Advertisement

ಸಾವಿಗೆ ರಹದಾರಿಯಾದ ಸರ್ಕಲ್‌

03:55 PM May 31, 2018 | |

ಮಧುಗಿರಿ: ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಪೋಲಿಸ್‌, ಪುರಸಭೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಇಲಾಖೆಗಳ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿನ ರಸ್ತೆಯಲ್ಲಿ ಜನಸಾಮಾನ್ಯರು ಜೀವ ಕಳೆದು ಕೊಳ್ಳುವಂತಾಗಿದೆ.

Advertisement

ಪಟ್ಟಣದ ಶಿರಾಗೇಟ್‌ ಬಳಿ ಲೋಕೋಪಯೋಗಿ ಕಚೇರಿ ಮುಂಭಾಗ ರಾಜ ಚಿಕ್ಕಪ್ಪಗೌಡ ವೃತ್ತವಿದ್ದು, ಮೂರು
ದಿಕ್ಕಿಗೂ ರಸ್ತೆಯ ತಿರುವಿದೆ. ಇಲ್ಲಿ ಯಾವುದೇ ನಾಮಫಲಕವಾಗಲಿ, ರಸ್ತೆ ಸುರಕ್ಷತೆ ಕ್ರಮವೂ ಇಲ್ಲಿಲ್ಲ. ಇದರಿಂದಾಗಿ ಹಲವಾರು ಅಪಘಾತಗಳು ನಡೆದು ಜನಸಾಮಾನ್ಯನ ಬದುಕು ಬೀದಿಗೆ ಬಿದ್ದಿದೆ.

ರಸ್ತೆ ಉಬ್ಬು ನಿರ್ಮಿಸಿಲ್ಲ: ಇದೇ ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳಾ ಪೋಲಿಸ್‌ ಪೇದೆ ಲಕ್ಷ್ಮಮ್ಮ(30) ಭಾರಿ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯ ಗೊಂಡಿದ್ದಾರೆ. ಬಲಗೆ„ ತೋಳು ಮುರಿದು ಸೊಂಟಕ್ಕೆ ಗಂಭೀರ ಗಾಯವಾ ಗಿದ್ದು, ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ರಸ್ತೆ ಉಬ್ಬು ಇಲ್ಲದ ಕಾರಣ ವೇಗವಾಗಿ ಬರುವ ವಾಹನಗಳಿಂದ ಇಂತಹ ಅಪಘಾತಗಳು ಸದಾ ನಡೆಯುತ್ತಿರುತ್ತವೆ.

ಅನಧಿಕೃತ ಪೆಟ್ಟಿಗೆ ಅಂಗಡಿಗಳು: ಈ ಸರ್ಕಲ್‌ ನಲ್ಲಿ ಬೆಸ್ಕಾಂ ಇಲಾಖೆ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಮತ್ತು ವಸತಿ ಗೃಹಗಳಿದ್ದು, ತಾಪಂ ನೂತನ ಕಟ್ಟಡವಿದೆ. ಅನತಿ ದೂರದಲ್ಲಿ ಸಿದ್ದಾರ್ಥ ಶಾಲೆಯಿದ್ದು ಮಕ್ಕಳು ಜೀವ ಕೈಲಿ ಹಿಡಿದು ರಸ್ತೆ ದಾಟಬೇಕಿದೆ. ತಾಪಂ ಕಚೇರಿ ಮುಂಭಾಗ ಹಲವಾರು ಅನಧಿಕೃತ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿವೆ. ಇದರಿಂದ ಸರ್ಕಲ್‌ ತಿರುವು ಸಹ ಕಾಣಸಿದಂತಾಗಿದ್ದು, ಮೂರೂ ಕಡೆ ರಸ್ತೆ ಸುರಕ್ಷತೆಗೆ ಯಾವ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವೈನ್‌ ಶಾಪ್‌ ಉಳಿಸುವ ಸಲುವಾಗಿ ಹಿಂದಿನ ಸರಕಾರದ ಅವಯಲ್ಲಿ ಸುಪ್ರೀಂಕೋರ್ಟ್‌ ಪಟ್ಟಣದೊಳಗೆ ಬರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ವಹಿಸಿ ವೈನ್‌ ಶಾಪ್‌ಗ್ಳನ್ನು ಉಳಿಸಿ ಕೈತೊಳೆದುಕೊಂಡಿತು. ಆದರೆ ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ಸ್ಥಳೀಯ ಸಂಸ್ಥೆಗಳು ಇಂತಹ ಬೃಹತ್‌ ರಸ್ತೆಯನ್ನು ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿಪಡಿಸಲು ಅಸಾಧ್ಯ ವಾಗಿದೆ. 

ಸಂಬಂಧಪಟ್ಟವರು ಈಗಲಾದರೂ ಪಟ್ಟಣದಲ್ಲಿನ ಇಂತಹ ಅಪಾಯಕಾರಿ ಸ್ಥಳದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಅಗತ್ಯ ರಸ್ತೆ ಸುರಕ್ಷತೆಯನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯು ನಮ್ಮ ಪರಿಮಿತಿಗೆ ಬರುವುದಿಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಸೂಚನೆ ನೀಡಿದರೆ ಅಥವಾ ಸಾರ್ವಜನಿಕರಿಂದ ದೂರು ಕೇಳಿಬಂದರೆ ಅಗತ್ಯ ಕ್ರಮಕ್ಕೆ ಶಿಫಾರಸು
ಮಾಡಲಾಗುವುದು. 
ಮಾರುತಿಶಂಕರ್‌, ಮುಖ್ಯಾಧಿಕಾರಿ, ಪುರಸಭೆ.

ರಾಜ ಚಿಕ್ಕಪ್ಪಗೌಡ ವೃತ್ತದಲ್ಲಿ ರಸ್ತೆ ಸುರಕ್ಷತಾ ಕ್ರಮಕ್ಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟವರು ಇನ್ನಾದರೂ ಸೂಕ್ತ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲಿ. 
ಮಂಜುನಾಥ್‌, ನಾಗರಿಕ.

ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next