾಯ್ದೆ 1955ರ ಪ್ರಕಾರ ನೆರೆಯ ಅಫ್ಘಾನಿಸ್ಥಾನ, ಪಾಕಿಸ್ಥಾನ, ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾಕರಾಗಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತಿತ್ತು.

ನೂತನ ನಿಯಮ ಏನು?
ಕೇಂದ್ರ ಸರಕಾರ ಈಗ ತಿದ್ದುಪಡಿಗೊಳಿಸಿ ಹೊಸದಾಗಿ ರೂಪಿಸಿರುವ ಮಸೂದೆಯಲ್ಲಿ ಅನ್ಯ ದೇಶದ ಮುಸ್ಲಿಂಮೇತರ ವಲಸಿಗರು ಭಾರತದಲ್ಲಿ 6 ವರ್ಷ ವಾಸವಿದ್ದರೆ ಅವರು ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ನಿರಾಶ್ರಿತ ವಲಸಿಗರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾದ ಅವಕಾಶವನ್ನು ಕೇಂದ್ರ ಕಲ್ಪಿಸಿದೆ. ಒಂದು ವೇಳೆ ಈ ಮಸೂದೆ ಜಾರಿಯಾದರೆ 2014ರ ಡಿಸೆಂಬರ್‌ 31ಕ್ಕೆ ಮೊದಲು ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಂ ಸಮುದಾಯದವರನ್ನು ಬಿಟ್ಟು ಅನ್ಯ ಧರ್ಮೀಯರು ಭಾರತೀಯ ಪೌರತ್ವವನ್ನು ಪಡೆಯಲಿದ್ದಾರೆ.

ವಿರೋಧ ಯಾತಕೆ?
ಈ ಮಸೂದೆ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪ ಸಂಖ್ಯಾಕರಾಗಿ ಬದಲಾಗಲಿದ್ದಾರೆ. ಈಶಾನ್ಯ ರಾಜ್ಯಗಳು ಕಾಶ್ಮೀರದಂತೆ ಬದಲಾಗಲಿವೆ. ಮುಸ್ಲಿಂ ಸಮುದಾಯವನ್ನು ಇದರಿಂದ ಹೊರಗಿಟ್ಟಿದ್ದು ಅಸಂವಿಧಾನಿಕವಾಗಿದೆ ಎಂಬ ಕಾರಣಕ್ಕೆ ಕೇಂದ್ರದ ಈ ನೂತನ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್‌, ಟಿಎಂಸಿ, ಸಿಪಿಐ(ಎಂ), ಸೇರಿದಂತೆ ಅನೇಕ ಪಕ್ಷಗಳು ವಿರೋಧಿಸಿವೆ. ಆಡಳಿತರೂಢ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಅಸ್ಸಾಂ ಗಣ ಪರಿಷತ್‌ ಹಿಂಪಡೆದಿತ್ತು.

Advertisement

ಕೆಲವು ರಾಜ್ಯಗಳಿಗೆ ವಿನಾಯಿತಿ
ಸಂವಿಧಾನದ 6ನೇ ಶೆಡ್ನೂಲ್‌ ವ್ಯಾಪ್ತಿಗೆ ಬರುವ, ಸ್ವಾಯತ್ತ ಬುಡಕಟ್ಟು ಪ್ರದೇಶಗಳಾದ ಅಸ್ಸಾಂ, ಮೈಘಾಲಯ, ತ್ರಿಪುರಾ, ಮಿಜೋರಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ ರಾಜ್ಯಗಳು ಸಿಎಬಿಗೆ ಒಳಪಟ್ಟಿಲ್ಲ. ಹಿಂದಿನ ಪೌರತ್ವ ಕಾಯ್ದೆಯಲ್ಲಿ ಈಶಾನ್ಯದ ಈ ಭಾಗಗಳಿಗೆ ವಿನಾಯಿತಿ ಇರಲಿಲ್ಲ. ಇದೀಗ ಒತ್ತಾಯದ ಮೇರೆಗೆ ವಿನಾಯಿತಿಯನ್ನು ಆಯಾ ರಾಜ್ಯಗಳು ಗಿಟ್ಟಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next